ಪತ್ನಿಯ ಪರ್ಸ್‌ನಿಂದ ಹಣ ಕದ್ದ ಟೀಂ ಇಂಡಿಯಾ ಸ್ಟಾರ್ ಬೌಲರ್! ಈತ ವಿರಾಟ್‌ ಕೊಹ್ಲಿಯ ಆಪ್ತ ಗೆಳೆಯ.. ಯಾರು ಅಂತ ಗೆಸ್‌ ಮಾಡಿ!! : ಟೀಂ ಇಂಡಿಯಾದಲ್ಲಿ ಲವ್‌ ಮ್ಯಾರೇಜ್‌ ಹೊಸದೇನಲ್ಲ. ಅಕ್ಷರ್ ಪಟೇಲ್‌ನಿಂದ ಹಿಡಿದು ಇಶಾಂತ್ ಶರ್ಮಾ ವರೆಗೆ ಎಲ್ಲರೂ ಪ್ರೀತಿ ಮಾಡಿ ಮದುವೆಯಾಗಿದ್ದಾರೆ. : ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಅವರ ಲವ್‌ ಸ್ಟೋರಿ ಯಾವ ಸಿನಿಮಾ ಕಥೆಗೂ ಕಡಿಮೆಯೇನಿಲ್ಲ.. ಭಾರತ್‌ ಬೌಲರ್‌ ಹೃದಯ ಕದ್ದವರು ಬೇರಾರೂ ಅಲ್ಲ ಬಾಸ್ಕೆಟ್‌ಬಾಲ್ ಆಟಗಾರ್ತಿ ಪ್ರತಿಮಾ ಸಿಂಗ್‌.. ಹೌದು ಇಶಾಂತ್‌ ಬಾಸ್ಕೆಟ್ ಬಾಲ್ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದಾಗ ಅವರು ಪ್ರತಿಮಾ ಸಿಂಗ್‌ ಅವರನ್ನು ನೋಡುತ್ತಾರೆ.. ಮೊದಲ ನೋಟದಲ್ಲೇ ಅವರಿಗೆ ಹೃದಯ ನೀಡಿದ್ದ ಈ ಟೀಂ ಇಂಡಿಯಾ ಆಟಗಾರ ಪ್ರತಿನಿತ್ಯ ಕ್ರೀಡಾಂಗಣಕ್ಕೆ ಬಂದು ದೂರದಿಂದಲೇ ಪ್ರತಿಮಾ ಅವರನ್ನು ನೋಡುತ್ತಿದ್ದರು. ತನ್ನಿಂದಾಗಿಯೇ ಈ ಕ್ರಿಕೆಟ್ ತಾರೆ ಪ್ರತಿದಿನ ಕ್ರೀಡಾಂಗಣಕ್ಕೆ ಬರುತ್ತಿರುವುದು ಪ್ರತಿಮಾಗೆ ತಿಳಿದಿರಲಿಲ್ಲ. ಸುಮಾರು ಒಂದು ವರ್ಷದಿಂದ ಇಶಾಂತ್ ತನ್ನ ಹೆಂಡತಿಗೆ ತಾನು ಪ್ರೀತಿಸುವ ಸುಳಿವು ಕೂಡ ನೀಡಿರಲಿಲ್ಲ.. ಇದರ ನಂತರ, ಪ್ರತಿಮಾ ಸಹೋದರಿಯನ್ನು ಮೆಚ್ಚಿಸಲು ಇಶಾಂತ್ ಒಂದು ಮಾರ್ಗವನ್ನು ಕಂಡುಕೊಂಡು. ಇಬ್ಬರ ಪ್ರೇಮಕಥೆಯೂ ತಂಗಿ ಹೇಳಿದ ಹಾದಿಯಲ್ಲಿ ಬೆಳೆಯಿತು. ಇದಾದ ನಂತರ ಇಬ್ಬರೂ ಡಿಸೆಂಬರ್ 2016 ರಲ್ಲಿ ವಿವಾಹವಾದರು.. ಇದನ್ನೂ ಓದಿ- ಇವರಿಬ್ಬರ ನಡುವೆ ನಡೆದ ಒಂದು ಘಟನೆ ಮಾತ್ರ ಸಖತ್‌ ಫೇಮಸ್..‌ ವಾಸ್ತವವಾಗಿ, ಇಶಾಂತ್ ಶರ್ಮಾ ಪತ್ನಿ ಪ್ರತಿಮಾ ಅವರ ಪರ್ಸ್‌ನಿಂದ ಹಣವನ್ನು ಕದಿಯುತ್ತಾರಂತೆ.. ಇದನ್ನು ಅವರು ಇಂದಿನಿಂದಲ್ಲ ಬಹುಕಾಲದಿಂದ ಮಾಡುತ್ತಿದ್ದಾರಂತೆ.. ಏಕೆಂದರೇ ಆ ಹಣವೇ ತಮಗೆ ಸೂಕ್ತವೆಂದು ಆಟಗಾರ ನಂಬಿದ್ದಾರಂತೆ.. ಇದರ ಪೂರ್ತಿ ಕಥೆ ಇಲ್ಲಿದೆ ನೋಡಿ.. ಇಶಾಂತ್ ಶರ್ಮಾ ಮತ್ತು ಪತ್ನಿ ಪ್ರತಿಮಾ ಬಾಂಧವ್ಯ ತುಂಬಾ ಚೆನ್ನಾಗಿದೆ. ಇಬ್ಬರೂ ಆಗಾಗ 'ಯುನೋ' ಎಂಬ ಆನ್‌ಲೈನ್ ಆಟವನ್ನು ಆಡುತ್ತಾರೆ. ಈ ಆಟದಲ್ಲಿ ಪತ್ನಿಯನ್ನು ಸೋಲಿಸಿ ಬೇಸೋತ್ತ ಇಶಾಂತ್‌ ಅವರ ಪರ್ಸ್‌ನಲ್ಲಿನ ಹಣವನ್ನು ಸೋತಿದಕ್ಕಾಗಿ ಕದಿಯುತ್ತಾರಂತೆ. ಇನ್ನು ಇಶಾಂತ್ ಶರ್ಮಾ ಭಾರತ ಪರ 105 ಟೆಸ್ಟ್, 80 ಮತ್ತು 14 T20 ಪಂದ್ಯಗಳನ್ನು ಆಡಿದ್ದಾರೆ. ಅವರು ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ನವೆಂಬರ್-2021 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಕಾನ್ಪುರದ ಗ್ರೀನ್ ಪಾರ್ಕ್‌ನಲ್ಲಿ ಆಡಿದರು. ಇದಾದ ಬಳಿಕ 34ರ ಹರೆಯದ ಇಶಾಂತ್ ಗೆ ಮತ್ತೊಂದು ಅವಕಾಶ ಸಿಗಲಿಲ್ಲ. ಅವರು ಕೊನೆಯ ಬಾರಿಗೆ 2021 ರಲ್ಲಿ ಐಪಿಎಲ್‌ನಲ್ಲಿ ಕಾಣಿಸಿಕೊಂಡರು. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...