ಮನೆಯಲ್ಲೇ ಇದ್ದು ʻಇದನ್ನುʼ ಮಾಡಿ ಎನ್ನುತ್ತಾಳೆ ನನ್ನ ಹೆಂಡತಿ: ರಾಹುಲ್ ದ್ರಾವಿಡ್ : ಇದೇ ವೇಳೆ ರಾಹುಲ್‌ ದ್ರಾವಿಡ್‌ ಹೆಂಡತಿ ಬಗ್ಗೆ ಹೇಳಿದ ಆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬೆಂಗಳೂರು:ರಾಹುಲ್‌ ದ್ರಾವಿಡ್ ಟೀಮ್ ಇಂಡಿಯಾದ ಮಾಜಿ ಕೋಚ್‌. ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಕ್ರಿಕೆಟ್‌ ಅಂಗಳದಲ್ಲಿ ತಮ್ಮ ವಿಶಿಷ್ಠ ಬ್ಯಾಟಿಂಗ್ ಶೈಲಿಯಿಂದ ಸದ್ದು ಮಾಡಿದ್ದ ರಾಹುಲ್‌ ದ್ರಾವಿಡ್‌ ಬಳಿಕ ಕೋಚ್‌ ಆಗಿ ತಮ್ಮ ಛಾಪು ಮೂಡಿಸಿದ್ದಾರೆ. ಹಲವು ಕ್ರಿಕೆಟ್‌ ಆಟಗಾರರ ಮೇಲೆ ಬಯೋಪಿಕ್‌ ಮಾಡಲಾಗಿದೆ. ತೆಂಡೂಲ್ಕರ್‌, ಎಂಎಸ್ ಧೋನಿ ಜೀವನಾಧಾರಿತ ಸಿನಿಮಾಗಳು ಈಗಾಗಲೆ ತೆರೆ ಮೇಲೆ ಮಿಂಚಿವೆ. ಯುವರಾಜ್‌ ಸಿಂಗ್ ಬಯೋಪಿಕ್‌ ಗೆ ಸಿದ್ಧತೆ ನಡೆದಿದೆ. ಈ ನಡುವೆ ರಾಹುಲ್‌ ದ್ರಾವಿಡ್ ಅವರಿಗೆ ಸಮಾರಂಭ ಒಂದರಲ್ಲಿ ನಿಮ್ಮ ಬಗ್ಗೆ ಬಯೋಪಿಕ್‌ ಮಾಡಿದರೆ ಹೀರೊ ಯಾರು ಆಗಬೇಕು ಎಂದು ಕೇಳಲಾಯಿತು. ಇದನ್ನೂ ಓದಿ: ಈ ಅವಕಾಶವನ್ನು ಬೇರೆಯವರಿಗೆ ಯಾಕೆ ಬಿಟ್ಟುಕೊಡಬೇಕು. ಉತ್ತಮ ಸಂಭಾವನೆ ಕೊಟ್ಟರೆ ನಾನೇ ನಟಿಸುವೆ ಎಂದು ತಿಳಿಸಿದರು. ಇದೇ ವೇಳೆ ರಾಹುಲ್‌ ದ್ರಾವಿಡ್‌ ಹೆಂಡತಿ ಬಗ್ಗೆ ಹೇಳಿದ ಆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. "ನನ್ನ ಹೆಂಡತಿ (ವಿಜೇತಾ) ನಾನು ಮನೆಯಲ್ಲಿರಲು ಮತ್ತು ನನ್ನ ಗಂಡು ಮಕ್ಕಳನ್ನು ನೋಡಿಕೊಳ್ಳಬೇಕೆಂದು ಬಯಸುತ್ತಾಳೆ" ಎಂದು ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ. ಇದನ್ನೂ ಓದಿ: ಮುಂಬೈನಲ್ಲಿ ನಡೆದ ಚಾಡ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಮಾಜಿ ಕೋಚ್ ರಾಹುಲ್ ದ್ರಾವಿಡ್, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಭಾರತೀಯ ಆಟಗಾರರಾದ ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಸೇರಿದಂತೆ ಹಲವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರಾಹುಲ್‌ ದ್ರಾವಿಡ್‌ ಮಾತನಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...