35 ವರ್ಷವಾದ್ರೂ ಬೋರ್ಡ್‌ ಎಕ್ಸಾಂ ಬರೆದ್ರಾ ವಿರಾಟ್‌ ಕೊಹ್ಲಿ!? ಟೀಂ ಇಂಡಿಯಾ ದಿಗ್ಗಜನ ಉತ್ತರ ಪತ್ರಿಕೆ ಲೀಕ್‌... : ಇತ್ತೀಚೆಗಷ್ಟೇ ಬಿಹಾರದ ವಿದ್ಯಾರ್ಥಿಯೊಬ್ಬನ ಒಎಂಆರ್‌ ಶೀಟ್ ವೈರಲ್ ಆಗಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಎಂದು ಬರೆದುಕೊಂಡಿದ್ದ. ಇಷ್ಟೇ ಅಲ್ಲ, ಈ ಶಾಲಾ ಬಾಲಕ ಕೊಹ್ಲಿಯ ಪೋಷಕರ ಹೆಸರನ್ನು ತನ್ನ ಪೋಷಕರ ಹೆಸರಿನ ಬದಲಿಗೆ 'ಸರೋಜ್ ಕೊಹ್ಲಿ ಮತ್ತು ಪ್ರೇಮ್ ನಾಥ್ ಕೊಹ್ಲಿ' ಎಂದು ಬರೆದಿದ್ದಾನೆ. :ಟೀಂ ಇಂಡಿಯಾದ ದಿಗ್ಗಜ ಬ್ಯಾಟರ್‌ ವಿರಾಟ್‌ ಕೊಹ್ಲಿಗೆ ಅಪಾರ ಅಭಿಮಾನಿ ಬಳಗವಿದೆ. ಈ ಅಭಿಮಾನಿಗಳು ತಮ್ಮ ಹೀರೋಗೆ ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಅಭಿಮಾನ ವ್ಯಕ್ತಪಡಿಸಲು ಮುಂದಾಗುತ್ತಾರೆ. ಇದೀಗ ಬಿಹಾರದ ವಿದ್ಯಾರ್ಥಿಯೊಬ್ಬ ವಿರಾಟ್ ಕೊಹ್ಲಿ ಮೇಲೆ ತನ್ನ ಪ್ರೀತಿ ಎಷ್ಟಿದೆ ಎಂದು ತೋರಿಸಲು ಎಲ್ಲಾ ಮಿತಿಗಳನ್ನು ದಾಟಿ ಒಂದು ಹೆಜ್ಜೆ ಮುಂದೆಯೇ ಇಟ್ಟಿದ್ದಾನೆ. ಇದನ್ನೂ ಓದಿ: ಇತ್ತೀಚೆಗಷ್ಟೇ ಬಿಹಾರದ ವಿದ್ಯಾರ್ಥಿಯೊಬ್ಬನ ಒಎಂಆರ್‌ ಶೀಟ್ ವೈರಲ್ ಆಗಿದ್ದು, ಅದರಲ್ಲಿ ವಿರಾಟ್ ಕೊಹ್ಲಿ ಎಂದು ಬರೆದುಕೊಂಡಿದ್ದ. ಇಷ್ಟೇ ಅಲ್ಲ, ಈ ಶಾಲಾ ಬಾಲಕ ಕೊಹ್ಲಿಯ ಪೋಷಕರ ಹೆಸರನ್ನು ತನ್ನ ಪೋಷಕರ ಹೆಸರಿನ ಬದಲಿಗೆ 'ಸರೋಜ್ ಕೊಹ್ಲಿ ಮತ್ತು ಪ್ರೇಮ್ ನಾಥ್ ಕೊಹ್ಲಿ' ಎಂದು ಬರೆದಿದ್ದಾನೆ. ಜೊತೆಗೆ ಶಾಲೆಯ ಹೆಸರನ್ನು 'ಇಂಡಿಯನ್ ಪ್ರೀಮಿಯರ್ ಲೀಗ್' ಎಂದು ಮತ್ತು ಶಾಲೆಯ ಕೋಡ್ ಅನ್ನು '18 ' ಎಂದು ಭರ್ತಿ ಮಾಡಿದ್ದಾನೆ. ಇದನ್ನೂ ಓದಿ: ಇಷ್ಟಕ್ಕೇ ನಿಂತರೆ ಸುಮ್ಮನಿರಬಹುದೇನೋ.... ಆದರೆ ಇಡೀ ಒಎಂಆರ್‌ ಶೀಟ್‌ʼನಲ್ಲಿ 18 ಸಂಖ್ಯೆ ಬರುವಂತೆ ಉತ್ತರವನ್ನು ತುಂಬಿದ್ದಾನೆ. ಸದ್ಯ ಆ ಶೀಟ್ ವೈರಲ್ ಆಗಿದೆ. — (@IndiaCrick18158) ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...