ಟೀಂ ಇಂಡಿಯಾಗೆ ರಾಹುಲ್‌ ದ್ರಾವಿಡ್‌ ಪುತ್ರನ ಗ್ರ್ಯಾಂಡ್‌ ಎಂಟ್ರಿ: ತಂದೆಯ ಹಾದಿಯಲ್ಲೇ ಹೆಜ್ಜೆ... ಈ ಸರಣಿ ಮೂಲಕ ಸಮಿತ್‌ ಪದಾರ್ಪಣೆ! : ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್‌, ತಂದೆಯಂತೆಯೇ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದು, ಆಲ್ ರೌಂಡರ್ ಆಗುವ ಹಾದಿಯಲ್ಲಿದ್ದಾರೆ. -19: ತಂದೆಯಂತೆ ಕ್ರಿಕೆಟ್‌ʼನಲ್ಲಿ ಮಿಂಚಬೇಕೆಂಬ ಹಂಬಲದಲ್ಲಿ ಮಕ್ಕಳು ಕೂಡ ಇದೇ ಕ್ಷೇತ್ರವನ್ನು ಅನುಸರಿಸುತ್ತಿದ್ದಾರೆ. ಆದರೆ ಅವರಲ್ಲಿ ಯಶಸ್ಸು ಕಂಡಿದ್ದು ಕೆಲವೇ ಕೆಲವರು. ಅದಕ್ಕೆ ಉತ್ತಮ ಉದಾಹರಣೆ ಎಂದರೆ ಸುನಿಲ್ ಗವಾಸ್ಕರ್ ಪುತ್ರ ರೋಹನ್ ಗವಾಸ್ಕರ್ ಮತ್ತು ರೋಜರ್ ಬಿನ್ನಿ ಪುತ್ರ ಸ್ಟುವರ್ಟ್ ಬಿನ್ನಿ. ಇದನ್ನೂ ಓದಿ: ಇನ್ನು ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೂಡ ಕ್ರಿಕೆಟಿಗರಾಗಿದ್ದಾರೆ. ತಂದೆಯಂತೆ ಯಶಸ್ಸು ಸಿಕ್ಕಿಲ್ಲ. ಅಷ್ಟೇ ಅಲ್ಲದೆ, ಅವರಿಗೆ ಇನ್ನೂ ಭಾರತಕ್ಕಾಗಿ ಆಡುವ ಅವಕಾಶ ಸಿಕ್ಕಿಲ್ಲ. ಇದೀಗ ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್‌, ತಂದೆಯಂತೆಯೇ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದು, ಆಲ್ ರೌಂಡರ್ ಆಗುವ ಹಾದಿಯಲ್ಲಿದ್ದಾರೆ. ಟೀಂ ಇಂಡಿಯಾ ಮಾಜಿ ಕೋಚ್ ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಚೊಚ್ಚಲ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತ ಅಂಡರ್-19 ತಂಡದಲ್ಲಿ ಸಮಿತ್‌ʼಗೆ ಸ್ಥಾನ ನೀಡಲಾಗಿದೆ. ಏಕದಿನ ಮತ್ತು ನಾಲ್ಕು ದಿನಗಳ ಸರಣಿಗೆ ಆಯ್ಕೆಯಾಗಿದ್ದಾರೆ. ಈ ಸರಣಿಯಲ್ಲಿ ಮೂರು 50 ಓವರ್‌ʼಗಳ ಪಂದ್ಯಗಳು ಮತ್ತು ಎರಡು ನಾಲ್ಕು ದಿನಗಳ ಪಂದ್ಯಗಳು ಕ್ರಮವಾಗಿ ಪುದುಚೇರಿ ಮತ್ತು ಚೆನ್ನೈನಲ್ಲಿ ನಡೆಯಲಿವೆ. ಏಕದಿನ ತಂಡವನ್ನು ಮೊಹಮ್ಮದ್ ಅಮಾನ್ ಮುನ್ನಡೆಸಲಿದ್ದು, ನಾಲ್ಕು ದಿನಗಳ ತಂಡವನ್ನು ಸೋಹಮ್ ಪಟವರ್ಧನ್ ಮುನ್ನಡೆಸಲಿದ್ದಾರೆ. ಇದನ್ನೂ ಓದಿ: ಸಮಿತ್ ದ್ರಾವಿಡ್ ದೇಶೀಯ ಮಟ್ಟದಲ್ಲಿ ರನ್ ಗಳಿಸುತ್ತಿದ್ದಾರೆ. ಇತ್ತೀಚೆಗೆ, ಮಹಾರಾಜ T20 ಟ್ರೋಫಿಯಲ್ಲಿ ಅವರ ಕೆಲವು ದೊಡ್ಡ ಹಿಟ್‌ʼಗಳ ವೀಡಿಯೊಗಳು ವೈರಲ್ ಆಗಿವೆ. ಸಮಿತ್ ಮೈಸೂರು ವಾರಿಯರ್ಸ್ ಪರ 7 ಇನ್ನಿಂಗ್ಸ್‌ʼಗಳಲ್ಲಿ ಕ್ರಮವಾಗಿ 7, 7, 33, 16, 2, 12 ಮತ್ತು 5 ರನ್‌ʼಗಳ ಇನ್ನಿಂಗ್ಸ್‌ʼಗಳನ್ನು ಆಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...