ನೀವು ಸಿದ್ಧರಿದ್ದೀರಾ?- ಎರಡನೇ ಮದುವೆ ವದಂತಿ ಮಧ್ಯೆ ಸಾನಿಯಾ ಮಿರ್ಜಾ ಮಹತ್ವದ ಹೆಜ್ಜೆ... ಮೂಗುತಿ ಸುಂದರಿ ಬಹುದಿನದ ಕನಸು ನನಸು! :‌ ಕೆಲ ದಿನಗಳ ಹಿಂದೆ ಸಾನಿಯಾ ಮಿರ್ಜಾ ಹೆಸರು ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿಯೊಂದಿಗೆ ತಳುಕು ಹಾಕಿತ್ತು. ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ ಆ ಬಳಿಕ ಶಮಿ ಈ ವದಂತಿಗೆ ಬ್ರೇಕ್‌ ಹಾಕಿದ್ದರು. :‌ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆ ವಿಚ್ಛೇದನ ಪಡೆದ ನಂತರ ಅವರ ಎರಡನೇ ಮದುವೆ ಬಗ್ಗೆ ಭಾರೀ ಸುದ್ದಿ ವೈರಲ್‌ ಆಗಿತ್ತು. ಇದೀಗ ಸ್ವತಃ ಅವರೇ ಒಂದು ವಿಡಿಯೋವನ್ನು ಶೇರ್‌ ಮಾಡಿದ್ದು, ಕೆಲ ಮಾಹಿತಿಯನ್ನು ನೀಡಿದ್ದಾರೆ. ಕೆಲ ದಿನಗಳ ಹಿಂದೆ ಸಾನಿಯಾ ಮಿರ್ಜಾ ಹೆಸರು ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿಯೊಂದಿಗೆ ತಳುಕು ಹಾಕಿತ್ತು. ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ಚರ್ಚೆಗಳು ನಡೆದಿದ್ದವು. ಆದರೆ ಆ ಬಳಿಕ ಶಮಿ ಈ ವದಂತಿಗೆ ಬ್ರೇಕ್‌ ಹಾಕಿದ್ದರು. ಇದನ್ನೂ ಓದಿ: ಇದೀಗ ಸಾನಿಯಾ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ತನ್ನ ಇನ್‌ʼಸ್ಟಾಗ್ರಾಂ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಟೆನಿಸ್ ತರಬೇತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಸಾನಿಯಾ ಮಿರ್ಜಾ ಟೆನಿಸ್ ಅಕಾಡೆಮಿ ಮಾರ್ಚ್ 2013 ರಲ್ಲಿ, ಭಾರತೀಯ ಟೆನಿಸ್ ಆಟಗಾರರನ್ನು ವಿಶ್ವ-ಕ್ಲಾಸ್ ಟೆನಿಸ್ ತರಬೇತಿ ನೀಡುವ ಉದ್ದೇಶದಿಂದ ಪ್ರಾರಂಭಿಸಲಾಯಿತು. ಇದೀಗ ಸೆಪ್ಟೆಂಬರ್ 9 ರಿಂದ 13 ರವರೆಗೆ ಐದು ದಿನಗಳವರೆಗೆ ತನ್ನ ಅಕಾಡೆಮಿಯಲ್ಲಿ ವಿಶೇಷ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಇದರಲ್ಲಿ 12 ವರ್ಷದಿಂದ 18 ವರ್ಷಗಳವರೆಗೆ ಟೆನಿಸ್ ಆಟಗಾರರಾಗಲು ಬಯಸುವ ಆಟಗಾರರು ಭಾಗವಹಿಸಲು ಸಾಧ್ಯವಾಗುತ್ತದೆ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ. ಇದನ್ನೂ ಓದಿ: "ಚಾಂಪಿಯನ್ ಆಗುವ ಮೊದಲ ಹೆಜ್ಜೆ ನಿಮ್ಮ ಮೇಲೆ ನಂಬಿಕೆ ಇಡುವುದು. ಹೀಗಿರುವಾಗ ನಿಮ್ಮ ಪ್ರತಿಭೆಯನ್ನು ಉತ್ತಮವಾಗಿ ಪ್ರೋತ್ಸಾಹಿಸಲು ನಮ್ಮ ಅಕಾಡೆಮಿ ಸಹಾಯ ಮಾಡುತ್ತದೆ. ನಮ್ಮಲ್ಲಿ ಅನೇಕ ಅನುಭವಿ ತರಬೇತುದಾರರು ಇದ್ದಾರೆ. ಟೆನಿಸ್‌ʼನೊಂದಿಗೆ ಸಂಪರ್ಕ ಹೊಂದಿದ ಪ್ರಮುಖ ವಿಷಯಗಳ ಬಗ್ಗೆ, ನನ್ನ ಅನುಭವಗಳ ಬಗ್ಗೆಯೂ ನಾನು ನಿಮ್ಮೊಂದಿಗೆ ಮಾತನಾಡುತ್ತೇನೆ. ನೀವು ಚಾಂಪಿಯನ್ ಆಗಲು ಸಿದ್ಧರಿದ್ದೀರಾ?" ಎಂದು ವಿಡಿಯೋ ಮೂಲಕ ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...