ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿ, ಸಚಿನ್ ಮಗನ ಜೊತೆ ಸುತ್ತಾಡಿದ್ದ ಆ ಸ್ಟಾರ್‌ ಕ್ರಿಕೆಟ್‌ ಆಟಗಾರ್ತಿಗೆ ಇಂದು ಸಲಿಂಗ ವಿವಾಹ! ಯಾರೀಕೆ? : ಕಳೆದ ವರ್ಷ ಮಾರ್ಚ್‌ʼನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದಹಾಗೆ ವ್ಯಾಟ್ ಇಂಗ್ಲೆಂಡ್ ಪರ 160 , 112 T20I ಮತ್ತು 2 ಟೆಸ್ಟ್ ಆಡಿದ್ದಾರೆ. ಎಲ್ಲಾ ಸ್ವರೂಪಗಳಲ್ಲಿ 4,864 ರನ್‌ಗಳೊಂದಿಗೆ 77 ವಿಕೆಟ್‌ ಕಬಳಿಸಿದ್ದಾರೆ. :ಇಂಗ್ಲೆಂಡ್ ಮಹಿಳಾ ಕ್ರಿಕೆಟ್‌ ಆಟಗಾರ್ತಿ ಡೇನಿಯಲ್ ವ್ಯಾಟ್ ತನ್ನ ಗೆಳತಿ ಜಾರ್ಜಿಯಾ ಹಾಡ್ಜ್ ಅವರನ್ನು ವಿವಾಹವಾಗಿದ್ದಾರೆ. ಆಗಸ್ಟ್ 22ರಂದು ಫ್ರಾನ್ಸ್‌ʼನಲ್ಲಿ ಇವರ ಮದುವೆ ನಡೆದಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳು ತಡವಾಗಿ ರಿವೀಲ್‌ ಆಗಿವೆ. ಇದನ್ನೂ ಓದಿ: ಕಳೆದ ವರ್ಷ ಮಾರ್ಚ್‌ʼನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಂದಹಾಗೆ ವ್ಯಾಟ್ ಇಂಗ್ಲೆಂಡ್ ಪರ 160 , 112 T20I ಮತ್ತು 2 ಟೆಸ್ಟ್ ಆಡಿದ್ದಾರೆ. ಎಲ್ಲಾ ಸ್ವರೂಪಗಳಲ್ಲಿ 4,864 ರನ್‌ಗಳೊಂದಿಗೆ 77 ವಿಕೆಟ್‌ ಕಬಳಿಸಿದ್ದಾರೆ. ಈ ಹಿಂದೊಮ್ಮೆ, ಡೇನಿಯಲ್ ವ್ಯಾಟ್ 2014ರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿ ಭಾರೀ ಸುದ್ದಿಯಾಗಿದ್ದರು. ಆದರೆ ಈ ಸಂಬಂಧವನ್ನು ವಿರಾಟ್‌ ಅಲ್ಲ, ಅವರ ತಾಯಿಯೇ ರಿಜೆಕ್ಟ್‌ ಮಾಡಿದ್ದರು. ಇದನ್ನೂ ಓದಿ: ಕಪಿಲ್ ಶರ್ಮಾ ಶೋನಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್ ಆಡುವಾಗ ಆಗಿನ ಇಂಗ್ಲೆಂಡ್ ನಾಯಕಿ ಡೇನಿಯಲ್ ವ್ಯಾಟ್ ತನಗೆ ಪ್ರಪೋಸ್ ಮಾಡಿದ್ದರು. ಆದರೆ, ಆ ವೇಳೆ ಬ್ಯುಸಿಯಾಗಿದ್ದ ಕಾರಣ ಬಗ್ಗೆ ಹೆಚ್ಚು ಗಮನ ಹರಿಸಿರಲಿಲ್ಲ ಎಂದಿದ್ದರು. ಇನ್ನೊಂದೆಡೆ ಕೊಹ್ಲಿಗೆ ಇನ್ನೂ ಮದುವೆ ವಯಸ್ಸಾಗಿಲ್ಲ ಎಂದು ಅವರ ತಾಯಿ ಸಂದರ್ಶನವೊಂದರಲ್ಲಿ ಹೇಳಿಕೆ ನೀಡುವ ಮೂಲಕ ಈ ವಿಚಾರಕ್ಕೆ ಫುಲ್‌ ಸ್ಟಾಪ್‌ ಇಟ್ಟಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...