ಪತ್ನಿ ಉಜ್ಜಲಾ ಜೊತೆ ಆಗಮಿಸಿ ವಿದ್ಯಾರ್ಥಿ ಭವನದಲ್ಲಿ ಮಸಾಲೆದೋಸೆ ಸವಿದ ಲೆಜೆಂಡರಿ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ : ರೆಸ್ಟೋರೆಂಟ್ ತಮ್ಮ ಅಧಿಕೃತ ಹ್ಯಾಂಡಲ್‌ʼನಲ್ಲಿ ಪ್ರಕಾಶ್ ಪಡುಕೋಣೆ ದಂಪತಿ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದೆ. "ನಿನ್ನೆ ಸಂಜೆ ನಮ್ಮ ರೆಸ್ಟೋರೆಂಟ್‌ʼಗೆ ಲೆಜೆಂಡರಿ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಆಗಮಿಸಿದ್ದರು. ಈ ಕ್ಷಣ ತುಂಬಾ ಸಂತೋಷವಾಗಿತ್ತು!" ಎಂದು ಬರೆದುಕೊಂಡಿದ್ದಾರೆ. :ಲೆಜೆಂಡರಿ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಇತ್ತೀಚೆಗೆ ತಮ್ಮ ಪತ್ನಿ ಉಜ್ಜಲಾ ಪಡುಕೋಣೆ ಜೊತೆ ಬೆಂಗಳೂರಿನ ಜನಪ್ರಿಯ ರೆಸ್ಟೋರೆಂಟ್‌ʼಗೆ ಭೇಟಿ ನೀಡಿದ್ದರು. 1943 ರಿಂದ ಕರ್ನಾಟಕದಲ್ಲಿ ಸಖತ್‌ ಫೇಮಸ್‌ ಆಗಿರುವ ದಕ್ಷಿಣ ಭಾರತೀಯ ಸಸ್ಯಾಹಾರಿ ರೆಸ್ಟೋರೆಂಟ್ ವಿದ್ಯಾರ್ಥಿ ಭವನದಲ್ಲಿ ರುಚಿಕರವಾದ ದೋಸೆಗಳನ್ನು ಸವಿದಿದ್ದಾರೆ. ಇದನ್ನೂ ಓದಿ: ರೆಸ್ಟೋರೆಂಟ್ ತಮ್ಮ ಅಧಿಕೃತ ಹ್ಯಾಂಡಲ್‌ʼನಲ್ಲಿ ಪ್ರಕಾಶ್ ಪಡುಕೋಣೆ ದಂಪತಿ ಭೇಟಿಯ ಫೋಟೋಗಳನ್ನು ಹಂಚಿಕೊಂಡಿದೆ. "ನಿನ್ನೆ ಸಂಜೆ ನಮ್ಮ ರೆಸ್ಟೋರೆಂಟ್‌ʼಗೆ ಲೆಜೆಂಡರಿ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಆಗಮಿಸಿದ್ದರು. ಈ ಕ್ಷಣ ತುಂಬಾ ಸಂತೋಷವಾಗಿತ್ತು!" ಎಂದು ಬರೆದುಕೊಂಡಿದ್ದಾರೆ. ಈ ಐಕಾನಿಕ್ ರೆಸ್ಟೋರೆಂಟ್‌ʼಗೆ ಪ್ರಕಾಶ್ ಪಡುಕೋಣೆ ಮಾತ್ರವಲ್ಲ, ನಟ ರಜನಿಕಾಂತ್, ಮಾಜಿ ಯುಕೆ ಪಿಎಂ ರಿಷಿ ಸುನಕ್ ಮತ್ತು ಸ್ಟಾರ್‌ಬಕ್ಸ್ ಸಹ-ಸಂಸ್ಥಾಪಕ ಜೆವ್ ಸೀಗಲ್ ಅವರಂತಹ ಇತರ ಪ್ರಸಿದ್ಧ ವ್ಯಕ್ತಿಗಳು ಸಹ ಭೇಟಿ ನೀಡಿದ್ದಾರೆ. ಇದನ್ನೂ ಓದಿ: ಈ ಹಿಂದೆ, ಉದ್ಯಮಿ ಆನಂದ್ ಮಹೀಂದ್ರಾ ಅವರು, ಈ ರೆಸ್ಟೋರೆಂಟ್‌ʼನ ಸರ್ವರ್‌ ಒಬ್ಬರು 16 ಪ್ಲೇಟ್ ದೋಸೆಗಳನ್ನು ಗೋಪುರದಂತೆ ಮಾಡಿ ಒಂದೇ ಬಾರಿಗೆ ಕೊಂಡೊಯ್ಯುತ್ತಿದ್ದ ವೀಡಿಯೊವನ್ನು ಹಂಚಿಕೊಂಡಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...