ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌'ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ಬ್ಯಾಡ್ಮಿಂಟನ್‌ʼನಲ್ಲಿ ಬಂಗಾರ ಗೆದ್ದ ನಿತೇಶ್ ಕುಮಾರ್ನಿತೇಶ್ ಕುಮಾರ್ : ನಿತೀಶ್ ಕುಮಾರ್ ಮತ್ತು ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ನಡುವೆ ಚಿನ್ನದ ಪದಕದ ಪಂದ್ಯದಲ್ಲಿ ಕಠಿಣ ಪೈಪೋಟಿ ಏರ್ಪಟ್ಟಿತ್ತು. ಪಂದ್ಯದ ಮೊದಲ ಸೆಟ್ ನಿತೇಶ್ ಕುಮಾರ್ ಹೆಸರಿನಲ್ಲಿತ್ತು. ಈ ಸೆಟ್ ಅನ್ನು 21-14 ರಿಂದ ಗೆದ್ದುಕೊಂಡರು 2024: ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಭಾರತ ತನ್ನ ಎರಡನೇ ಚಿನ್ನದ ಪದಕವನ್ನು ಪಡೆದುಕೊಂಡಿದೆ. ಈ ಪದಕವನ್ನು ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ ನಿತೀಶ್ ಕುಮಾರ್ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ SL3 ನಲ್ಲಿ ಗೆದ್ದಿದ್ದಾರೆ. ಇದರೊಂದಿಗೆ ಭಾರತ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಒಟ್ಟು 9 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇದನ್ನೂ ಓದಿ: ನಿತೇಶ್ ಕುಮಾರ್ ಅವರು ಪ್ಯಾರಾ-ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ SL3 ಈವೆಂಟ್‌ನ ಫೈನಲ್‌ನಲ್ಲಿ ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ಅವರನ್ನು ಎದುರಿಸಿದ್ದರು. ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟು ಕೊನೆಗೂ ನಿತೀಶ್ ಕುಮಾರ್ ಗೆಲುವಿನಲ್ಲಿ ಯಶಸ್ವಿಯಾದರು. ನಿತೀಶ್ ಕುಮಾರ್ ಮತ್ತು ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್ ನಡುವೆ ಚಿನ್ನದ ಪದಕದ ಪಂದ್ಯದಲ್ಲಿ ಕಠಿಣ ಪೈಪೋಟಿ ಏರ್ಪಟ್ಟಿತ್ತು. ಪಂದ್ಯದ ಮೊದಲ ಸೆಟ್ ನಿತೇಶ್ ಕುಮಾರ್ ಹೆಸರಿನಲ್ಲಿತ್ತು. ಈ ಸೆಟ್ ಅನ್ನು 21-14 ರಿಂದ ಗೆದ್ದುಕೊಂಡರು. ಅದೇ ವೇಳೆ ಎರಡನೇ ಸೆಟ್ ನಲ್ಲಿ ದಿಟ್ಟ ಪ್ರದರ್ಶನ ನೀಡಿದರೂ 18-21ರಿಂದ ಸೋಲನುಭವಿಸಬೇಕಾಯಿತು. ಒಂದು ಬಾರಿ ಈ ಸೆಟ್ 16-16ರಲ್ಲಿ ಸಮವಾಗಿದ್ದಾದರೂ ಇಲ್ಲಿ ನಿತೀಶ್ ಕುಮಾರ್ ಹಿನ್ನಡೆ ಅನುಭವಿಸಿದರು. ಇದಾದ ಬಳಿಕ ಮೂರನೇ ಸೆಟ್‌ʼನಲ್ಲಿ ದಿಟ್ಟವಾಗಿ ತಿರುಗೇಟು ನೀಡಿದ ಅವರು 23-21 ಸೆಟ್‌ʼಗಳಿಂದ ಪಂದ್ಯ ಗೆದ್ದರು. ಆದರೆ ಈ ಸೆಟ್ ಗೆಲ್ಲಲು ಅವರು ತುಂಬಾ ಕಷ್ಟಪಡಬೇಕಾಯಿತು. ಉಭಯ ಆಟಗಾರರು ತಲಾ ಒಂದು ಅಂಕ ಗಳಿಸಿ ಕೊನೆಯವರೆಗೂ ಹೋರಾಟ ನಡೆಸಿದರು. ಇದನ್ನೂ ಓದಿ: ಶೂಟರ್ ಅವನಿ ಲೆಖರಾ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024ರಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗೆದ್ದರು. ಈ 2 ಚಿನ್ನದ ಪದಕಗಳನ್ನು ಹೊರತುಪಡಿಸಿ, ಇಲ್ಲಿಯವರೆಗೆ 3 ಬೆಳ್ಳಿ ಮತ್ತು 4 ಕಂಚಿನ ಪದಕಗಳನ್ನು ಭಾರತ ಗೆದ್ದಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...