ದಿನೇಶ್‌ ಕಾರ್ತಿಕ್‌ ಮಲಗುವ ಕೋಣೆಯಲ್ಲಿ ದೆವ್ವದ ಕಾಟ!! ಆ ಕರಾಳ ರಾತ್ರಿಯ ಭಯಾನಕ ಅನುಭವ ಬಹಿರಂಗಪಡಿಸಿದ ಸ್ಟಾರ್‌ ಕ್ರಿಕೆಟಿಗ ಡಿಕೆ : 2013ರಲ್ಲಿ ಟೀಂ ಇಂಡಿಯಾದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಭಯಾನಕ ಅನುಭವವನ್ನು ಎದುರಿಸಬೇಕಾಯಿತು ಎಂದು ದಿನೇಶ್ ಕಾರ್ತಿಕ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ರಾತ್ರಿ ವೇಳೆ ಮಲಗುವ ಕೋಣೆಯಲ್ಲಿ ವಿಚಿತ್ರ ಅನುಭವವಾಗಿತ್ತು. ಆದರೆ ಅಂದು ತಾನು ನೋಡಿದ್ದೇನು ಎಂಬುದು ಡಿಕೆಗೆ ನಿಖರವಾಗಿ ತಿಳಿದಿರಲಿಲ್ಲ. :ಟೀಂ ಇಂಡಿಯಾದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ʼಮನ್ ದಿನೇಶ್ ಕಾರ್ತಿಕ್ ಈ ವರ್ಷ ನಿವೃತ್ತಿ ಘೋಷಿಸಿದ್ದರು. ಆದರೆ ಇದೀಗ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎಸ್‌ ಎ ಟಿ20 ಭಾಗವಾಗಲಿದ್ದಾರೆ. ರಾಜಸ್ಥಾನ ರಾಯಲ್ಸ್‌ʼನ ಫ್ರಾಂಚೈಸ್ ತಂಡವಾದ ಪಾರ್ಲ್ ರಾಯಲ್ಸ್‌ ಪರ ಆಡಲಿದ್ದಾರೆ. ಕ್ರೀಡೆಯ ಜೊತೆಗೆ ಕಾಮೆಂಟೇಟರ್ ಆಗಿಯೂ ಕಾರ್ತಿಕ್ ತಮ್ಮದೇ ಛಾಪು ಮೂಡಿಸಿದ್ದಾರೆ. ಇದೆಲ್ಲದರ ನಡುವೆ ದಿನೇಶ್ ಕಾರ್ತಿಕ್ ವಿಚಿತ್ರ ಅನುಭವದ ಬಗ್ಗೆ ಮಾತನಾಡಿದ್ದು, ಬೆಚ್ಚಿಬೀಳಿಸುವಂತಿದೆ. ಇದನ್ನೂ ಓದಿ: 2013ರಲ್ಲಿ ಟೀಂ ಇಂಡಿಯಾದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಾಗ ಭಯಾನಕ ಅನುಭವವನ್ನು ಎದುರಿಸಬೇಕಾಯಿತು ಎಂದು ದಿನೇಶ್ ಕಾರ್ತಿಕ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ರಾತ್ರಿ ವೇಳೆ ಮಲಗುವ ಕೋಣೆಯಲ್ಲಿ ವಿಚಿತ್ರ ಅನುಭವವಾಗಿತ್ತು. ಆದರೆ ಅಂದು ತಾನು ನೋಡಿದ್ದೇನು ಎಂಬುದು ಡಿಕೆಗೆ ನಿಖರವಾಗಿ ತಿಳಿದಿರಲಿಲ್ಲ. T20 ಲೀಗ್‌ʼನ ಭಾಗವಾದ ಮೊದಲ ಭಾರತೀಯ ಇದೀಗ ಮತ್ತೊಮ್ಮೆ ದಕ್ಷಿಣ ಆಫ್ರಿಕಾದಲ್ಲಿ ಆಡಲು ಕಾರ್ತಿಕ್ ರೆಡಿಯಾಗಿದ್ದಾರೆ. ರಾಯಲ್ಸ್ SA20 ಮೂರನೇ ಋತುವಿನಲ್ಲಿ ಕಾರ್ತಿಕ್ ಅವರನ್ನು ವಿದೇಶಿ ಆಟಗಾರರಲ್ಲಿ ಒಬ್ಬರನ್ನಾಗಿ ಆಯ್ಕೆ ಮಾಡಿದೆ. ಇದರೊಂದಿಗೆ ಈ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇದನ್ನೂ ಓದಿ: ಈ ಲೀಗ್‌ʼನಲ್ಲಿ ಭಾಗವಹಿಸಿ ಮಾತನಾಡಿದ ಕಾರ್ತಿಕ್, "ನಾನು ದಕ್ಷಿಣ ಆಫ್ರಿಕಾದಲ್ಲಿ ಸಾಕಷ್ಟು ನೆನಪುಗಳನ್ನು ಹೊಂದಿದ್ದೇನೆ. ಸ್ಪರ್ಧಾತ್ಮಕ ಕ್ರಿಕೆಟ್‌ʼಗೆ ಮರಳುವುದು ಮತ್ತು ಈ ಅದ್ಭುತ ಸ್ಪರ್ಧೆಯನ್ನು ಗೆಲ್ಲುವುದು ತುಂಬಾ ಅದ್ಭುತವಾಗಿದೆ. ಸಾಕಷ್ಟು ಅನುಭವ, ಗುಣಮಟ್ಟ ಮತ್ತು ಸಾಮರ್ಥ್ಯವನ್ನು ಹೊಂದಿರುವ ಪಾರ್ಲ್ ರಾಯಲ್ಸ್ ತಂಡವನ್ನು ಸೇರಲು ನನಗೆ ತುಂಬಾ ಸಂತೋಷವಾಗಿದೆ. ನಾನು ಖಂಡಿತವಾಗಿಯೂ ಈ ಗುಂಪಿಗೆ ಸೇರಲು ಎದುರು ನೋಡುತ್ತಿದ್ದೇನೆ" ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...