ಉತ್ತಮ ಪ್ರದರ್ಶನ ನೀಡುವವರ ಕೈ ಬಿಟ್ಟು, ಕಳಪೆ ಆಟಗಾರರ ಕೈ ಹಿಡಿದ ಬಿಸಿಸಿಐ..ಏನಿವರ ಉದ್ದೇಶ ಎಂದು ಕಿಡಿಕಾರಿದ ಫ್ಯಾನ್ಸ್‌..! : ಟೀಂ ಇಂಡಿಯಾ ಕ್ರಿಕೆಟ್‌ ತಂಡದಲ್ಲಿ ಎಡಗೈ ವೇಗದ ಬೌಲರ್‌ಗಳಿಗೆ ಭಾರಿ ಬೇಡಿಕೆ ಇದೆ. ಜಾಕಿರ್ ಖಾನ್ ಮತ್ತು ಇರ್ಫಾನ್ ಪಠಾಣ್ ಅವರ ನಂತರ ಭಾರತ ತಂಡದಲ್ಲಿ ಅಂತಾ ಹೆಸರಿಸುವಂತಹ ಬೌಲರ್‌ ಯಾರೂ ಎಂಡ್ರಿ ಕೊಟ್ಟಿಲ್ಲ. : ಟೀಂ ಇಂಡಿಯಾ ಕ್ರಿಕೆಟ್‌ ತಂಡದಲ್ಲಿ ಎಡಗೈ ವೇಗದ ಬೌಲರ್‌ಗಳಿಗೆ ಭಾರಿ ಬೇಡಿಕೆ ಇದೆ. ಜಾಕಿರ್ ಖಾನ್ ಮತ್ತು ಇರ್ಫಾನ್ ಪಠಾಣ್ ಅವರ ನಂತರ ಭಾರತ ತಂಡದಲ್ಲಿ ಅಂತಾ ಹೆಸರಿಸುವಂತಹ ಬೌಲರ್‌ ಯಾರೂ ಎಂಡ್ರಿ ಕೊಟ್ಟಿಲ್ಲ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾದಂತಹ ತಂಡಗಳು ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಬೆವರಿಳಿಸಲು ಎಡಗೈ ವೇಗದ ಬೌಲರ್‌ಗಳನ್ನು ಕಣಕ್ಕಿಳಿಸುತ್ತಾರೆ. ಈ ಪರಿಸ್ಥಿತಿಯಲ್ಲಿ ಟಿ20 ಮತ್ತು ಏಕದಿನ ಕ್ರಿಕೆಟ್ ಆಡುತ್ತಿರುವ ಅರ್ದೀಪ್ ಸಿಂಗ್ ಅವರನ್ನು ಕಣಕ್ಕಿಳಿಸಲು ಬಿಸಿಸಿಐ ನಿರ್ಧರಿಸಿದೆ. ಆದರೆ ಕಳೆದ ಆಸ್ಟ್ರೇಲಿಯಾ ಸರಣಿಯಲ್ಲಿ ಪಾದಾರ್ಪಣೆ ಮಾಡಿ ಅಮೋಘ ಪ್ರದರ್ಶನ ನೀಡಿದ ತಮಿಳುನಾಡು ಕ್ರಿಕೆಟಿಗ ನಟರಾಜನ್‌ಗೆ ಬಿಸಿಸಿಐ ಅವಕಾಶ ನೀಡಿಲ್ಲ. 33ರ ಹರೆಯದ ನಟರಾಜನ್ ಉತ್ತಮವಾಗಿ ಬೌಲಿಂಗ್ ಮಾಡುವ ಮೂಲಕ ವಿಕೆಟ್ ಕಬಳಿಸುತ್ತಿದ್ದಾರೆ. ಇತ್ತೀಚೆಗಷ್ಟೇ ತಿರುಚ್ಚಿ ವಿರುದ್ಧ ನಡೆದ ಟಿಎನ್‌ಪಿಎಲ್‌ ಸರಣಿಯಲ್ಲೂ ಕೇವಲ ಆರು ರನ್‌ ನೀಡಿ ಮೂರು ವಿಕೆಟ್‌ಗಳನ್ನು ಉರುಳಿಸಿದ್ದರು. ಅದೇ ರೀತಿ ನಟರಾಜನ್‌ ನೆಲ್ಲಿ ತಂಡದ ವಿರುದ್ಧ 36 ರನ್ ಹಾಗೂ ನಾಲ್ಕು ವಿಕೆಟ್ ಹಾಗೂ ಸೇಲಂ ತಂಡದ ವಿರುದ್ಧ ಮೂರು ರನ್ ಹಾಗೂ ಎರಡು ವಿಕೆಟ್ ಪಡೆದಿದ್ದರು. ಎಂಟು ಓವರ್ ಆಡಿದ ನಟರಾಜನ್ 12 ವಿಕೆಟ್ ಪಡೆದರು. ನಟರಾಜನ್ ಮತ್ತೊಮ್ಮೆ ಭಾರತ ತಂಡದಲ್ಲಿ ಆಡಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ಭಾರತ ತಂಡದಲ್ಲಿ ಆಡಿ ಮೂರು ವರ್ಷಗಳಾಗಿವೆ. ಈ ವಾತಾವರಣದಲ್ಲಿ ಎಲ್ಲಾ ಆಟಗಾರರನ್ನು ಇರಿಸಿಕೊಂಡು ದುಲೀಪ್ ಟ್ರೋಫಿಗೆ ಬಿಸಿಸಿಐ ಈಗಾಗಲೇ ತಂಡವನ್ನು ಪ್ರಕಟಿಸಿದೆ. ಬಿಸಿಸಿಐ ಪ್ರಕಟಿಸಿದ ಆಟಗಾರರ ಪಟ್ಟಿ ಅನೇಕ ವೇಗಿ ಬೌಲರ್‌ಗಳನ್ನು ಒಳಗೊಂಡಿದೆ. ಪದೇ ಪದೇ ಗಾಯಗೊಂಡು ಭಾರತ ತಂಡದಿಂದ ಹೊರಗುಳಿದಿದ್ದ ಉಮ್ರಾನ್ ಮಲಿಕ್ ಮತ್ತು ಪ್ರಸಿದ್ಧ್ ಕೃಷ್ಣ ಅವರಂತಹ ಆಟಗಾರರಿಗೆ ಕೂಡ ತಂಡದಲ್ಲಿ ಅವಾಕಾಶ ನೀಡಲಾಗಿದೆ. ಆದರೆ ದುಲೀಪ್ ಟ್ರೋಫಿಯಲ್ಲೂ ಉತ್ತಮ ದೈಹಿಕ ಸಾಮರ್ಥ್ಯ ಸಾಬೀತು ಪಡಿಸಿರುವ ನಟರಾಜನ್ ಅವರನ್ನು ಬಿಸಿಸಿಐ ಹೊರಗಿಟ್ಟಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...