ವಿಚ್ಛೇದನ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ನತಾಶ ಪೋಸ್ಟ್‌! ಹಾರ್ದಿಕ್‌ ಕುರಿತ ರಹಸ್ಯ ಬಯಲಿಗೆಳೆದ ಮಾಜಿ ಪತ್ನಿ - : ಬಾಲಿವುಡ್ ನಟಿ, ಮಾಡೆಲ್ ನತಾಸಾ ಸ್ಟಾಂಕೋವಿಕ್ ಮತ್ತು ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ.. ಇತ್ತೀಚೆಗೆ ಈ ಜೋಡಿ ವಿಚ್ಛೇದನ ಪಡೆಯುವ ಮೂಲಕ ಎಲ್ಲರಿಗೂ ಶಾಕ್‌ ನೀಡಿದ್ದಾರೆ.. -: ಮದುವೆಯಾದ ಕೆಲವೇ ದಿನಗಳಲ್ಲಿ ಹಾರ್ದಿಕ್ ಮತ್ತು ನತಾಶಾ ನಡುವಿನ ಸಂಬಂಧ ಹದಗೆಟ್ಟು... ಇತ್ತೀಚೆಗಷ್ಟೇ ಇಬ್ಬರೂ ವಿಚ್ಛೇದನ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ದಂಪತಿಗಳ ಪ್ರತ್ಯೇಕತೆಯ ನಂತರ, ಕೆಲವರು ನತಾಶಾ ಅವರನ್ನು ದೂಷಿಸಿದರು. ಆದರೆ ಈಗ ನತಾಶಾ ಮತ್ತು ಹಾರ್ತಿಕ್ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಈ ಕಾರಣದಿಂದಲೇ ವಿಚ್ಛೇದನ ಪಡೆದರು ಎಂದು ಹಾರ್ದಿಕ್ ಆಪ್ತ ಮೂಲವೊಂದು ತಿಳಿಸಿದೆ. ಇದರೊಂದಿಗೆ ಹಾರ್ದಿಕ್ ಮತ್ತು ನತಾಶಾ ಅವರ ವಿಚ್ಛೇದನದ ನಿಜವಾದ ಕಾರಣವೂ ಬೆಳಕಿಗೆ ಬಂದಿದೆ... ಇದರ ನಂತರ ಸದ್ಯ ನತಾಶಾ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ- ಆ ಪೋಸ್ಟ್‌ನಲ್ಲಿ 'ಪ್ರೀತಿಯು ಇತರರನ್ನು ಎಂದಿಗೂ ಅವಮಾನಿಸುವುದಿಲ್ಲ.. ಪ್ರೀತಿ ಎಂದರೇ ದಯೆ ಮತ್ತು ತಾಳ್ಮೆ, ಇದು ಹೆಮ್ಮೆ ಅಥವಾ ಅಸೂಯೆಯಲ್ಲ. ಪ್ರೀತಿಯನ್ನು ಹೇಗೆ ತಾನೇ ಬೇಡಿಕೊಳ್ಳುವುದು.. ಪ್ರೀತಿ ಎಂದಿಗೂ ಇತರರನ್ನು ಅವಮಾನಿಸುವುದಲ್ಲ.. ಯಾವಾಗಲೂ ರಕ್ಷಿಸುತ್ತದೆ ಮತ್ತು ಸ್ಥಿರವಾಗಿರುತ್ತದೆ.. ಅಂತಹ ಪ್ರೀತಿ ಮಾತ್ರ ಎಂದಿಗೂ ಸುಳ್ಳಾಗುವುದಿಲ್ಲ.. ಎಂದು ಬರೆದುಕೊಂಡಿದ್ದಾರೆ... ನತಾಶಾ ಅವರ ಈ ಪೋಸ್ಟ್ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿದೆ.. ವರದಿ ಪ್ರಕಾರ, ಹಾರ್ದಿಕ್ ಪಾಂಡ್ಯ ನತಾಶಾ ಅವರೊಂದಿಗೆ ಯಾವುದೇ ಸಂಬಂಧವಿಲ್ಲದೇ ಮತ್ತು ತಮ್ಮದೇ ಆದ ಜಗತ್ತಿನಲ್ಲಿ ಬ್ಯುಸಿಯಾಗಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಅಲ್ಲದೇ ನತಾಶಾಗೆ ಹಾರ್ದಿಕ್‌ ನಡುವಳಿಕೆ ಇಷ್ಟವಾಗದೇ ಅವರು ಎಲ್ಲವನ್ನು ಸರಿಪಡಿಸಲು ಪ್ರಯತ್ನಿಸಿದರೂ, ಯಾವುದೂ ಸರಿಯಾಗಿ ನಡೆಯಲಿಲ್ಲ. ಹೀಗಾಗಿ ನಟಿ ಕೊನೆಗೆ ಬೇರ್ಪಡಲು ನಿರ್ಧರಿಸಿದರು ಎಂದು ಹೇಳಲಾಗುತ್ತಿದೆ.. ಇದನ್ನೂ ಓದಿ- ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...