ವಿಚ್ಛೇದನದ ಬೆನ್ನಲ್ಲೇ ಬೇರೊಬ್ಬಳ ಜೊತೆ ಹಾರ್ದಿಕ್‌ ಪಾಂಡ್ಯ ಡೇಟಿಂಗ್... ಸೀಕ್ರೆಟ್‌ ಬಿಚ್ಚಿಟ್ಟ ʼಟ್ಯಾಟೂʼ: 2ನೇ ಮದುವೆಗೆ ಸ್ಟಾರ್‌ ಆಲ್‌ ರೌಂಡರ್ ರೆಡಿ? : ಹಾರ್ದಿಕ್ ಮತ್ತು ಜಾಸ್ಮಿನ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಒಟ್ಟಿಗೆ ಸುತ್ತಾಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ. :ಇತ್ತೀಚೆಗೆಯಷ್ಟೇ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್‌ ಡಿವೋರ್ಸ್‌ ಪಡೆದಿದ್ದರು. ಅದಾದ ಬಳಿಕ ಹಾರ್ದಿಕ್ ಹೆಸರು ಬ್ರಿಟಿಷ್ ಗಾಯಕಿ ಜಾಸ್ಮಿನ್ ವಾಲಿಯಾ ಜೊತೆ ತಳುಕು ಹಾಕಿಕೊಂಡಿತ್ತು. ಇದೀಗ ಇದಕ್ಕೆ ಸಂಬಂಧಪಟ್ಟ ಶಾಕಿಂಗ್‌ ಫೋಟೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳೂ ಅಚ್ಚರಿಪಟ್ಟಿದ್ದಾರೆ. ಇದನ್ನೂ ಓದಿ: ಹಾರ್ದಿಕ್ ಮತ್ತು ಜಾಸ್ಮಿನ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಮತ್ತು ಒಟ್ಟಿಗೆ ಸುತ್ತಾಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳಿಕೊಳ್ಳುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಇತ್ತೀಚೆಗೆಯಷ್ಟೇ ಗ್ರೀಸ್‌ʼನಲ್ಲಿ ವೆಕೇಶನ್‌ ಮೋಡ್‌ ಎಂಜಾಯ್‌ ಮಾಡುತ್ತಿದ್ದು, ಅದರ ವೀಡಿಯೊವನ್ನು ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಕಂಡುಬಂದ ಸ್ವಿಮ್ಮಿಂಗ್‌ ಪೂಲ್‌, ಜಾಸ್ಮಿನ್ ಶೇರ್‌ ಮಾಡಿದ್ದ ಪೋಸ್ಟ್‌ʼನಲ್ಲಿಯೂ ಕಂಡುಬಂದಿದೆ. ಅಷ್ಟೇ ಅಲ್ಲದೆ, ಜಾಸ್ಮಿನ್‌ ಶೇರ್‌ ಮಾಡಿದ್ದ ಫೋಟೋ ಒಂದರಲ್ಲಿ, ಟ್ಯಾಟೂ ಹಾಕಿರುವ ಓರ್ವ ವ್ಯಕ್ತಿ ಪಕ್ಕದಲ್ಲಿ ಕುಳಿತಿರುವುದು ಕಂಡುಬಂದಿದೆ. ಆ ಟ್ಯಾಟೂ ನೋಡಿ ನೆಟ್ಟಿಗರು, ಅದು ಹಾರ್ದಿಕ್‌ ಪಾಂಡ್ಯ ಎಂದೇ ಹೇಳುತ್ತಿದ್ದಾರೆ. ಏಕೆಂದರೆ ಅಲ್ಲಿರುವ ಟ್ಯಾಟೂ ಮತ್ತು ಹಾರ್ದಿಕ್‌ ಕೈಯಲ್ಲಿರುವ ಟ್ಯಾಟೂ ಬಹಳಷ್ಟು ಹೋಲಿಕೆ ಇದೆ. ? , .👀 - 15th.- - ' ' — 𝐑𝐮𝐬𝐡𝐢𝐢𝐢⁴⁵ (@rushiii_12) ಇದನ್ನೂ ಓದಿ: ಇನ್ನು ಹಾರ್ದಿಕ್ ಪಾಂಡ್ಯಗೆ ಈಗ 30 ವರ್ಷ. ಜಾಸ್ಮಿನ್ ವಾಲಿಯಾಗೆ 29 ವರ್ಷ. ಇವರಿಬ್ಬರು ಸದ್ಯ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬುದು ಹಲವರ ಮಾತು. ಈ ವಿಚಾರ ಎಷ್ಟರ ಮಟ್ಟಿಗೆ ನಿಜ ಎಂಬುದು ಮುಂದಿನ ದಿನಗಳಲ್ಲಿ ತಿಳಿದುಬರಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...