ನಿರ್ಮಾಣವಾಗಲಿದೆ 2011ರ ವಿಶ್ವಕಪ್ ಗೆಲುವಿನ ಹೀರೋ ಯುವರಾಜ್ ಸಿಂಗ್ ಬಯೋಪಿಕ್:‌ ಯುವಿಯಾಗಿ ಅಭಿನಯಿಸಲಿರುವ ನಟ ಯಾರು? : 2011 ರ ವಿಶ್ವಕಪ್ ವಿಜೇತ ಹೀರೋ ಯುವರಾಜ್ ಸಿಂಗ್ ಅವರ ಬಯೋಪಿಕ್ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ. ಯುವರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡದ 2011 ರ ವಿಶ್ವಕಪ್ ಗೆಲುವಿನ ಹೀರೋ ಆಗಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದರು. :ಕಳೆದ ಕೆಲವು ವರ್ಷಗಳಲ್ಲಿ ಬಯೋಪಿಕ್‌ಗಳ ಟ್ರೆಂಡ್ ವೇಗವಾಗಿ ಹೆಚ್ಚುತ್ತಿದೆ. ಈ ರೀತಿಯ ಚಿತ್ರಗಳನ್ನೇ ಪ್ರೇಕ್ಷಕರು ಎಷ್ಟು ಇಷ್ಟಪಡುತ್ತಿದ್ದಾರೆ. ಅದು ರಾಜಕೀಯವಾಗಲಿ, ಕ್ರೀಡೆಯಾಗಲಿ ಅಥವಾ ಅಂತಹ ಯಾವುದೇ ಕಾರ್ಯಕ್ರಮವಾಗಲಿ, ಅದು ಹೊಸ ರೀತಿಯಲ್ಲಿ ಜನರನ್ನು ತಲುಪಬೇಕು. ಈ ಕಾರಣದಿಂದಲೇ ಸಿನಿಮಾ ಮಾಡುವಾಗ ಕೆಲ ವಿಷಯಗಳ ಬಗ್ಗೆ ತಯಾರಕರು ಗಮನ ನೀಡುತ್ತಾರೆ. ಇದನ್ನೂ ಓದಿ: 2011 ರ ವಿಶ್ವಕಪ್ ವಿಜೇತ ಹೀರೋ ಯುವರಾಜ್ ಸಿಂಗ್ ಅವರ ಬಯೋಪಿಕ್ ನಿರ್ಮಾಣವಾಗಲಿದೆ ಎಂದು ತಿಳಿದುಬಂದಿದೆ. ಯುವರಾಜ್ ಸಿಂಗ್ ಭಾರತ ಕ್ರಿಕೆಟ್ ತಂಡದ 2011 ರ ವಿಶ್ವಕಪ್ ಗೆಲುವಿನ ಹೀರೋ ಆಗಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದಿದ್ದರು. ಬ್ಯಾಟ್ ಮಾತ್ರವಲ್ಲದೆ ಚೆಂಡಿನಲ್ಲೂ ತಮ್ಮ ತಂಡಕ್ಕೆ ಸಂಪೂರ್ಣ ಕೊಡುಗೆ ನೀಡಿದವರು ಯುವಿ. ಇನ್ನು ಯುವಿ ಭಾರತದ ಗೆಲುವಿನ ಹೀರೋ ಮಾತ್ರವಲ್ಲ, ನಿಜ ಜೀವನದ ಹೀರೋ ಕೂಡ ಹೌದು. ವಿಶ್ವಕಪ್ ಗೆಲುವಿನ ನಂತರ ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂಬ ವಿಚಾರ ಬಹಿರಂಗವಾಗಿತ್ತು. ಈ ಸುದ್ದಿ ಕೇಳಿ ಎಲ್ಲರೂ ಬೆಚ್ಚಿಬಿದ್ದರು. ಅದಾದ ಬಳಿಕ ಯಶಸ್ವಿ ಚಿಕಿತ್ಸೆ ಪಡೆದ ಯುವಿ ಈಗ ಆರಾಮದಾಯಕ ಜೀವನ ನಡೆಸಿತ್ತೊದ್ದಾರೆ. ಅಂದಹಾಗೆ ನಿರ್ಮಾಣ ಕಂಪನಿ ಟಿ-ಸೀರೀಸ್‌ ಮಾಲೀಕ ಭೂಷಣ್ ಕುಮಾರ್ ಇತ್ತೀಚೆಗೆ ಯುವರಾಜ್ ಸಿಂಗ್ ಅವರ ಜೀವನಚರಿತ್ರೆಯನ್ನು ಘೋಷಿಸಿದ್ದಾರೆ. ರವಿ ಭಾಗಚಂಡಕ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇದನ್ನೂ ಓದಿ: ಯುವರಾಜ್ ಸಿಂಗ್ ಅವರ ಜೀವನವು ಗೆಲುವು ಮತ್ತು ಉತ್ಸಾಹದ ಕಥೆಯಾಗಿದೆ ಎಂದು ಭೂಷಣ್ ಕುಮಾರ್ ಹೇಳಿದ್ದಾರೆ. "ಭರವಸೆಯ ಕ್ರಿಕೆಟಿಗನಿಂದ ಕ್ರಿಕೆಟ್ ಹೀರೋ ಆಗಿ ನಂತರ ನಿಜ ಜೀವನದಲ್ಲಿ ಹೀರೋ ಆಗುವ ಅವರ ಪಯಣ ಸಾಕಷ್ಟು ಸ್ಪೂರ್ತಿದಾಯಕವಾಗಿದೆ" ಎಂದಿದ್ದಾರೆ. ಇನ್ನು ಸದ್ಯದಲ್ಲೇ ಚಿತ್ರದ ಕೆಲಸ ಶುರುವಾಗಲಿದೆ. ಆದರೆ, ಚಿತ್ರದಲ್ಲಿ ಅವರ ಪಾತ್ರವನ್ನು ಯಾರು ಮಾಡಲಿದ್ದಾರೆ ಎಂಬುದು ಇನ್ನೂ ಪ್ರಕಟವಾಗಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...