'ನಾನು ಅನ್ನು ಚಾಂಪಿಯನ್ ಮಾಡುತ್ತೇನೆ...' ಒಂದೇ ಓವರ್‌ʼನಲ್ಲಿ 6 ಸಿಕ್ಸರ್ ಬಾರಿಸಿದ ಸ್ಟಾರ್‌ ಕ್ರಿಕೆಟಿಗನ ಸೆನ್ಸೇಷನಲ್ ಹೇಳಿಕೆ!! ಹಾಗಿದ್ರೆ ಈ ಸಲಾ ಕಪ್‌ ನಮ್ದೆ! : ಪ್ರಿಯಾಂಶ್ ಆರ್ಯ ಇತ್ತೀಚೆಗೆ ದೆಹಲಿ ಪ್ರೀಮಿಯರ್ ಲೀಗ್ ಟಿ 20 ಸಮಯದಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ ಬಾರಿಸುವುದರ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದರು.. ಈ ಪ್ರದರ್ಶನ ಅವರಿಗೆ ನ್ಯೂ ಸಿಕ್ಸರ್ ಕಿಂಗ್ ಎಂಬ ಹೆಸರನ್ನು ತಂದುಕೊಟ್ಟಿತು. ಪ್ರಿಯಾಂಶ್ ಆರ್ಯ ಇತ್ತೀಚೆಗೆ ದೆಹಲಿ ಪ್ರೀಮಿಯರ್ ಲೀಗ್ ಟಿ 20 ಸಮಯದಲ್ಲಿ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ ಹೊಡೆಯುವದರ ಮೂಲಕ ಸುದ್ದಿಯಲ್ಲಿದ್ದಾರೆ.. ಈ ಪ್ರದರ್ಶನ ಅವರಿಗೆ ಹೊಸ ಸಿಕ್ಸರ್ ಕಿಂಗ್ ಎಂಬ ಹೆಸರನ್ನು ತಂದುಕೊಟ್ಟಿತು. ಹೀಗಾಗಿ ಅವರು ಮುಂದಿನ ದಿನಗಳಲ್ಲಿ ಐಪಿಎಲ್‌ನಲ್ಲಿ ಆಡುವುದನ್ನು ಕಾಣಬಹುದು. ದೆಹಲಿ ಪ್ರೀಮಿಯರ್ ಲೀಗ್‌ನಲ್ಲಿ ಪ್ರಿಯಾಂಶ್ ಆರ್ಯ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ‘ಈ’ ತಂಡದ ಪರ ಆಡುವ ಆಸೆಇತ್ತೀಚೆಗೆ ಸಂದರ್ಶನದಲ್ಲಿ ಪ್ರಿಯಾಂಶ್ ಆರ್ಯ ಕೆಲವು ವಿಷಯಗಳನ್ನು ಹೇಳಿದ್ದಾರೆ. ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಆಸೆಯನ್ನು ಈ ಆಟಗಾರ ವ್ಯಕ್ತಪಡಿಸಿದ್ದಾರೆ. "ವಿರಾಟ್ ಕೊಹ್ಲಿ ನನ್ನ ನೆಚ್ಚಿನ ಕ್ರಿಕೆಟಿಗನಾಗಿರುವುದರಿಂದ ಐಪಿಎಲ್‌ನಲ್ಲಿ ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲು ಬಯಸುತ್ತೇನೆ.. ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ ಟ್ರೋಫಿ ಗೆಲ್ಲುವಲ್ಲಿ ಆರ್‌ಸಿಬಿ ವಿಫಲವಾಗಿದೆ. ಹಾಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಮಾಡಲು ನನ್ನ ಶೇಕಡಾ 100 ರಷ್ಟು ಕೊಡುಗೆ ನೀಡುತ್ತೇನೆ" ಎಂದು ಹೇಳಿದ್ದಾರೆ.. ‌ ಇದನ್ನೂ ಓದಿ- ಅಲ್ಲದೇ "ವಿರಾಟ್ ಕೊಹ್ಲಿ ನನಗೆ ಸ್ಫೂರ್ತಿ.. ಅವರು ಭಾರತಕ್ಕಾಗಿ ರನ್ ಗಳಿಸುತ್ತಲೇ ಇರುತ್ತಾರೆ.. ಹಾಗಾಗಿ ನಾನು ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡಲು ಬಯಸುತ್ತೇನೆ" ಎಂದು ವಿರಾಟ್‌ ಮೇಲಿನ ಅಭಿಮಾನವನ್ನು ಹೇಳಿಕೊಂಡಿದ್ದಾರೆ. ಪ್ರಿಯಾಂಶ್ ಆರ್ಯ ಅವರ ಪವರ್ ಫುಲ್ ಬ್ಯಾಟಿಂಗ್ ಅಭಿಮಾನಿಗಳಲ್ಲಿ ನಿರಂತರವಾಗಿ ಚರ್ಚೆಯಾಗುತ್ತಿದೆ. ಐಪಿಎಲ್ ಮೆಗಾ ಹರಾಜಿನಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಭಾರಿ ಮೊತ್ತಕ್ಕೆ ಖರೀದಿಸಬಹುದು ಎಂದು ನಂಬಲಾಗಿದೆ. ಐಪಿಎಲ್ 2025 ರಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಖರೀದಿಸಲು ಹಲವು ತಂಡಗಳು ಆಸಕ್ತಿ ತೋರಿಸಬಹುದು. ಅನೇಕ ಫ್ರಾಂಚೈಸಿಗಳಿಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳ ಅಗತ್ಯವಿದೆ. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...