,,,,,... ಒಂದೇ ಏಟಿಗೆ 8 ವಿಕೆಟ್‌ ಕಬಳಿಸಿದ ಸ್ಪಿನ್‌ ಮಾಂತ್ರಿಕ: 64 ವರ್ಷ ಹಳೆಯ ವಿಶ್ವದಾಖಲೆ ಮುರಿದ ಆಂಜನೇಯನ ಪರಮಭಕ್ತ...! : ಹನುಮಾನ್ ಭಕ್ತ ಕೇಶವ ಮಹಾರಾಜ್ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಮಾಂತ್ರಿಕ ಸ್ಪಿನ್‌ʼನ ಮ್ಯಾಜಿಕ್ ತೋರಿಸಿದ್ದರು. ಮೊದಲ ಪಂದ್ಯದ ಎರಡೂ ಇನಿಂಗ್ಸ್‌ʼಗಳಲ್ಲಿ ಅವರು ತಲಾ 4 ವಿಕೆಟ್ ಪಡೆದರು. :ವೆಸ್ಟ್ ಇಂಡೀಸ್ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯು ಎರಡು ತಂಡಗಳ ನಡುವಿನ ಕಠಿಣ ಹೋರಾಟದ ನಂತರ, ಎರಡನೇ ಟೆಸ್ಟ್‌ನ ಫಲಿತಾಂಶವೂ ಬಂದಿದೆ. ದಕ್ಷಿಣ ಆಫ್ರಿಕಾ ಸರಣಿಯಲ್ಲಿ 1-0 ಅಂತರದ ಭರ್ಜರಿ ಜಯ ದಾಖಲಿಸಿದ್ದು, ಕೇಶವ್ ಮಹಾರಾಜ್ ಗೆಲುವಿನ ಹೀರೋ ಎನಿಸಿಕೊಂಡರು.‌ ಇದನ್ನೂ ಓದಿ: ಹನುಮಾನ್ ಭಕ್ತ ಕೇಶವ ಮಹಾರಾಜ್ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಮಾಂತ್ರಿಕ ಸ್ಪಿನ್‌ʼನ ಮ್ಯಾಜಿಕ್ ತೋರಿಸಿದ್ದರು. ಮೊದಲ ಪಂದ್ಯದ ಎರಡೂ ಇನಿಂಗ್ಸ್‌ʼಗಳಲ್ಲಿ ಅವರು ತಲಾ 4 ವಿಕೆಟ್ ಪಡೆದರು. ಆದರೆ, ಈ ಪಂದ್ಯ ಡ್ರಾ ಆಗಿತ್ತು. ಆದರೆ ಎರಡನೇ ಪಂದ್ಯದಲ್ಲಿ ಕೇಶವ ಮಹಾರಾಜ್ ಮತ್ತೊಮ್ಮೆ ತಂಡದ ಟ್ರಬಲ್ ಶೂಟರ್ ಆಗಿ ಈ ಪಂದ್ಯದಲ್ಲಿ 5 ವಿಕೆಟ್ ಕಬಳಿಸುವ ಮೂಲಕ ತಂಡವನ್ನು ಗೆಲ್ಲಿಸಿದರು. ಈ ಮೂಲಕ ದಕ್ಷಿಣ ಆಫ್ರಿಕಾದ ದಂತಕಥೆ ಹ್ಯೂ ಟೇಫೀಲ್ಡ್ ಅವರ 64 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಇದನ್ನೂ ಓದಿ: ಕೇಶವ್ ಮಹಾರಾಜ್ ಅವರು ಇಡೀ ಸರಣಿಯಲ್ಲಿ ಒಟ್ಟು 13 ವಿಕೆಟ್‌ ಕಬಳಿಸಿ, ಸರಣಿಯ ಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು. ಇದೀಗ ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಸ್ಪಿನ್ ಬೌಲರ್ ಎನಿಸಿಕೊಂಡಿದ್ದಾರೆ. ಕೇವಲ 51 ಟೆಸ್ಟ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಕೇಶವ್ ಮಹಾರಾಜ್ 171 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಟೇಫೀಲ್ಡ್ 170 ವಿಕೆಟ್‌ʼಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...