ಕ್ರಿಕೆಟ್‌ ಅಭಿಮಾನಿಗಳಿಗೆ ಶುಭ ಸುದ್ದಿ..ಟೀಂ ಇಂಡಿಯಾಗೆ ರೀ ಎಂಟ್ರಿ ಕೊಡಲಿದ್ದಾರೆ ಸ್ಟಾರ್‌ ವೇಗಿ..! : ಭಾರತದ ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಟೀಂ ಇಂಡಿಯಾಗೆ ಮರು ಪ್ರವೇಶ ಮಾಡಲು ಸಜ್ಜಾಗಿದ್ದಾರೆ. ಮೊಹಮ್ಮದ್ ಸಿರಾಜ್ ಅವರಂತಹ ಯುವ ಬೌಲರ್‌ಗಳನ್ನು ಉತ್ತೇಜಿಸುವ ಪ್ರಕ್ರಿಯೆಯಲ್ಲಿ ಇಶಾಂತ್ ಭಾರತ ತಂಡಕ್ಕೆ ಗೈರುಹಾಜರಾಗಿದ್ದರು ಎಂದು ತಿಳಿದು ಬಂದಿದ್ದು. ನೂರು ಟೆಸ್ಟ್ ಪಂದ್ಯಗಳ ಹೀರೋ ಎಂಬ ದಾಖಲೆ ಬರೆದಿರುವ ಇಶಾಂತ್ 2021ರಲ್ಲಿ ಕೊನೆಯ ಬಾರಿ ಭಾರತವನ್ನು ಪ್ರತಿನಿಧಿಸಿದ್ದರು. :ಭಾರತದ ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಟೀಂ ಇಂಡಿಯಾಗೆ ಮರು ಪ್ರವೇಶ ಮಾಡಲು ಸಜ್ಜಾಗಿದ್ದಾರೆ. ಮೊಹಮ್ಮದ್ ಸಿರಾಜ್ ಅವರಂತಹ ಯುವ ಬೌಲರ್‌ಗಳನ್ನು ಉತ್ತೇಜಿಸುವ ಪ್ರಕ್ರಿಯೆಯಲ್ಲಿ ಇಶಾಂತ್ ಭಾರತ ತಂಡಕ್ಕೆ ಗೈರುಹಾಜರಾಗಿದ್ದರು ಎಂದು ತಿಳಿದು ಬಂದಿದ್ದು. ನೂರು ಟೆಸ್ಟ್ ಪಂದ್ಯಗಳ ಹೀರೋ ಎಂಬ ದಾಖಲೆ ಬರೆದಿರುವ ಇಶಾಂತ್ 2021ರಲ್ಲಿ ಕೊನೆಯ ಬಾರಿ ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ಮುಂದಿನ ತಿಂಗಳಿನಿಂದ ತವರಿನಲ್ಲಿ ಟೆಸ್ಟ್ ರಶ್ ಶುರುವಾಗಲಿದ್ದು, 35 ವರ್ಷದ ಇಶಾಂತ್ ಭಾರತ ತಂಡಕ್ಕೆ ಮರುಪ್ರವೇಶಿಸಲು ಸಿದ್ಧರಾಗಿದ್ದಾರೆ. ಅವರು ಟೀಂ ಇಂಡಿಯಾಗೆ ಮರಳಲು ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ಉನ್ನತ ಮಟ್ಟದಲ್ಲಿ ಕೊನೆಗೊಳಿಸಲು ಆಶಿಸಿದ್ದಾರೆ. ಈ ಕ್ರಮದಲ್ಲಿ ಆರು ಅಡಿಯ ಈ ವೇಗಿ ಯುವ ಆಟಗಾರರೊಂದಿಗೆ ಡೆಲ್ಲಿ ಪ್ರೀಮಿಯರ್ ಲೀಗ್ ನಲ್ಲಿ ಆಡಲಿದ್ದಾರೆ. ಇದನ್ನೂ ಓದಿ: ಇಶಾಂತ್ ಶರ್ಮಾ ಅವರು ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ 'ಪುರಣಿ ದೆಹಲಿ 6' ತಂಡದಲ್ಲಿ ರಿಷಬ್ ಪಂತ್ ಜೊತೆಗೆ ಆಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಕ್ರಿಕೆಟಿಗರಿಗೆ ಇಶಾಂತ್ ಕೆಲವು ಸಲಹೆಗಳನ್ನು ನೀಡಿದ್ದಾರೆ. ಇಶಾಂತ್ ಭಾರತ ಪರ 105 ಟೆಸ್ಟ್, 80 ಮತ್ತು 14 T20 ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 311, ಏಕದಿನದಲ್ಲಿ 115 ಮತ್ತು ಶಾರ್ಟ್ ಫಾರ್ಮ್ಯಾಟ್‌ನಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭಾರತದ ಹಲವು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಇಶಾಂತ್ ಗೆ ಗೌರವಯುತ ಅಂತ್ಯ ನೀಡಲು ಬಿಸಿಸಿಐ ಬಯಸಿದರೆ, ಬಾಂಗ್ಲಾದೇಶ ಅಥವಾ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಶಾಂತ್ ಆಡುವ ಸಾಧ್ಯತೆ ಇದೆ. ಪ್ರಸ್ತುತ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಅವರ ವೇಗದ ತ್ರಿವಳಿ ಗಟ್ಟಿಯಾಗಿದೆ. ಆದರೆ, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಶಮಿ ಬಾಂಗ್ಲಾ ಅಥವಾ ಕಿವೀಸ್ ಸರಣಿಗೆ ಸಂಪೂರ್ಣ ಫಿಟ್ ಆಗದೇ ಇದ್ದರೆ ಇಶಾಂತ್ ಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...