ಪ್ರಶಸ್ತಿ ಸಮಾರಂಭದಲ್ಲಿ ರೋಹಿತ್‌ಗಾಗಿ ತನ್ನ ಆಸನ ಬಿಟ್ಟುಕೊಟ್ಟು ಎದ್ದುನಿಂತ ಶ್ರೇಯಸ್‌ ಐಯ್ಯರ್‌..ಆಟಗಾರನ ನಡೆಗೆ ಅಭಿಮಾನಿಗಳು ಕ್ಲೀನ್‌ ಬೋಲ್ಡ್‌ : ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಟೀಂ ಇಂಡಿಯಾ ತಂಡದಲ್ಲಿಯೂ ಹಲವಾರು ಆಟಗಾರರು ರೋಹಿತ್‌ ಅವರ ಅಭಿಮಾನಿಗಳೆಂದೇ ಹೇಳಬಹುದು. ಇದಕ್ಕೆ ಉದಾಹರನೆಯಂತೆ ಚಾಂಪಿಯನ್ ನಾಯಕನಿಗೆ ಆಟಗಾರರಲ್ಲಿ ಎಷ್ಟು ಗೌರವವಿದೆ ಎಂಬುದು ಬುಧವಾರ(ಆಗಸ್ಟ್‌ 21)ದಂದು ನಡೆದ ಪ್ರಶಸ್ತಿ ಸಮಾರಂಭದಲ್ಲಿ ಕಂಡುಬಂದಿದೆ. :ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ವಿಶ್ವದಾದ್ಯಂತ ಅಭಿಮಾನಿಗಳನ್ನು ಗಳಿಸಿದ್ದಾರೆ. ಟೀಂ ಇಂಡಿಯಾ ತಂಡದಲ್ಲಿಯೂ ಹಲವಾರು ಆಟಗಾರರು ರೋಹಿತ್‌ ಅವರ ಅಭಿಮಾನಿಗಳೆಂದೇ ಹೇಳಬಹುದು. ಇದಕ್ಕೆ ಉದಾಹರನೆಯಂತೆ ಚಾಂಪಿಯನ್ ನಾಯಕನಿಗೆ ಆಟಗಾರರಲ್ಲಿ ಎಷ್ಟು ಗೌರವವಿದೆ ಎಂಬುದು ಬುಧವಾರ(ಆಗಸ್ಟ್‌ 21)ದಂದು ನಡೆದ ಪ್ರಶಸ್ತಿ ಸಮಾರಂಭದಲ್ಲಿ ಕಂಡುಬಂದಿದೆ. ರೋಹಿತ್ ಶರ್ಮಾ ಪ್ರಶಸ್ತಿ ಸಮಾರಂಭಕ್ಕೆ ಪ್ರವೇಶಿಸಿದ ತಕ್ಷಣ, ಈಗಾಗಲೇ ಕುರ್ಚಿಯ ಮೇಲೆ ಕುಳಿತಿದ್ದ ಶ್ರೇಯಸ್ ಅಯ್ಯರ್ ಅವರು ನಾಯಕನ ಗೌರವಾರ್ಥವಾಗಿ ತಮ್ಮ ಸ್ಥಾನವನ್ನು ತೊರೆದು ಹಾಸನ ಬಿಟ್ಟುಕೊಟ್ಟು ರೋಹಿತ್‌ ಅವರನ್ನು ತಾವು ಕೂತಿದ್ದ ಜಾಗದಲ್ಲಿ ಕೂರಿಸಲು ಶ್ರೇಯಸ್‌ ಐಯ್ಯರ್‌ ಮುಂದಾದರು. ಇನ್ನೂ, ಈ ಸಮಾರಂಭದಲ್ಲಿ ರೋಹಿತ್‌ ಶರ್ಮಾ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದರು. ವಿರಾಟ್‌ ಕೊಹ್ಲಿ ಅವರಿಗೂ ಕೂಡ ಅತೀ ಹೆಚ್ಚು ರನ್‌ ಗಳಿಸಿದ ದಾಖಲೆ ಹಾಗೂ ಅತೀ ಹೆಚ್ಚು ಶತಕ ಗಳಿಸಿದ ಕಾರಣಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತ್ತು. ಅಷ್ಟೆ ಅಲ್ಲ 2023 ವಿSವಕಪ್‌ ಸಮಯದಲ್ಲಿ ತನ್ನ ಅದ್ಭುತ ಬೌಲಿಂಗ್‌ ಮೂಲಕ ಟೀಂ ಇಂಡಿಯಾವನ್ನು ಕೊನೆವರೆಗೂ ಕೊಡಯ್ಯಲು ಪ್ರಮುಖ ಪಾತ್ರ ವಹಿಸಿದ ಮೊಹಮ್ಮದ್‌ ಶಮಿಗೂ ಕೂಡ ಅತ್ಯುತ್ತಮ ಬೌಲರ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತ್ತು. ಇದನ್ನೂ ಓದಿ: ತಮ್ಮ ಹಾಸನವನ್ನು ಬಿಟ್ಟುಕೊಟ್ಟು ಮೇಲೆ ಎದ್ದ ಶ್ರೇಯಸ್‌ ಐಯ್ಯರ್‌ ಪಕ್ಕದ ಸೀಟಿನಲ್ಲಿ ಹೋಗಿ ಕುಳಿತರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾನದಲ್ಲಿ ವೈರಲ್‌ ಆಗುತ್ತಿದ್ದು, ಶ್ರೇಯಸ್‌ ತಮ್ಮ ಅಭಿಮಾನಿಗಳ ಹೃದಯವನ್ನಷ್ಟೆ ಅಲ್ಲದೆ ರೋಹಿತ್‌ ಶರ್ಮಾ ಅವರ ಅಭಿಮಾನಗಳ ಹೃದಯವನ್ನು ಹೆದ್ದುಕೊಂಡಿದ್ದಾರೆ. ರೋಹಿತ್ ಶರ್ಮಾ ಅವರು ವರ್ಷದ ಅತ್ಯುತ್ತಮ ಪುರುಷ ಅಂತರಾಷ್ಟ್ರೀಯ ಕ್ರಿಕೆಟಿಗರಾಗಿ ಆಯ್ಕೆಯಾದ ' ಕ್ರಿಕೆಟ್ ರೇಟಿಂಗ್ ಪ್ರಶಸ್ತಿ'ಯನ್ನು ಮುಡಿಗೇರಿಸಿಕೊಂಡರು. ಈ ಕಾರ್ಯಕ್ರಮಕ್ಕೆ ಬಂದಾಗ ಅವರನ್ನು ನೋಡಿದ ತಕ್ಷಣ ಶ್ರೇಯಸ್ ಅಯ್ಯರ್ ಸೀಟ್ ಬಿಟ್ಟು ಎದ್ದು ನಿಂತರು. ಅಷ್ಟಕ್ಕೂ ಶ್ರೇಯಸ್‌ ಐಯ್ಯರ್‌ ಕೂಡ ಉತ್ತಮ ಆಟಗಾರ ಪ್ರಸಸ್ತಿ ಪಡೆಲು ಸಮಾರಂಭದಲ್ಲಿ ಬಾಗಿಯಾಗಿದ್ದರು. ಈ ಸಮಾರಂಭದಲ್ಲಿ ಶ್ರೇಯಸ್‌ ಐಯ್ಯರ್‌, ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಮೊಹಮ್ಮದ್‌ ಸಮಿ ಸೇರಿದಂತೆ ಟೀಂ ಇಂಡಿಯಾದ ಹಲವು ಆಟಗಾರರಿಗೆ ಪ್ರಶಸ್ತಿ ಪುರಸ್ಕಾರ ಮಾಡಿ ಗೌರವಿಸಿತು. ಇದೀಗ ಸದ್ಯ ಶ್ರೇಯಸ್‌ ಐಯ್ಯರ್‌ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ, ಅಟಗಾರನ ನಡೆ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...