ಬಾಲ್ ಟ್ಯಾಂಪರಿಂಗ್ ಮಾಡಿದ್ದಕ್ಕೆ ಛೀಮಾರಿ ಹಾಕಿದ ರೆಫರಿ.. ಟೆಸ್ಟ್ ಪಂದ್ಯದಿಂದ ಅರ್ಧದಲ್ಲೇ ಫೀಲ್ಡ್‌ನಿಂದ ಹೊರ ನಡೆದ ಪಾಕಿಸ್ತಾನ! : 2006 ರ ಆಗಸ್ಟ್ 20 ಅನ್ನು ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದು ಪ್ರಮುಖ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಲಂಡನ್ ಓವಲ್ ಮೈದಾನದಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿತ್ತು. ಆಗ ಪಾಕಿಸ್ತಾನ ತಂಡ ಬಾಲ್ ಟ್ಯಾಂಪರಿಂಗ್ ಮಾಡಿದ್ದಕ್ಕಾಗಿ ಅಂಪೈರ್ ಐದು ರನ್ ಪೆನಾಲ್ಟಿ ನೀಡಿದ್ದರು. ಅಷ್ಟೇ ಅಲ್ಲ, ಚೆಂಡನ್ನು ಕೂಡ ಬದಲಾಯಿಸಿದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. :2006 ರ ಆಗಸ್ಟ್ 20 ಅನ್ನು ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಒಂದು ಪ್ರಮುಖ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನ ಇಂಗ್ಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಲಂಡನ್ ಓವಲ್ ಮೈದಾನದಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿತ್ತು. ಆಗ ಪಾಕಿಸ್ತಾನ ತಂಡ ಬಾಲ್ ಟ್ಯಾಂಪರಿಂಗ್ ಮಾಡಿದ್ದಕ್ಕಾಗಿ ಅಂಪೈರ್ ಐದು ರನ್ ಪೆನಾಲ್ಟಿ ನೀಡಿದ್ದರು. ಅಷ್ಟೇ ಅಲ್ಲ, ಚೆಂಡನ್ನು ಕೂಡ ಬದಲಾಯಿಸಿದರು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಪಾಕಿಸ್ತಾನ ತಂಡದ ನಾಯಕ ಇಂಜಾಮ್ ಉಲ್ ಹಕ್ ಅವರು ಬಾಲ್ ಟ್ಯಾಂಪರಿಂಗ್ ಮಾಡಿಲ್ಲ, ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಹೇಳಿ ಪಂದ್ಯ ಆಡಲು ಬರುವುದಿಲ್ಲ ಎಂದು ಹೇಳಿದ್ದರು. ಚಹಾ ವಿರಾಮದ ನಂತರ ಪಾಕಿಸ್ತಾನ ತಂಡವು ಮೈದಾನಕ್ಕೆ ಮರಳಲಿಲ್ಲ. ಇದರಿಂದಾಗಿ ಅಂಪೈರ್‌ಗಳು ಪಾಕಿಸ್ತಾನ ತಂಡವನ್ನು ಮೈದಾನಕ್ಕೆ ಮರಳುವಂತೆ ಒತ್ತಾಯಿಸಿದರು. ಆದರೆ ಪಾಕಿಸ್ತಾನ ತಂಡ ಹಠ ಹಿಡಿದಿತ್ತು. ಇದರ ನಂತರ, ಪಂದ್ಯವನ್ನು ರದ್ದುಗೊಳಿಸಲಾಯಿತು ಮತ್ತು ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಇದು ಅಂದು ಭಾರೀ ವಿವಾದ ಸೃಷ್ಟಿಸಿತ್ತು. ಇದನ್ನೂ ಓದಿ: ಇದರ ನಂತರ, ಐಸಿಸಿ ಪಾಕಿಸ್ತಾನ ನಿಜವಾಗಿಯೂ ಬಾಲ್ ಟ್ಯಾಂಪರ್ ಮಾಡಿದೆಯೇ? ಇಲ್ಲವೇ ಎಂದು ತನಿಖೆ ನಡೆಸಿದರು. ಯಾವುದೇ ಬಾಲ್ ಟ್ಯಾಂಪರಿಂಗ್ ಇಲ್ಲ ಎಂದು ಐಸಿಸಿ ತೀರ್ಪು ನೀಡಿತು, ಆದರೆ ಪಂದ್ಯವನ್ನು ಅರ್ಧದಲ್ಲೇ ತೊರೆದ ಕಾರಣಕ್ಕಾಗಿ ಇಂಜಮಾಮ್-ಉಲ್-ಹಕ್ ಅವರನ್ನು ನಾಲ್ಕು ODIಗಳಿಗೆ ನಿಷೇಧಿಸಲಾಯಿತು. ಪಂದ್ಯವನ್ನು ಡ್ರಾ ಎಂದು ಘೋಷಿಸಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಗ್ರಹಿಸಿತ್ತು. ಐಸಿಸಿ ಎರಡು ವರ್ಷಗಳ ನಂತರ ಫಲಿತಾಂಶವನ್ನು ಗೆಲುವಿನಿಂದ ಡ್ರಾಗೆ ಬದಲಾಯಿಸಿತು. ಇದು ಅಂದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...