ಭಾರತ ಬಿಟ್ಟು ವಿದೇಶದಲ್ಲಿ ನೆಲೆಸಿದ್ರೂ ವಿರಾಟ್‌ʼಗೆ ತಪ್ಪುತ್ತಿಲ್ಲ ಕಾಟ: ಕೊಹ್ಲಿ ಹಿಂದೆ ʼಇವರುʼ ಬಿದ್ದಿರೋದ್ಯಾಕೆ? ಯಾರವರು? : ಲಂಡನ್‌ʼನಲ್ಲಿ ವಿರಾಟ್ ಕೊಹ್ಲಿ ಕುಟುಂಬ ಸಮೇತ ನೆಲೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಸಾಮಾನ್ಯರಂತೆ ಅವರಿಗೂ ಜೀವನ ನಡೆಸಬೇಕು, ಜೊತೆಗೆ ತಮ್ಮ ಮಕ್ಕಳಿಗೆ ಜನಸಾಮಾನ್ಯರಂತೆ ವಾತಾವರಣ ಕಲ್ಪಿಸಿಕೊಡಬೇಕೆಂದು ಈ ನಿರ್ಧಾರಕ್ಕೆ ಬಂದಿದ್ದಾರಂತೆ. : ವಿರಾಟ್‌ ಕೊಹ್ಲಿ ಭಾರತ ಕ್ರಿಕೆಟ್‌ ಲೋಕದ ಅಧಿಪತಿ ಎಂದೇ ಹೆಸರಿಸಲ್ಪಟ್ಟವರು. ಆ ಹೆಸರಿಗೆ ತಕ್ಕಂತೆ ಮೈದಾನದಲ್ಲಿ ಆಡಿದವರು. ಆದರೆ ಈ ವರ್ಷದ ಆರಂಭದಲ್ಲಿ ಭಾರತ ತೊರೆದು ಲಂಡನ್‌ʼನಲ್ಲಿ ತಮ್ಮ ಕುಟಂಬದ ಜೊತೆ ನೆಲೆಸಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿಬರಲು ಪ್ರಾರಂಭಿಸಿದವು. ಇದನ್ನೂ ಓದಿ: ಈ ಮಾತುಗಳಿಗೆ ತಕ್ಕಂತೆ ಸದ್ಯದ ಸ್ಥಿತಿಗಳು ಕಾಣಿಸಿಕೊಳ್ಳುತ್ತಿವೆ. ಕ್ರಿಕೆಟ್​ ಇದ್ದಾಗ ಮಾತ್ರ ಭಾರತಕ್ಕೆ ಬರುತ್ತಿರುವ ವಿರಾಟ್‌, ಉಳಿದೆಲ್ಲಾ ದಿನ ಲಂಡನ್ʼನಲ್ಲಿಯೇ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲದೆ, ಇತ್ತೀಚೆಗೆಯಷ್ಟೇ ಟಿ20 ವಿಶ್ವಕಪ್​ ಗೆದ್ದ ಬಳಿಕ ಭಾರತಕ್ಕೆ ಬಂದಾಗಲೂ ಸಂಭ್ರಮಾಚಾರಣೆ ಮುಗಿದ ಮರುದಿನವೇ ಮುಂಬೈನಿಂದ ಲಂಡನ್​ʼಗೆ ವಿರಾಟ್‌ ಪ್ರಯಾಣ ಬೆಳೆಸಿದ್ದರು. ಇನ್ನು ಲಂಡನ್‌ʼನಲ್ಲಿ ವಿರಾಟ್​ ಕೊಹ್ಲಿ ಕುಟುಂಬ ಸಮೇತ ನೆಲೆಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಮುಖ್ಯ ಕಾರಣವೇನೆಂದರೆ, ಸಾಮಾನ್ಯರಂತೆ ಅವರಿಗೂ ಜೀವನ ನಡೆಸಬೇಕು, ಜೊತೆಗೆ ತಮ್ಮ ಮಕ್ಕಳಿಗೆ ಜನಸಾಮಾನ್ಯರಂತೆ ವಾತಾವರಣ ಕಲ್ಪಿಸಿಕೊಡಬೇಕೆಂದು ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಆದರೆ ನೆಮ್ಮದಿ ಹುಡುಕಿ ಲಂಡನ್‌ʼಗೆ ತೆರಳಿದರೂ, ಅವರೊಬ್ಬರ ಕಾಟ ತಪ್ಪುತ್ತಿಲ್ಲವಂತೆ. ಅಷ್ಟಕ್ಕೂ ಅವರು ಯಾರು ಎಂಬುದನ್ನು ಮುಂದೆ ತಿಳಿಯೋಣ. ಇದನ್ನೂ ಓದಿ: ಅಭಿಮಾನಿಗಳಾಗಲಿ, ಮಾಧ್ಯಮವಾಗಲಿ ಕೊಹ್ಲಿಗೆ ಕಾಟ ಕೊಡುತ್ತಿಲ್ಲ. ಬದಲಾಗಿ ಕೊಹ್ಲಿ ಹಿಂದೆ ಬಿದ್ದಿರುವವರು ಜಾಹೀರಾತುದಾರರು. ನೆಮ್ಮದಿ ಜೀವನ ಬೇಕೆಂದು ಲಂಡನ್‌ʼಗೆ ತೆರಳಿದ್ದರೆ ಅಲ್ಲಿಯೂ ಕೊಹ್ಲಿಯನ್ನು ಸಂಪರ್ಕಿಸುತ್ತಿದ್ದಾರೆ. ಕೆಲ ದಿನಗಳಿಂದ ಸಾಲು ಸಾಲು ಬ್ರ್ಯಾಂಡ್ʼ​ಗಳ ಶೂಟ್ʼ​​ಗಳಲ್ಲಿ ವಿರಾಟ್​ ಫುಲ್​ ಬ್ಯುಸಿಯಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...