ಯುವಕನ ಅದೃಷ್ಟ ಬದಲಿಸಿದ ಒಂದು ಓವರ್‌! ಆರ್‌ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟ . ಯುವರಾಜ್‌? : 2025ರ ಐಪಿಎಲ್‌ ಸೀಸನ್‌ ಭಾರಿ ಕುತೂಹಲ ಹುಟ್ಟುಹಾಕಿದೆ, ಹರಾಜಿಗೆ ಇನ್ನೇನು ಎರಡು ತಿಂಗಳು ಬಾಕಿ ಇರುವಾಗಲೇ ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ, ಯಾವ ಆಟಗಾರರನ್ನು ಕೈ ಬಿಟಲಿದೆ, ಇನ್ನೂ ತಂಡಕ್ಕೆ ಯಾವ ಆಟಗಾರರು ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲವನ್ನು ಹುಟ್ಟು ಹಾಕಿದೆ. :2025ರ ಐಪಿಎಲ್‌ ಸೀಸನ್‌ ಭಾರಿ ಕುತೂಹಲ ಹುಟ್ಟುಹಾಕಿದೆ, ಹರಾಜಿಗೆ ಇನ್ನೇನು ಎರಡು ತಿಂಗಳು ಬಾಕಿ ಇರುವಾಗಲೇ ಯಾವ ತಂಡ ಯಾವ ಆಟಗಾರರನ್ನು ಉಳಿಸಿಕೊಳ್ಳಲಿದೆ, ಯಾವ ಆಟಗಾರರನ್ನು ಕೈ ಬಿಟಲಿದೆ, ಇನ್ನೂ ತಂಡಕ್ಕೆ ಯಾವ ಆಟಗಾರರು ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲವನ್ನು ಹುಟ್ಟು ಹಾಕಿದೆ. ಐಪಿಎಲ್‌ ಸೀಸನ್‌ ಆರಂಭವಾಗಲು ಆರು ತಿಂಗಳು ಬಾಕಿ ಇದೆ, ಹರಾಜಿಗಾಗೆ ಭಾರಿ ಸಿದ್ದತೆಗಳು ನಡೆಯುತ್ತಿದ್ದು, ಪ್ರಭಾವಿ ಆಟಗಾರರ ಮೇಲೆ ಎಲ್ಲಾ ಫ್ರಾಂಚೈಸಿಗಳು ಕಣ್ಣಿಟ್ಟಿದೆ. ಅದರಲ್ಲೂ ಈ ಭಾರಿಯ ತಂಡಕ್ಕಾಗಿ ನಡೆಯುವ ಆಟಗಾರರ ಆಯ್ಕೆ ಅನಿರೀಕ್ಷಿತ ತಿರುವುಗಳನ್ನು ಪಡೆಯಲಿದೆ ಅಂತಲೇ ಹೇಳಬಹುದು. ಆರ್‌ಸಿಬಿ ತಂಡ ಹರಾಜಿಗಾಗಿ ಈಗಾಗಲೇ ಎಲ್ಲಾ ಸಿದ್ದತೆಗಳನ್ನು ನಡೆಸಲು ಶುರು ಮಾಡಿದೆ. ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕು, ಯಾವ ಆಟಗಾರರನ್ನು ಕೈ ಬಿಡಬೇಕು ಎಂಬ ಪಟ್ಟಿಯನ್ನು ರೆಡಿ ಮಾಡಿಕೊಂಡಿದ್ದು, ತಂಡದಿಂದ ಸ್ಟಾರ್‌ ಆಟಗಾರರನ್ನು ಕೈ ಬಿಟ್ಟಿದೆ ಎಂದು ಐಪಿಎಲ್‌ ಮುಖ್ಯ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಆರ್‌ಸಿಬಿ ತಂಡ ರಿಟೈನ್‌ ಲಿಸ್ಟ್‌ನಲ್ಲಿ ಸ್ಟಾರ್‌ ವೇಗಿ ಮೊಹಮ್ಮದ್‌ ಸಿರಾಜ್‌ ಅವರ ಹೆಸರು ಇಲ್ಲದಿರುವುದು, ಅಭಿಮಾನಿಗಳಿಗಗೆ ಅಚ್ಚರಿಯನ್ನುಂಟು ಮಾಡಿದೆ. ಈಗಿರುವಾಗ ತಂಡಕ್ಕೆ ಯುವ ಆಟಗಾರ ಎಂಟ್ರಿ ಕೊಡಲಿದ್ದಾನೆ ಎನ್ನುವ ಸುದ್ದಿ ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಆರ್‌ಸಿಬಿ ಫ್ರಾಂಚೈಸಿ ಯುವ ಆಟಗಾರರ ಮೇಲೆ ಕಣ್ಣಿಟ್ಟಿದ್ದು, ಹರಾಜಿನಲ್ಲಿ ರಾಹುಲ್‌ ದ್ರಾವಿಡ್‌ ಅವರ ಪುತ್ರ ಸುಮಿತ್‌ ದ್ರಾವಿಡ್‌ ಕಾಣಿಸಿಕೊಂಡರೆ, ಅವರನ್ನು ತಂಡ ಕರೀದಿಸಲು ಸಂಚು ರೂಪಿಸಿದೆ. ಕೇವಲ ಸುಮಿತ್‌ ದ್ರಾವಿಡ್‌ ಅಷ್ಟೆ ಅಲ್ಲ ಇತ್ತೀಚೆಗಷ್ಟೆ ಆರು ಬಾಲ್‌ಗೆ ಅರು ಸಿಕ್ಸ್‌ ಭಾರಿಸಿ ಎಲ್ಲರನ್ನು ಅಚ್ಚರಿ ಮೂಡಿಸಿದ್ದ ಆಟಗಾರನ ಮೇಲೆ ಆರ್‌ಸಿಬಿ ತಂಡ ಈಗಾಗಲೇ ಕಣ್ಣಿಟ್ಟಿದೆ. 2007ರಲ್ಲಿ ಯುವರಾಜ್‌ ಸಿಂಗ್‌ ವಿಸ್ವಕಪ್‌ ಸಂದರ್ಭದಲ್ಲಿ ಆರು ಬಾಲ್‌ಗೆ ಆರು ಸಿಕ್ಸರ್‌ ಸಿಡಿಸಿ ವಿಶ್ವದ ಗಮನ ಸೆಳೆದಿದ್ದರು, ಇದೀಗ ತೇಟ್‌ ಯುವರಾಜ್‌ ಸಿಂಗ್‌ರಂತೆ ಆರು ಬಾಲ್‌ಗೆ ಆರು ಸಿಕ್ಸರ್‌ ಬಾರಿಸಿದ್ದ ದಹಲಿ ಪ್ರೀಮಿಯರ್‌ ಲೀಗ್‌ನ ಯುವ ಆಟಗಾರ ಪ್ರಿಯಾಂಶ್‌ ಆರ್ಯ ಅವರ ಮೇಲೆ ಆರ್‌ಸಿಬಿ ತಂಡ ಕಣ್ಣಿಟ್ಟಿದೆ. ಇದನ್ನೂ ಓದಿ: ಕೇವಲ ಆರ್‌ಸಿಬಿ ತಂಡ ಅಷ್ಟೆ ಅಲ್ಲದೆ ಹಲವಾರು ಫ್ರಾಂಚೈಸಿಗಳು ಈ ಯುವ ಆಟಗಾರನ ಮೇಲೆ ಕಣ್ಣಿಟ್ಟಿದ್ದು, ಈ ಆಟಗಾರರನ್ನು ಕರೀದಿಸಲೇ ಬೇಕು ಎಂದು ಆರ್‌ಸಿಬಿ ತಂಡ ಲಿಸ್ಟ್‌ ಮಾಡಿಕೊಂಡಿದೆ. ಕಳೆದ ವಾರ ಸೌತ್‌ ಹಾಗೂ ನಾರ್ತ್‌ ಡೆಲ್ಲಿ ನಡುವೆ ನಡೆದ ಪಂದ್ಯದಲ್ಲಿ, ಸೌತ್‌ ಡೆಲ್ಲಿ ತಂಡದ ಪರ ಬ್ಯಾಟಿಂಗ್‌ ಮಾಡಿದ ಪ್ರಿಯಾಂಶ್ ಎದುರಾಲಿ ತಂಡದ ಬೌಲರ್‌ಗಳ ಬೆವರಿಳಿಸಿದ್ದರು, ಆರು ಬಾಲ್‌ಗೆ ಆರು ಸಿಕ್ಸರ್‌ ಸಿಡಿಸಿ ಯುವರಾಜ್‌ ಸಿಂಗ್‌ ಅವರ ಆಟವನ್ನು ನೆನಪಿಸುವ ಮೂಲಕ, ಈ ದಾಖಲೆ ಮಾಡಿದ ಮೂರನೇ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಈ ಸಾಧನೆ ಆರ್‌ಸಿಬಿ ತಂಡದ ಗಮನ ಸೆಳೆದಿದ್ದು, ಯುವ ಆಟಗಾರನನ್ನು ಕರೀದಿಸಲೇ ಬೇಕು ಎಂದು ಆರ್‌ಸಿಬಿ ತಂಡ ನಿರ್ಧರಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...