ಪಾಕ್‌ ಪರ ಆಡಿದ್ದ ಈತ ಇನ್ಮುಂದೆ ಟೀಂ ಇಂಡಿಯಾದ ಬೌಲಿಂಗ್ ಕೋಚ್: ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅಚ್ಚರಿಯ ಘೋಷಣೆ‌ : ಸೆಪ್ಟೆಂಬರ್ 19 ರಂದು ಬಾಂಗ್ಲಾದೇಶದ ವಿರುದ್ಧ ಭಾರತದ ಮೊದಲ ಟೆಸ್ಟ್ ಪಂದ್ಯವು ನಡೆಯಲಿದ್ದು, ಭಾರತೀಯ ತಂಡದೊಂದಿಗೆ ಮೋರ್ಕೆಲ್ ಅವರ ಚೊಚ್ಚಲ ನಿಯೋಜನೆ ಅಂದಿನಿಂದ ಪ್ರಾರಂಭವಾಗಲಿದೆ. :ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಮತ್ತು ಪಾಕಿಸ್ತಾನದ ಮಾಜಿ ಕೋಚ್ ಮೋರ್ನೆ ಮೊರ್ಕೆಲ್ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಭಾರತದ ಬೌಲಿಂಗ್ ಕೋಚ್ ಆಗಿ ನೇಮಿಸಿದ್ದಾರೆ. ಮೊರ್ನೆ ಮೊರ್ಕೆಲ್ 2023 ರ ವಿಶ್ವಕಪ್‌ʼನಲ್ಲಿ ಪಾಕಿಸ್ತಾನಕ್ಕೆ ಕೋಚಿಂಗ್‌ ನೀಡಿದ್ದರು, ಇದೀಗ ಸಾಂಪ್ರದಾಯಿಕ ಪ್ರತಿಸ್ಪರ್ಧಿ ಭಾರತ ತಂಡವನ್ನು ಸೇರಲಿದ್ದಾರೆ. ಇದನ್ನೂ ಓದಿ: "ಮೋರ್ನೆ ಮೊರ್ಕೆಲ್ ಅವರನ್ನು ಹಿರಿಯ ಭಾರತ ಪುರುಷರ ತಂಡದ ಬೌಲಿಂಗ್ ಕೋಚ್ ಆಗಿ ನೇಮಿಸಲಾಗಿದೆ" ಎಂದು ಜಯ್ ಶಾ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸೆಪ್ಟೆಂಬರ್ 19 ರಂದು ಬಾಂಗ್ಲಾದೇಶದ ವಿರುದ್ಧ ಭಾರತದ ಮೊದಲ ಟೆಸ್ಟ್ ಪಂದ್ಯವು ನಡೆಯಲಿದ್ದು, ಭಾರತೀಯ ತಂಡದೊಂದಿಗೆ ಮೋರ್ಕೆಲ್ ಅವರ ಚೊಚ್ಚಲ ನಿಯೋಜನೆ ಅಂದಿನಿಂದ ಪ್ರಾರಂಭವಾಗಲಿದೆ. ಅಂದಹಾಗೆ 39 ವರ್ಷದ ಮೋರ್ನೆ, ಹೊಸ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಗ್ರ ಆಯ್ಕೆಯಾಗಿದ್ದರು. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಪರ 86 ಟೆಸ್ಟ್‌, 117 ಮತ್ತು 44 T20I ಗಳೊಂದಿಗೆ ಒಟ್ಟು 544 ಅಂತರಾಷ್ಟ್ರೀಯ ವಿಕೆಟ್‌ʼಗಳನ್ನು ಗಳಿಸುವ ಮೂಲಕ ಮೋರ್ಕೆಲ್ ಪ್ರಭಾವಶಾಲಿ ದಾಖಲೆಯನ್ನು ಹೊಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...