ಹಾರ್ದಿಕ್‌ ಪಾಂಡ್ಯ ಇನ್ನೊಂದು ಪಂದ್ಯ ಆಡಿದ್ರೆ ಸಾಕು ಗಂಗೂಲಿಯ ಈ ವಿಶ್ವದಾಖಲೆ ಉಡೀಸ್...!‌ ಕೊಹ್ಲಿಯೂ ಮುಟ್ಟದ ಅಸಾಮಾನ್ಯ ರೆಕಾರ್ಡ್‌ ಅದು 2025: ಹಾರ್ದಿಕ್ ಕೇವಲ ಒಂದು ಪಂದ್ಯವನ್ನು ಆಡಿದರೆ ಈ ದಾಖಲೆ ಮುರಿಯುವುದು ಗ್ಯಾರಂಟಿ. ಪಾಂಡ್ಯ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದು ಅವಶ್ಯಕ. ಈ ಐಸಿಸಿ ಟೂರ್ನಿಯಲ್ಲಿ ಆಡಿದರೆ ಗಂಗೂಲಿ ವಿಶ್ವ ದಾಖಲೆ ಮುರಿಯುವ ಅವಕಾಶ ಸಿಗಲಿದೆ. 2025:ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಹೆಸರಿನಲ್ಲಿ ಒಂದು ವಿಶೇಷವಾದ ವಿಶ್ವದಾಖಲೆ ಇದೆ. ಆ ದಾಖಲೆಯನ್ನು ಇದುವರೆಗೂ ಯಾರೂ ಮುರಿಯಲು ಸಾಧ್ಯವಾಗಿಲ್ಲ. ಆದರೆ ಇದೀಗ ಭಾರತದ ಸ್ಫೋಟಕ ಆಲ್‌ʼರೌಂಡರ್ ಹಾರ್ದಿಕ್ ಪಾಂಡ್ಯ ಈ ಶ್ರೇಷ್ಠ ದಾಖಲೆಯನ್ನು ಮುರಿಯುವ ತವಕದಲ್ಲಿದ್ದಾರೆ. ಇದನ್ನೂ ಓದಿ: ಹಾರ್ದಿಕ್ ಕೇವಲ ಒಂದು ಪಂದ್ಯವನ್ನು ಆಡಿದರೆ ಈ ದಾಖಲೆ ಮುರಿಯುವುದು ಗ್ಯಾರಂಟಿ. ಪಾಂಡ್ಯ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದು ಅವಶ್ಯಕ. ಈ ಐಸಿಸಿ ಟೂರ್ನಿಯಲ್ಲಿ ಆಡಿದರೆ ಗಂಗೂಲಿ ವಿಶ್ವ ದಾಖಲೆ ಮುರಿಯುವ ಅವಕಾಶ ಸಿಗಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ತಂಡ 2024 ರ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಇದೀಗ ತಂಡದ ಕಣ್ಣು ಮುಂದಿನ ವರ್ಷ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೇಲೆ ನೆಟ್ಟಿದೆ. 2013ರಿಂದ ಭಾರತಕ್ಕೆ ಈ ಟೂರ್ನಿಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಈ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅವರ ಗುರಿ ಭಾರತದ ದಂತಕಥೆ ಸೌರವ್ ಗಂಗೂಲಿ ಅವರ ವಿಶ್ವ ದಾಖಲೆಯಾಗಿದೆ. ಇದನ್ನು ಮುರಿಯುವ ಓಟದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕೂಡ ಹಿಂದುಳಿದಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವದ ಬ್ಯಾಟ್ಸ್‌ʼಮನ್ ಗಂಗೂಲಿ. ಹಾರ್ದಿಕ್ ಪಾಂಡ್ಯ ಈ ದಾಖಲೆ ಮುರಿಯುವ ಸನಿಹದಲ್ಲಿದ್ದಾರೆ. ಗಂಗೂಲಿ 2004ರಲ್ಲಿ ತಮ್ಮ ಕೊನೆಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯನ್ನು ಆಡಿದ್ದರು. ಅಂದಿನಿಂದ, ಈ ಐಸಿಸಿ ಈವೆಂಟ್ ಅನ್ನು 4 ಬಾರಿ ಆಯೋಜಿಸಲಾಗಿದೆ, ಆದರೆ ಅವರು ಮಾಡಿದ ಹೆಚ್ಚಿನ ಸಿಕ್ಸರ್‌ಗಳ ವಿಶ್ವದಾಖಲೆ ಇನ್ನೂ ಅಜೇಯವಾಗಿದೆ. ಗಂಗೂಲಿ 13 ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ 17 ಸಿಕ್ಸರ್ ಬಾರಿಸಿದ್ದಾರೆ. ಹಾರ್ದಿಕ್ ಪಾಂಡ್ಯ 2025ರಲ್ಲಿ ಈ ಟೂರ್ನಿಯ ಭಾಗವಾದರೆ ಗಂಗೂಲಿ ದಾಖಲೆ ಮುರಿಯಬಹುದು. ಇದುವರೆಗೆ ಆಡಿರುವ 5 ಚಾಂಪಿಯನ್ಸ್ ಟ್ರೋಫಿ ಪಂದ್ಯಗಳಲ್ಲಿ ಹಾರ್ದಿಕ್ 11 ಸಿಕ್ಸರ್ ಬಾರಿಸಿದ್ದಾರೆ. ಗಂಗೂಲಿ ಅವರನ್ನು ಹಿಂದಿಕ್ಕಲು ಕೇವಲ 7 ಸಿಕ್ಸರ್‌ʼಗಳು ಬೇಕಾಗಿವೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಬ್ಯಾಟ್ಸ್‌ಮನ್‌ʼಗಳು ಸೌರವ್ ಗಂಗೂಲಿ - 17ಕ್ರಿಸ್ ಗೇಲ್ - 15ಇಯಾನ್ ಮಾರ್ಗನ್ - 14ಶೇನ್ ವ್ಯಾಟ್ಸನ್ - 12ಪಾಲ್ ಕಾಲಿಂಗ್ವುಡ್ - 11 ಚಾಂಪಿಯನ್ಸ್ ಟ್ರೋಫಿಯಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಟಾಪ್ 5 ಭಾರತೀಯರು ಸೌರವ್ ಗಂಗೂಲಿ - 17ಹಾರ್ದಿಕ್ ಪಾಂಡ್ಯ - 11ಶಿಖರ್ ಧವನ್ - 8ರೋಹಿತ್ ಶರ್ಮಾ - 8ವಿರಾಟ್ ಕೊಹ್ಲಿ - 8 ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...