10 ಎಸೆತದಲ್ಲಿ 60 ರನ್‌ ಚಚ್ಚಿದ್ದೇ ತಡ... ಇಶಾನ್‌ ಕಿಶನ್‌ ಟೀಂ ಇಂಡಿಯಾಗೆ ಕಂಬ್ಯಾಕ್!! ರೋಹಿತ್‌ ಬತ್ತಳಿಕೆಗೆ ಮತ್ತೆ ಬ್ರಹ್ಮಾಸ್ತ್ರ ಸೇರೋದು ಯಾವಾಗ? : ಟೀಂ ಇಂಡಿಯಾದಿಂದ ಹೊರಗುಳಿದಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಬುಚ್ಚಿ ಬಾಬು ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇಶಾನ್ ಜಾರ್ಖಂಡ್ ತಂಡದ ನಾಯಕರಾಗಿದ್ದು, ಮೊದಲ ಪಂದ್ಯದಲ್ಲಿಯೇ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ ಅವರು ಮೊದಲ ಇನಿಂಗ್ಸ್‌ʼನಲ್ಲಿ ಶತಕ ಹಾಗೂ ಎರಡನೇ ಇನ್ನಿಂಗ್ಸ್‌ʼನಲ್ಲಿ ಸತತ ಎರಡು ಸಿಕ್ಸರ್‌ʼಗಳನ್ನು ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. :ಭಾರತ ತಂಡ ಮುಂದಿನ ವರ್ಷ ಚಾಂಪಿಯನ್ಸ್ ಟ್ರೋಫಿ ಆಡಬೇಕಿದ್ದು, ಇದಕ್ಕಾಗಿ ರೋಹಿತ್ ಶರ್ಮಾ ನೇತೃತ್ವದ ತಂಡ ಈಗಿನಿಂದಲೇ ಸಜ್ಜಾಗಬೇಕಿದೆ. ಈ ಐಸಿಸಿ ಟ್ರೋಫಿಗೂ ಮುನ್ನ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್‌ ಪುನರಾಗಮನಕ್ಕೆ ತಯಾರಿ ಆರಂಭಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾದಿಂದ ಹೊರಗುಳಿದಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಬುಚ್ಚಿ ಬಾಬು ಟೂರ್ನಿಯಲ್ಲಿ ಆಡುತ್ತಿದ್ದಾರೆ. ಇಶಾನ್ ಜಾರ್ಖಂಡ್ ತಂಡದ ನಾಯಕರಾಗಿದ್ದು, ಮೊದಲ ಪಂದ್ಯದಲ್ಲಿಯೇ ಅಮೋಘ ಬ್ಯಾಟಿಂಗ್‌ ಪ್ರದರ್ಶಿಸಿದ ಅವರು ಮೊದಲ ಇನಿಂಗ್ಸ್‌ʼನಲ್ಲಿ ಶತಕ ಹಾಗೂ ಎರಡನೇ ಇನ್ನಿಂಗ್ಸ್‌ʼನಲ್ಲಿ ಸತತ ಎರಡು ಸಿಕ್ಸರ್‌ʼಗಳನ್ನು ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಇತ್ತೀಚಿನ ದಿನಗಳಲ್ಲಿ ಇಶಾನ್ ತೋರುತ್ತಿರುವ ಪ್ರದರ್ಶನ ನೋಡಿದರೆ ಅತೀ ಶೀಘ್ರದಲ್ಲೇ ಮತ್ತೇ ಟೀಂ ಇಂಡಿಯಾಗೆ ಕಂಬ್ಯಾಕ್‌ ಮಾಡುವ ಸಾಧ್ಯತೆ ಇದೆ. ಬಿಸಿಸಿಐನಿಂದ ಕಟ್ಟುನಿಟ್ಟಿನ ಸೂಚನೆಗಳ ಹೊರತಾಗಿಯೂ ಇಶಾನ್ ಕಿಶನ್ 2023 ರ ಕೊನೆಯಲ್ಲಿ ಕ್ರಿಕೆಟ್‌ʼನಿಂದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಅದರ ಪರಿಣಾಮವಾಗಿ ಬಿಸಿಸಿಐನ ವಾರ್ಷಿಕ ಒಪ್ಪಂದದಿಂದ ಹೊರಹಾಕಲಾಯಿತು. ಆದರೂ ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿದ್ದರು. ಅಂದು 14 ಪಂದ್ಯಗಳಲ್ಲಿ 320 ರನ್ ಗಳಿಸಿದ್ದರು. ಇದನ್ನೂ ಓದಿ: ಬುಚ್ಚಿ ಬಾಬು ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ಇಶಾನ್ ಕಿಶನ್ ಅದ್ಭುತ ಶತಕ ಗಳಿಸಿ ಕೇವಲ 107 ಎಸೆತಗಳಲ್ಲಿ 114 ರನ್ ಕಲೆ ಹಾಕಿದ್ದರು. ಇದರಿಂದಾಗಿ ಜಾರ್ಖಂಡ್ ಮೊದಲ ಇನ್ನಿಂಗ್ಸ್‌ʼನಲ್ಲಿ 64 ರನ್‌ʼಗಳ ಮುನ್ನಡೆ ಸಾಧಿಸಿತು. ಅಷ್ಟೇ ಅಲ್ಲ, ಎರಡನೇ ಇನ್ನಿಂಗ್ಸ್‌ʼನಲ್ಲಿ ರನ್‌ʼಗಳ ಬೆನ್ನತ್ತಿದ್ದ ಅವರು ತತ್ತರಿಸಿದ ಜಾರ್ಖಂಡ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 174 ರನ್‌ʼಗಳ ಸಾಧಾರಣ ಗುರಿ ಬೆನ್ನತ್ತಿದ್ದ ಜಾರ್ಖಂಡ್‌ʼನ ಮಧ್ಯಮ ಕ್ರಮಾಂಕ ವಿಫಲವಾದಾಗ ಪಂದ್ಯದಲ್ಲಿ ಟ್ವಿಸ್ಟ್‌ ಕಂಡುಬಂತು. 70 ರನ್ ಗಳಿಸುವಷ್ಟರಲ್ಲಿ ತಂಡ 5 ವಿಕೆಟ್ ಕಳೆದುಕೊಂಡಿತು. ಜಾರ್ಖಂಡ್ ತಂಡ ಗೆಲುವಿಗೆ 12 ರನ್‌ʼಗಳ ಅಂತರದಲ್ಲಿದ್ದು ಕೇವಲ 2 ವಿಕೆಟ್‌ʼಗಳು ಮಾತ್ರ ಬಾಕಿ ಉಳಿದಿದ್ದವು. ಆ ಸಂದರ್ಭದಲ್ಲಿ ಇಶಾನ್ ಕಿಶನ್ ಸತತ ಎರಡು ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...