6,6,6,6,6,6... ಒಂದೇ ಓವರ್‌ʼನಲ್ಲಿ 39 ರನ್‌ ಚಚ್ಚಿ ಅಬ್ಬರಿಸಿದ ಸ್ಟಾರ್ ದಾಂಡಿಗ! 17 ವರ್ಷ ಹಳೆಯ ಯುವರಾಜ್‌ ಸಿಂಗ್ ದಾಖಲೆ ಧೂಳೀಪಟ : 28 ವರ್ಷದ ವಿಸ್ಸರ್ ಒಂದೇ ಓವರ್‌ನಲ್ಲಿ 39 ರನ್ ಗಳಿಸಿದ್ದಾರೆ. ಈ ಮೂಲಕ ಒಂದೇ ಓವರ್‌ನಲ್ಲಿ 36 ರನ್ ಗಳಿಸಿದ್ದ ಅನುಭವಿ ಆಲ್‌ರೌಂಡರ್ ಯುವರಾಜ್ ಸಿಂಗ್, ಕೀರಾನ್ ಪೊಲಾರ್ಡ್ ಮತ್ತು ದೀಪೇಂದ್ರ ಸಿಂಗ್ ಐರೆ ದಾಖಲೆ ಮುರಿದಿದ್ದಾರೆ. :ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌'ನಲ್ಲಿ ಡೇರಿಯಸ್ ವಿಸ್ಸರ್ ಇತಿಹಾಸ ನಿರ್ಮಿಸಿದ್ದಾರೆ. ಸಮೋವಾದ ಈ ವಿಕೆಟ್-ಕೀಪರ್ ಬ್ಯಾಟ್ಸ್‌'ಮನ್ ವನವಾಟು ವಿರುದ್ಧದ T20 ವಿಶ್ವಕಪ್ 2026 ಕ್ವಾಲಿಫೈಯರ್ ಪಂದ್ಯದಲ್ಲಿ ಒಂದು ಓವರ್‌'ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆಯನ್ನು ಮಾಡಿದ್ದಾರೆ. ಇದನ್ನೂ ಓದಿ: 28 ವರ್ಷದ ವಿಸ್ಸರ್ ಒಂದೇ ಓವರ್‌ನಲ್ಲಿ 39 ರನ್ ಗಳಿಸಿದ್ದಾರೆ. ಈ ಮೂಲಕ ಒಂದೇ ಓವರ್‌ನಲ್ಲಿ 36 ರನ್ ಗಳಿಸಿದ್ದ ಅನುಭವಿ ಆಲ್‌ರೌಂಡರ್ ಯುವರಾಜ್ ಸಿಂಗ್, ಕೀರಾನ್ ಪೊಲಾರ್ಡ್ ಮತ್ತು ದೀಪೇಂದ್ರ ಸಿಂಗ್ ಐರೆ ದಾಖಲೆ ಮುರಿದಿದ್ದಾರೆ. ವಿಸ್ಸರ್ ತಮ್ಮ ವೃತ್ತಿ ಜೀವನದ ಮೂರನೇ ಟಿ20ಯಲ್ಲಿ ಶತಕ ಬಾರಿಸಿ ಸಂಚಲನ ಮೂಡಿಸಿದ್ದಾರೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ʼನಲ್ಲಿ ಶತಕ ಸಿಡಿಸಿದ ಸಮೋವಾದ ಏಕೈಕ ಬ್ಯಾಟ್ಸ್‌ಮನ್ ಇವರು, ಡೇರಿಯಸ್ ವಿಸ್ಸರ್ ತನ್ನ ಕಾಲೇಜು ದಿನಗಳಲ್ಲಿ ಸೇಂಟ್ ಜಾರ್ಜ್ ಡಿಸ್ಟ್ರಿಕ್ಟ್ ಮತ್ತು ಸಿಡ್ನಿ ವಿಶ್ವವಿದ್ಯಾಲಯಕ್ಕಾಗಿ ಸಿಡ್ನಿ ಗ್ರೇಡ್ ಕ್ರಿಕೆಟ್ ಆಡಿದ್ದರು. ವಿಸ್ಸರ್ ಆಸ್ಟ್ರೇಲಿಯಾದ ಸಿಡ್ನಿಯವರು ಆದರೆ ಸಮೋವಾ ಪರ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಾರೆ. ಅವರ ಲಿಂಕ್ಡ್‌ಇನ್ ಪ್ರೊಫೈಲ್‌ ಪ್ರಕಾರ, ಡೇರಿಯಸ್ ವಿಸ್ಸರ್ ಅವರು ಹೈಪ್ ಕ್ರಿಕೆಟ್ ಅಕಾಡೆಮಿಯ ನಿರ್ದೇಶಕರಾಗಿದ್ದಾರೆ. ಇದನ್ನೂ ಓದಿ: ಡೇರಿಯಸ್ ಒಂದು ಓವರ್‌ʼನಲ್ಲಿ 39 ರನ್ ಗಳಿಸಿದ್ದು ಹೀಗೆ...ಇನಿಂಗ್ಸ್‌ʼನ 15ನೇ ಓವರ್‌ʼನಲ್ಲಿ ಬೌಲರ್ ನಲಿನ್ ನಿಪಿಕೊ ಅವರ ಒಂದು ಓವರ್‌ʼನಲ್ಲಿ ಡೇರಿಯಸ್ ವಿಸ್ಸರ್ ಆರು ಸಿಕ್ಸರ್‌ ಬಾರಿಸಿದರು. ಮೂರು ಎಸೆತಗಳು ನೋ ಬಾಲ್ ಆಗಿತ್ತು. ಈ ಮೂಲಕ ನಲಿನ್ ಒಂದೇ ಓವರ್‌ನಲ್ಲಿ 39 ರನ್ ನೀಡಿದರು. ಒಂದು ಸಮಯದಲ್ಲಿ ವಿಸ್ಸರ್ 34 ಎಸೆತಗಳಲ್ಲಿ 46 ರನ್ ಗಳಿಸಿ ಆಡುತ್ತಿದ್ದರು. ಇದಾದ ಬಳಿಕ 40 ಎಸೆತಗಳಲ್ಲಿ 95 ರನ್ ಗಳಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...