4,4,4,4,4,4,4,4... 94 ವರ್ಷ ಹಳೆಯ ವಿಶ್ವದಾಖಲೆ ಮುರಿದ 24ರ ಸ್ಟಾರ್‌ ದಾಂಡಿಗ: ಅಮೋಘ ಶತಕದಾಟಕ್ಕೆ ವಿಶ್ವಕ್ರಿಕೆಟ್ʼನಲ್ಲಿ ಸಂಚಲನ ಸೃಷ್ಟಿ : ಮೂರು ಟೆಸ್ಟ್ ಪಂದ್ಯಗಳ ಸರಣಿಗಾಗಿ ಶ್ರೀಲಂಕಾ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ಎರಡೂ ತಂಡಗಳು ಮ್ಯಾಂಚೆಸ್ಟರ್‌ʼನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯವನ್ನು ಆಡುತ್ತಿವೆ. :ವಿಶ್ವ ಕ್ರಿಕೆಟ್‌'ನಲ್ಲಿ ಓರ್ವ ಬ್ಯಾಟ್ಸ್‌ʼಮನ್ ಸಂಚಲನ ಮೂಡಿಸಿದ್ದಾರೆ. ಈ ಬ್ಯಾಟ್ಸ್‌ʼಮನ್ ತಮ್ಮ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಶ್ರೇಷ್ಠ ದಾಖಲೆಯನ್ನು ಮುರಿದಿದ್ದಾರೆ. ಅಂದಹಾಗೆ ಆ ಆಟಗಾರ ಬೇರಾರು ಅಲ್ಲ, ಇಂಗ್ಲೆಂಡ್‌ʼನ 24 ವರ್ಷದ ಯುವ ಬ್ಯಾಟ್ಸ್‌ಮನ್ ಜೇಮಿ ಸ್ಮಿತ್. ಇದನ್ನೂ ಓದಿ: ಮೂರು ಟೆಸ್ಟ್ ಪಂದ್ಯಗಳ ಸರಣಿಗಾಗಿ ಶ್ರೀಲಂಕಾ ತಂಡ ಇಂಗ್ಲೆಂಡ್ ಪ್ರವಾಸದಲ್ಲಿದೆ. ಎರಡೂ ತಂಡಗಳು ಮ್ಯಾಂಚೆಸ್ಟರ್‌ʼನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯವನ್ನು ಆಡುತ್ತಿವೆ. ಈ ಪಂದ್ಯದ ಮೂರನೇ ದಿನ ಜೇಮಿ ಸ್ಮಿತ್ ಅವರು 94 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಇಂಗ್ಲೆಂಡ್ ಕ್ರಿಕೆಟ್‌ʼನ ದಾಖಲೆ ಪುಸ್ತಕದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ʼಗೆ ಇಳಿದ ಶ್ರೀಲಂಕಾ ತಂಡದ ಇನಿಂಗ್ಸ್ 236 ರನ್‌ʼಗಳಿಗೆ ಸೀಮಿತಗೊಂಡಿತು, ನಂತರ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ʼಗಳು ಮೊದಲ ಇನ್ನಿಂಗ್ಸ್‌ʼನಲ್ಲಿ 358 ರನ್ ಗಳಿಸುವಲ್ಲಿ ಯಶಸ್ವಿಯಾದರು. ಇದರಲ್ಲಿ ಯುವ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಜೇಮಿ ಸ್ಮಿತ್ ಅವರ ಕೊಡುಗೆ ಪ್ರಮುಖವಾಗಿಯೇ ಇದೆ. ಸ್ಮಿತ್ ಪಂದ್ಯದ ಮೂರನೇ ದಿನದಂದು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಲ್ಲದೆ, ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ದಾಖಲಿಸಿದ್ದಾರೆ. 148 ಎಸೆತಗಳನ್ನು ಎದುರಿಸಿದ ಸ್ಮಿತ್ 8 ಬೌಂಡರಿ ಹಾಗೂ 1 ಸಿಕ್ಸರ್ ಒಳಗೊಂಡ 111 ರನ್ ಗಳಿಸಿದರು. ಇನ್ನು ಸ್ಮಿತ್ ಟೆಸ್ಟ್ ಶತಕ ಗಳಿಸಿದ ಇಂಗ್ಲೆಂಡ್‌ʼನ ಅತ್ಯಂತ ಕಿರಿಯ ವಿಕೆಟ್‌ ಕೀಪರ್ ಎಂದೆನಿಸಿಕೊಂಡಿದ್ದಾರೆ. 1930 ರಲ್ಲಿ ಪೋರ್ಟ್ ಆಫ್ ಸ್ಪೇನ್‌ʼನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್‌ ಪರ ಟೆಸ್ಟ್ ಶತಕ ಗಳಿಸಿದ್ದ ಲೆಸ್ ಏಮ್ಸ್ ಅವರ ದಾಖಲೆಯನ್ನು ಮುರಿದಿದ್ದಾರೆ. ಏಮ್ಸ್ ಈ ಶತಕವನ್ನು 24 ವರ್ಷ ಮತ್ತು 63 ದಿನಗಳ ವಯಸ್ಸಿನಲ್ಲಿ ಗಖಿಸಿದ್ದರು. ಇದನ್ನೂ ಓದಿ: ಮತ್ತೊಂದೆಡೆ ಜೇಮಿ ಸ್ಮಿತ್ ಅವರು ಡಿಸೆಂಬರ್ 2022 ರ ನಂತರ ಶತಕ ಗಳಿಸಿದ ಇಂಗ್ಲೆಂಡ್‌ʼನ ಮೊದಲ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...