2025: ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌, ಮತ್ತೋರ್ವ ಸ್ಟಾರ್ ಕನ್ನಡಿಗನ ಎಂಟ್ರಿ! 2025: 2023ರ ಮಹಾರಾಜ ಟ್ರೋಫಿ ಲೀಗ್ನಲ್ಲೂ ಅತೀಹೆಚ್ಚು ರನ್ ಗಳಿಸಿದ್ದೆ. ಆದರೂ ನನಗೆ ಐಪಿಎಲ್ನಲ್ಲಿ ಆಡುವ ಅವಕಾಶ ಸಿಗಲಿಲ್ಲವೆಂದು ಕರುಣ್ ಕಣ್ಣೀರಿಟ್ಟಿದ್ದರು. 2025:ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು () ಅಭಿಮಾನಿಗಳಿಗೆ ಭರ್ಜರಿ ಗುಡ್‌ ನ್ಯೂಸ್‌ ಸಿಕ್ಕಿದ್ದು, ತಂಡಕ್ಕೆ ಮತ್ತೊಬ್ಬ ಸ್ಟಾರ್‌ ಕನ್ನಡಿಗನ ಎಂಟ್ರಿ ಆಗೋದು ಪಕ್ಕಾ ಎನ್ನಲಾಗುತ್ತಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಲೀಗ್​​​ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ವಿರುದ್ಧ ಮೈಸೂರು ವಾರಿಯರ್ಸ್ 27 ರನ್​ಗಳ ಗೆಲುವು ಸಾಧಿಸಿತ್ತು. ತಂಡದ ಪರ ಅತ್ಯುತ್ತಮ ಬ್ಯಾಟಿಂಗ್​ ಮಾಡಿದ ಕರುಣ್​ ನಾಯರ್​​ ಕೇವಲ 48 ಎಸೆತಗಳಲ್ಲಿ ಅಜೇಯ 124 ರನ್​ ಬಾರಿಸಿದರು. ಭರ್ಜರಿ ಶತಕ ಸಿಡಿಸಿ ಮಿಂಚಿದ ಕರುಣ್‌ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟು ಸಂಭ್ರಮಿಸಿದರು. ಇದನ್ನೂ ಓದಿ: 2025ರ ಇಂಡಿಯನ್​ ಪ್ರೀಮಿಯರ್​​ ಲೀಗ್​​​ ಮೆಗಾ ಆಕ್ಷನ್​​ ನಡೆಯಲಿರುವ ಹೊತ್ತಿನಲ್ಲೇ ಕನ್ನಡಿಗ ಕರುಣ್​​ ನಾಯರ್​ ಅಬ್ಬರಿಸಿದ್ದು, ಎಲ್ಲರ ಗಮನ ಸೆಳೆದಿದೆ. ಹೀಗಾಗಿ ಕರುಣ್​ ನಾಯರ್ ಅವರನ್ನು ಖರೀದಿ ಮಾಡಲು ಆರ್​​ಸಿಬಿ ಪ್ಲಾನ್​ ಮಾಡಿಕೊಂಡಿದೆ ಎಂದು ವರದಿಯಾಗಿದೆ. ಅಂದಹಾಗೆ ಕರುಣ್​ ನಾಯರ್​​ ಹೋಮ್​ ಗ್ರೌಂಡ್​​​ ಚಿನ್ನಸ್ವಾಮಿ ಸ್ಟೇಡಿಯಂ. ಬೆಂಗಳೂರು ಸ್ಥಳೀಯರು ಆಗಿರುವ ಕರುಣ್ ಟಾಪ್​ ಆರ್ಡರ್​ ಬ್ಯಾಟ್ಸಮನ್‌ ಆಗಿದ್ದಾರೆ. ತಾವು ಬಿಗ್​ ಹಿಟ್ಟರ್​ ಎಂದು ಕಳೆದ 2 ವರ್ಷಗಳಿಂದ ಮಹಾರಾಜ ಟ್ರೋಫಿಯಲ್ಲಿ ಸಾಬೀತು ಮಾಡಿದ್ದಾರೆ. ಅವಕಾಶ ಸಿಗದೆ ಗಾಯಗೊಂಡಿರುವ ಹುಲಿಯಾಗಿರೋ ಕರುಣ್​ ಅವರನ್ನು ಆರ್​​ಸಿಬಿ ಕರೆ ತಂದರೆ ಘರ್ಜಿಸೋದು ೧೦೦% ಗ್ಯಾರಂಟಿ. ಫಾಫ್ ಡು ಪ್ಲೆಸ್ಸಿಸ್ ಸ್ಥಾನಕ್ಕೆ ಕರುಣ್ ಒಳ್ಳೆಯ ಆಯ್ಕೆ ಅನ್ನುವುದು ಆರ್​​ಸಿಬಿ ಪ್ಲಾನ್​​. ಇದನ್ನೂ ಓದಿ: ಈ ಹಿಂದೆ ನನಗೆ 30 ವರ್ಷ, ನಾನು ಚೆನ್ನಾಗಿ ಆಡುತ್ತಿದ್ದೇನೆ. ಕಳೆದ ವರ್ಷದ ಮಹಾರಾಜ ಟಿ-20 ನಂತರ ನಾನು ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ತೋರಿದ್ದೇನೆ. 2023-24ರಫೈನಲ್ ತಲುಪಿದ್ದ ವಿದರ್ಭ ತಂಡದ ಪರ 690 ರನ್ ಗಳಿಸಿದ್ದೆ. 2023ರ ಮಹಾರಾಜ ಟ್ರೋಫಿ ಲೀಗ್​ನಲ್ಲೂ ಅತೀಹೆಚ್ಚು ರನ್​​ ಗಳಿಸಿದ್ದೆ. ಆದರೂ ನನಗೆ ಐಪಿಎಲ್​​ನಲ್ಲಿ ಆಡುವ ಅವಕಾಶ ಸಿಗಲಿಲ್ಲವೆಂದು ಕರುಣ್​​ ಕಣ್ಣೀರಿಟ್ಟಿದ್ದರು. ಇದೀಗ ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ಯಾವ ನಿರ್ಧಾರ ಕೈಗೊಳ್ಳುತ್ತೆ? ಕರುಣ್‌ ಅವರಿಗೆ ಅವಕಾಶ ನೀಡುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...