ತಂದೆಗೆ ತಕ್ಕ ಮಗ... ಮುಗಿಲೆತ್ತರಕ್ಕೆ ಸಿಕ್ಸರ್‌ ಬಾರಿಸಿ ಮಿಂಚಿದ ರಾಹುಲ್‌ ದ್ರಾವಿಡ್‌ ಪುತ್ರ! ಜೂ. ದ್ರಾವಿಡ್‌ ಸುದೀರ್ಘ ಸಿಕ್ಸ್ ವಿಡಿಯೋ ನೋಡಿ : ಮಹಾರಾಜ ಟಿ20 ಕೆಎಸ್‌ʼಸಿಎ ಟೂರ್ನಿಯಲ್ಲಿ ಸಿಕ್ಸರ್ ಬಾರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯ ಕಂಡ ಅನೇಕರು, ತಂದೆಗೆ ತಕ್ಕ ಮಗ ಎನ್ನುತ್ತಿದ್ದಾರೆ. :ಭಾರತದ ಶ್ರೇಷ್ಠ ಬ್ಯಾಟ್ಸ್‌ʼಮನ್ ಮತ್ತು ಮಾಜಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಪ್ರಸ್ತುತ ಸೋಶಿಯಲ್‌ ಮೀಡಿಯಾದಲ್ಲಿ ಪ್ರಾಬಲ್ಯ ಮೆರೆಯುತ್ತಿದ್ದಾರೆ. 'ಜೂನಿಯರ್ ವಾಲ್' ಮತ್ತು ಮುಂದಿನ 'ಹಿಟ್‌ಮ್ಯಾನ್' ಎಂದೆಲ್ಲಾ ಈತನನ್ನು ಕರೆಯಲಾಗುತ್ತಿದೆ. ಇದನ್ನೂ ಓದಿ: ಮಹಾರಾಜ ಟಿ20 ಕೆಎಸ್‌ʼಸಿಎ ಟೂರ್ನಿಯಲ್ಲಿ ಸಿಕ್ಸರ್ ಬಾರಿಸಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ದೃಶ್ಯ ಕಂಡ ಅನೇಕರು, ತಂದೆಗೆ ತಕ್ಕ ಮಗ ಎನ್ನುತ್ತಿದ್ದಾರೆ. ಮಹಾರಾಜ T20 ಪಂದ್ಯಾವಳಿಯ ಪಂದ್ಯದಲ್ಲಿ, ಸಮಿತ್ ದ್ರಾವಿಡ್ ತಮ್ಮ ಶಕ್ತಿಶಾಲಿ ಸಿಕ್ಸರ್ ಹೊಡೆತದಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಮೈಸೂರು ವಾರಿಯರ್ಸ್ ಪರ ಆಡುತ್ತಿರುವ ಸಮಿತ್, ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ಸುದೀರ್ಘ ಸಿಕ್ಸರ್ ಬಾರಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ. ದ್ರಾವಿಡ್ ಸರ್ ಮಗ ಗುರು ಇವ್ರು..🤯🔥 ಈ ಸಿಕ್ಸ್ ಗೆ ಒಂದು ಚಪ್ಪಾಳೆ ಬರ್ಲೇಬೇಕು..👏👌 📺 ನೋಡಿರಿ T20 | ಬೆಂಗಳೂರು ಮೈಸೂರು | NOWದಲ್ಲಿ — (@) ಸಮಿತ್ ದ್ರಾವಿಡ್ ಅವರ ಸಿಕ್ಸ್‌ʼಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಭಾರೀ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಇನ್ನು ಇಷ್ಟೆಲ್ಲಾ ಪ್ರಶಂಸೆ ಗಳಿಸಿದರೂ ಸಹ, ಸಮಿತ್ʼಗೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಕೇವಲ ಏಳು ರನ್‌ ಮಾತ್ರ ಕೊಡುಗೆ ನೀಡಲು ಸಾಧ್ಯವಾಯಿತು. ಕೊನೆಗೆ ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯುಂಟಾಗಿ ಮೈಸೂರು ವಾರಿಯರ್ಸ್ 4 ರನ್ʼಗಳಿಂದ ಸೋತಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...