ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್‌ ಪಡೆದು ಕ್ರಿಕೆಟ್‌ ಲೋಕಕ್ಕೆ ಗುಡ್‌ ಬೈ ಹೇಳಿದ ವಿಶ್ವದ 4 ಶ್ರೇಷ್ಠ ಬೌಲರ್‌ʼಗಳು ಇವರೇ! : ಈ ಕ್ರಿಕೆಟಿಗರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಕಷ್ಟು ವಿಕೆಟ್‌ʼಗಳನ್ನು ಪಡೆದಿದ್ದಾರೆ. ಕುತೂಹಲಕಾರಿ ವಿಷಯವೆಂದರೆ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದ ಕೊನೆಯ ಎಸೆತದಲ್ಲಿಯೂ ವಿಕೆಟ್ ಕಬಳಿಸಿದ್ದು ದೊಡ್ಡ ಕೌತುಕ. :ಅಂತಾರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ವಿಕೆಟ್ ಪಡೆಯುವುದು ಪ್ರತಿಯೊಬ್ಬ ಬೌಲರ್‌ʼನ ದೊಡ್ಡ ಕನಸು. ಬ್ಯಾಟ್ಸ್‌ಮನ್‌ಗಳನ್ನು ಬಲೆಗೆ ಬೀಳಿಸಲು ಬೌಲರ್‌ʼಗಳು ವಿಭಿನ್ನ ವಿಧಾನಗಳನ್ನು ಪ್ರಯತ್ನಿಸುತ್ತಾರೆ. ಆದರೆ ನಾವಿಂದು ವಿಶೇಷ ವರದಿಯೊಂದನ್ನು ನಿಮ್ಮ ಮುಂದಿಡಲಿದ್ದೇವೆ. ಇದರಲ್ಲಿ ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್‌ ಪಡೆದ 4 ಶ್ರೇಷ್ಠ ಬೌಲರ್‌ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದನ್ನೂ ಓದಿ: ಈ ಕ್ರಿಕೆಟಿಗರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಸಾಕಷ್ಟು ವಿಕೆಟ್‌ʼಗಳನ್ನು ಪಡೆದಿದ್ದಾರೆ. ಕುತೂಹಲಕಾರಿ ವಿಷಯವೆಂದರೆ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದ ಕೊನೆಯ ಎಸೆತದಲ್ಲಿಯೂ ವಿಕೆಟ್ ಕಬಳಿಸಿದ್ದು ದೊಡ್ಡ ಕೌತುಕ. ಇಂದು ನಾವು ತಮ್ಮ ವೃತ್ತಿಜೀವನದ ಕೊನೆಯ ಎಸೆತದಲ್ಲಿ ವಿಕೆಟ್ ಪಡೆದ ಅಂತಹ 4 ಬೌಲರ್‌ʼಗಳ ಪಟ್ಟಿಯನ್ನು ನಿಮ್ಮ ಮುಂದಿಡಲಿದ್ದೇವೆ. ಮುತ್ತಯ್ಯ ಮುರಳೀಧರನ್:ಕ್ರಿಕೆಟ್ ಇತಿಹಾಸದ ಶ್ರೇಷ್ಠ ಸ್ಪಿನ್ನರ್‌ʼಗಳಲ್ಲಿ ಒಬ್ಬರಾದ ಮುತ್ತಯ್ಯ ಮುರಳೀಧರನ್ ತಮ್ಮ ಮಾಂತ್ರಿಕ ಬೌಲಿಂಗ್‌ʼಗೆ ಪ್ರಸಿದ್ಧರಾಗಿದ್ದರು. ದೊಡ್ಡ ದೊಡ್ಡ ಬ್ಯಾಟ್ಸ್‌ಮನ್‌ʼಗಳಿಗೂ ಸಹ ಸಿಂಹಸ್ವಪ್ನವಾಗಿ ಕಾಡಿದ್ದರು ಇವರು. ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ʼನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅಂದಹಾಗೆ ಮುರಳೀಧರನ್ ಟೆಸ್ಟ್ ಕ್ರಿಕೆಟ್‌ನಲ್ಲಿ 800 ಮತ್ತು ಏಕದಿನ ಕ್ರಿಕೆಟ್‌ʼನಲ್ಲಿ 534 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ತಮ್ಮ ಟೆಸ್ಟ್ ವೃತ್ತಿಜೀವನದ ಕೊನೆಯ ಎಸೆತದಲ್ಲಿ ಭಾರತದ ಪ್ರಗ್ಯಾನ್ ಓಜಾ ಅವರ ವಿಕೆಟ್ ಪಡೆದಿದ್ದರು. ಗ್ಲೆನ್ ಮೆಕ್‌ಗ್ರಾತ್:ಆಸ್ಟ್ರೇಲಿಯಾದ ಮಾರಕ ಬೌಲರ್‌ಗಳಲ್ಲಿ ಒಬ್ಬರಾದ ಗ್ಲೆನ್ ಮೆಕ್‌ಗ್ರಾತ್ ನಿಖರವಾದ ಲೈನ್ ಲೆಂಗ್ತ್‌ʼಗಾಗಿ ಪ್ರಸಿದ್ಧರಾಗಿದ್ದಾರೆ. ಬೌಲಿಂಗ್ ಚಕ್ರವರ್ತಿ ಎಂದೂ ಇವರನ್ನು ʼಕರೆಯಲಾಗುತ್ತಿತ್ತು. ಕಣ್ಣು ಮಿಟುಕಿಸುವಷ್ಟರಲ್ಲಿ ಮೈದಾನದಿಂದ ಹೊರಬರುವ ದಾರಿಯನ್ನು ತೋರಿಸುತ್ತಿದ್ದ ಬ್ಯಾಟ್ಸ್‌ಮನ್‌ನ ದೊಡ್ಡ ಶತ್ರು ಎಂದರೆ ಇವರೇ. ಇವರು ತಮ್ಮ ಟೆಸ್ಟ್ ವೃತ್ತಿಜೀವನದ ಕೊನೆಯ ಎಸೆತದಲ್ಲಿ ಇಂಗ್ಲೆಂಡ್‌ʼನ ಜೇಮ್ಸ್ ಆಂಡರ್ಸನ್ ಅವರನ್ನು ಔಟ್ ಮಾಡಿದ್ದಾರೆ. ರಿಚರ್ಡ್ ಹ್ಯಾಡ್ಲಿ:ರಿಚರ್ಡ್ ಹ್ಯಾಡ್ಲೀ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ನ್ಯೂಜಿಲೆಂಡ್ ಪರ 86 ಟೆಸ್ಟ್ ಪಂದ್ಯಗಳಲ್ಲಿ 431 ವಿಕೆಟ್ ಪಡೆದಿದ್ದಾರೆ. ಹ್ಯಾಡ್ಲೀ ಅವರು ತಮ್ಮ ವೃತ್ತಿಜೀವನದ ಕೊನೆಯ ಎಸೆತದಲ್ಲಿ ಇಂಗ್ಲೆಂಡ್‌ʼನ ಡಿ ಮಾಲ್ಕಮ್‌ʼರನ್ನು ಬೌಲ್ಡ್‌ ಮಾಡಿದ್ದರು. ಇದನ್ನೂ ಓದಿ: ಲಸಿತ್ ಮಾಲಿಂಗ:ಜಗತ್ತಿನ ವಿಶೇಷ ಯಾರ್ಕರ್ ಕಿಂಗ್ ಎಂದೇ ಖ್ಯಾತರಾಗಿರುವ ಲಸಿತ್ ಮಾಲಿಂಗ ಶ್ರೀಲಂಕಾದ ಮಾರಕ ಬೌಲರ್‌ʼಗಳಲ್ಲಿ ಒಬ್ಬರು. ಮಾಲಿಂಗ ತಮ್ಮ ವೃತ್ತಿ ಜೀವನದ ಕೊನೆಯ ಎಸೆತದಲ್ಲಿ ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ ಅವರ ವಿಕೆಟ್ ಪಡೆದಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...