ಸರ್ಕಾರಿ ಉದ್ಯೋಗದ ಆಫರ್‌ ಬೇಡವೆಂದು ತಿರಸ್ಕರಿಸಿದ ಪ್ಯಾರಿಸ್ ಒಲಿಂಪಿಕ್ ಪದಕ ವಿಜೇತ ಸರಬ್ಜೋತ್ ಸಿಂಗ್! ಕೊಟ್ಟ ಕಾರಣ ಇದು : ಶೂಟಿಂಗ್‌ʼನಲ್ಲಿ ಮಿಶ್ರ ತಂಡ ಪಂದ್ಯದಲ್ಲಿ ಮನು ಭಾಕರ್ ಜೊತೆ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ಸರಬ್ಜೋತ್ ಸಿಂಗ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಸರಬ್ಜೋತ್‌ʼಗೆ ಹರಿಯಾಣ ಸರ್ಕಾರವು ಸರ್ಕಾರಿ ಕೆಲಸವನ್ನು ನೀಡಿತ್ತು. :ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ ಭಾರತಕ್ಕೆ 6 ಪದಕಗಳು ಬಂದಿವೆ. ಅದರಲ್ಲಿ ಕಂಚಿನ ಪದಕ ವಿಜೇತ ಕ್ರೀಡಾಪಟುಗಳಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗವನ್ನು ನೀಡಲಾಗಿತ್ತು. ಆದರೆ ಆ ಪ್ರಸ್ತಾಪವನ್ನು ಅವರು ತಿರಸ್ಕರಿಸಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ್ದಾರೆ. ಇದನ್ನೂ ಓದಿ: ಶೂಟಿಂಗ್‌ʼನಲ್ಲಿ ಮಿಶ್ರ ತಂಡ ಪಂದ್ಯದಲ್ಲಿ ಮನು ಭಾಕರ್ ಜೊತೆ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ಸರಬ್ಜೋತ್ ಸಿಂಗ್ ಈ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಸರಬ್ಜೋತ್‌ʼಗೆ ಹರಿಯಾಣ ಸರ್ಕಾರವು ಸರ್ಕಾರಿ ಕೆಲಸವನ್ನು ನೀಡಿತ್ತು. ಇದನ್ನೂ ಓದಿ: ಈ ಬಗ್ಗೆ ಮಾತನಾಡಿದ ಪದಕ ವಿಜೇತ ಸರಬ್ಜೋತ್, ʼನನ್ನ ಕುಟುಂಬದವರೂ ನನ್ನನ್ನು ಒಳ್ಳೆಯ ಕೆಲಸ ಹುಡುಕುವಂತೆ ಕೇಳುತ್ತಿದ್ದಾರೆ, ಆದರೆ ನಾನು ಶೂಟಿಂಗ್ʼನಲ್ಲೇ ನನ್ನನ್ನು ಮುಂದುವರೆಸಿಕೊಂಡು ಹೋಗಬೇಕೆಂದಿದ್ದೇನೆ. ನನ್ನ ನಿರ್ಧಾರಗಳಿಗೆ ವಿರುದ್ಧವಾಗಿ ಹೋಗಲು ನಾನು ಬಯಸುವುದಿಲ್ಲ, ಆದ್ದರಿಂದ ನಾನು ಇದೀಗ ಕೆಲಸ ಮಾಡಲು ಸಾಧ್ಯವಿಲ್ಲ" ಎಂದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ʼನ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಮತ್ತು ಮನು ಒಟ್ಟಾಗಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...