ಐಸಿಸಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆ ಭಾರತೀಯ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಗ ಗ್ರೆಗ್ ಬಾರ್ಕ್ಲಿ ಸ್ಥಾನವನ್ನು ಜಯ್ ಶಾ ವಹಿಸಲಿದ್ದಾರೆ. ನವದೆಹಲಿ:ಭಾರತೀಯ ಕ್ರಿಕೆಟ್ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಅವರು ಐಸಿಸಿಯ ನೂತನ ಅಧ್ಯಕ್ಷರಾಗಿ ಜಯ್ ಶಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಗ ಗ್ರೆಗ್ ಬಾರ್ಕ್ಲಿ ಸ್ಥಾನವನ್ನು ಜಯ್ ಶಾ ವಹಿಸಲಿದ್ದಾರೆ. ಪ್ರಸ್ತುತ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅಧಿಕಾರಾವಧಿ ನವೆಂಬರ್ 30 ರಂದು ಕೊನೆಗೊಳ್ಳುತ್ತದೆ. ಜಯ್ ಶಾ ಅವರು ಐಸಿಸಿಯ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ ಐದನೇ ಭಾರತೀಯರಾಗಿದ್ದಾರೆ.ಇದಕ್ಕೂ ಮೊದಲು ಜಗಮೋಹನ್ ದಾಲ್ಮಿಯಾ, ಎನ್ ಶ್ರೀನಿವಾಸನ್, ಶರದ್ ಪವಾರ್ ಮತ್ತು ಶಶಾಂಕ್ ಮನೋಹರ್ ಅವರು ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಐಸಿಸಿ ನಿಯಮದ ಪ್ರಕಾರ ಅಧ್ಯಕ್ಷರ ಚುನಾವಣೆಯಲ್ಲಿ 16 ಮತಗಳಿದ್ದು, ಈಗ ವಿಜೇತರಿಗೆ 9 ಮತಗಳ ಸರಳ ಬಹುಮತದ ಅಗತ್ಯವಿದೆ. ಈ ಹಿಂದೆ ಅಧ್ಯಕ್ಷರಾಗಲು ಹಾಲಿ ಇರುವವರು ಮೂರನೇ ಎರಡರಷ್ಟು ಬಹುಮತ ಪಡೆಯಬೇಕಿತ್ತು. (). 1, 2024: — (@) ಪ್ರಸ್ತುತ ನಿರ್ದೇಶಕರು ಈಗ 27 ಆಗಸ್ಟ್ 2024 ರೊಳಗೆ ಮುಂದಿನ ಅಧ್ಯಕ್ಷರಿಗೆ ನಾಮನಿರ್ದೇಶನಗಳನ್ನು ಸಲ್ಲಿಸಬೇಕು ಮತ್ತು ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ, ಚುನಾವಣೆಯನ್ನು ನಡೆಸಲಾಗುವುದು ಮತ್ತು ಹೊಸ ಅಧ್ಯಕ್ಷರ ಅವಧಿಯು 1 ಡಿಸೆಂಬರ್ 2024 ರಿಂದ ಪ್ರಾರಂಭವಾಗುತ್ತದೆ. ಈ ಹಿಂದೆ ಭಾರತದ ಪರವಾಗಿ ಜಗಮೋಹನ್ ದಾಲ್ಮಿಯಾ ಅವರು 1997 ರಿಂದ 2000 ರವರೆಗೆ ಐಸಿಸಿ ಅಧ್ಯಕ್ಷರಾಗಿದ್ದರು.ಇದಾದ ಬಳಿಕ ಶರದ್ ಪವಾರ್ 2010ರಿಂದ 2012ರವರೆಗೆ ಐಸಿಸಿ ಅಧ್ಯಕ್ಷರಾಗಿದ್ದರು. ಶ್ರೀನಿವಾಸನ್ 2014-15ರಲ್ಲಿ ಅಧ್ಯಕ್ಷರಾಗಿದ್ದರು. 2015-2020ರ ಅವಧಿಯಲ್ಲಿ ಶಶಾಂಕ್ ಮನೋಹರ್ ಅಧ್ಯಕ್ಷರಾಗಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...