ಟೀಂ ಇಂಡಿಯಾದ ದಿಗ್ಗಜ ಆಲ್‌ ರೌಂಡರ್ ಮುದ್ದಿನ ಮಡದಿ ನಿಧನ: “ನನ್ನ ಪತ್ನಿ ಇನ್ನಿಲ್ಲ...” ಎನ್ನುತ್ತಾ ಕಣ್ಣೀರು ಸುರಿಸಿದ ಕ್ರಿಕೆಟಿಗ “ನನ್ನ ಪತ್ನಿ ಪೂನಂ ಇನ್ನಿಲ್ಲ. ಮಧ್ಯಾಹ್ನ 12:40 ಕ್ಕೆ ಸ್ವರ್ಗಸ್ಥಳಾಗಿದ್ದಾಳೆ” ಎಂದು ಬರೆದುಕೊಂಡಿದ್ದಾರೆ. ಇನ್ನು ಕೀರ್ತಿ ಆಜಾದ್ ಅವರ ಪತ್ನಿ ಪೂನಂ ಝಾ ನಿಧನಕ್ಕೆ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ. : ಭಾರತದ ಮಾಜಿ ಆಲ್‌ ರೌಂಡರ್ ಮತ್ತು ಟಿಎಂಸಿ ಸಂಸದ ಕೀರ್ತಿ ಆಜಾದ್ ಪತ್ನಿ ಪೂನಂ ಝಾ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಇಂದು ಇಹಲೋಕ ತ್ಯಜಿಸಿದ್ದಾರೆ. ಈ ವಿಚಾರವನ್ನು ಸ್ವತಃ ಕೀರ್ತಿ ಆಜಾದ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಶೇರ್‌ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಇದನ್ನೂ ಓದಿ: “ನನ್ನ ಪತ್ನಿ ಪೂನಂ ಇನ್ನಿಲ್ಲ. ಮಧ್ಯಾಹ್ನ 12:40 ಕ್ಕೆ ಸ್ವರ್ಗಸ್ಥಳಾಗಿದ್ದಾಳೆ” ಎಂದು ಬರೆದುಕೊಂಡಿದ್ದಾರೆ. ಇನ್ನು ಕೀರ್ತಿ ಆಜಾದ್ ಅವರ ಪತ್ನಿ ಪೂನಂ ಝಾ ನಿಧನಕ್ಕೆ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕೀರ್ತಿ ಆಜಾದ್ ಅವರು ಬಿಹಾರದ ನಿವಾಸಿಯಾಗಿದ್ದ ಪೂನಂ ಅವರನ್ನು ಏಪ್ರಿಲ್ 1986 ರಲ್ಲಿ ವಿವಾಹವಾಗಿದ್ದರು. ಅದೊಂದು ಅರೇಂಜ್ಡ್ ಮ್ಯಾರೇಜ್. ಆದರೆ ಕೀರ್ತಿ ಆಜಾದ್ ಮೊದಲ ನೋಟದಲ್ಲೇ ಪೂನಂರನ್ನು ಪ್ರೀತಿಸಿದ್ದೆ ಎಂದು ಹೇಳಿದ್ದರು. “ನಮ್ಮದು ಅರೇಂಜ್ಡ್ ಮ್ಯಾರೇಜ್. ಪಾಟ್ನಾ ಮಹಿಳಾ ಪದವಿ ಕಾಲೇಜಿನಲ್ಲಿ ಆಕೆ ಓದುತ್ತಿದ್ದಳು. ಹೀಗಾಗಿ ನಾನು ಮತ್ತು ನನ್ನ ತಾಯಿ ಆಕೆಯನ್ನು ನೋಡಲೆಂದು ಅಲ್ಲಿಗೆ ಹೋಗಿದ್ದೆವು” ಎಂದು ಹೇಳಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...