ಈ ನಾಲ್ವರು ಕ್ರಿಕೆಟಿಗರ ಟೆಸ್ಟ್‌ ಕೆರಿಯರ್‌ ಅಂತ್ಯ: ಟೀಂ ಇಂಡಿಯಾ ಗೆಲುವಿಗೆ ಶ್ರಮಿಸಿದ್ದ ಈ ಆಟಗಾರರಿಗೆ ನಿವೃತ್ತಿ ಹಾದಿ ತೋರಿಸಿದ ಬಿಸಿಸಿಐ! : ಭಾರತೀಯ ಕ್ರಿಕೆಟ್ ತಂಡದಲ್ಲಿ ಆಯ್ಕೆಯಾಗುವುದು ಎಷ್ಟು ಕಷ್ಟವೋ, ಟೀಂ ಇಂಡಿಯಾದಲ್ಲಿ ತನ್ನನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟಕರ. ಇನ್ನು ಆ ಆಟಗಾರರು ಯಾರೆಂದು ತಿಳಿಯೋಣ. :ಟೀಂ ಇಂಡಿಯಾದ ನಾಲ್ವರು ಕ್ರಿಕೆಟಿಗರ ಟೆಸ್ಟ್ ವೃತ್ತಿಜೀವನವು ಬಹುತೇಕ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಆದರೆ ಅವರಿನ್ನೂ ತಮ್ಮ ನಿವೃತ್ತಿಯನ್ನು ಘೋಷಿಸಿಲ್ಲ. ಭಾರತೀಯ ಕ್ರಿಕೆಟ್ ತಂಡದಲ್ಲಿ ಆಯ್ಕೆಯಾಗುವುದು ಎಷ್ಟು ಕಷ್ಟವೋ, ಟೀಂ ಇಂಡಿಯಾದಲ್ಲಿ ತನ್ನನ್ನು ಉಳಿಸಿಕೊಳ್ಳುವುದು ಕೂಡ ಅಷ್ಟೇ ಕಷ್ಟಕರ. ಇನ್ನು ಆ ಆಟಗಾರರು ಯಾರೆಂದು ತಿಳಿಯೋಣ. ಇದನ್ನೂ ಓದಿ: ಶಿಖರ್ ಧವನ್2013 ರಲ್ಲಿ, ಶಿಖರ್ ಧವನ್ ಆಸ್ಟ್ರೇಲಿಯಾ ವಿರುದ್ಧದ ಚೊಚ್ಚಲ ಪಂದ್ಯದಲ್ಲಿ ಶತಕ ಗಳಿಸಿದರು. ಆದರೆ 2018 ರ ಇಂಗ್ಲೆಂಡ್ ಪ್ರವಾಸದ ಸಮಯದಲ್ಲಿ ಕಳಪೆ ಫಾರ್ಮ್‌ʼನಿಂದಾಗಿ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಯಿತು. ಧವನ್ ಅವರ ಟೆಸ್ಟ್ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು ಭಾರತಕ್ಕಾಗಿ ಇದುವರೆಗೆ 34 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 40.61 ರ ಸರಾಸರಿಯೊಂದಿಗೆ 2315 ರನ್ ಗಳಿಸಿದ್ದಾರೆ. ಗರಿಷ್ಠ ಸ್ಕೋರ್ 190 ರನ್. ಇನ್ನು ಧವನ್‌ʼಗೆ ಈಗ 38 ವರ್ಷ ವಯಸ್ಸಾಗಿದ್ದು, ಟೆಸ್ಟ್ ಕ್ರಿಕೆಟ್‌ʼನಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಬರುವುದು ಅಸಾಧ್ಯದ ಮಾತು. ಕರುಣ್ ನಾಯರ್:ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ಕರುಣ್ ನಾಯರ್ ಟ್ರಿಪಲ್ ಸೆಂಚುರಿ ಬಾರಿಸಿದ್ದರು. ಆ ಸಂದರ್ಭಲ್ಲಿ ಈ ಆಟಗಾರ ಭಾರತದಲ್ಲಿ ಅದ್ಭುತ ಮಾಡುತ್ತಾನೆ ಎಂದು ಹೇಳಲಾಗಿತ್ತು. ಆದರೆ ತ್ರಿಶತಕ ಬಾರಿಸಿದ ಬಳಿಕ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ಕಾರಣ ಅವರನ್ನು ತಂಡದಿಂದ ಕೈಬಿಡಲಾಯಿತು. ಕರುಣ್ ನಾಯರ್ ನವೆಂಬರ್ 2016 ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಾದಾರ್ಪಣೆ ಮಾಡಿದ್ದರು. ನಂತರ ಕೊನೆಯ ಬಾರಿಗೆ ಮಾರ್ಚ್ 2017 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದರು. ವೃದ್ಧಿಮಾನ್ ಸಹಾ:ವೃದ್ಧಿಮಾನ್ ಸಹಾ ಉತ್ತಮ ವಿಕೆಟ್ ಕೀಪರ್. ಆದರೆ, ಟೆಸ್ಟ್‌ʼನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಸಹಾ 2010ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್‌ʼಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ, ಸಹಾ ಕೇವಲ 40 ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಾಯಿತು. ಇದನ್ನೂ ಓದಿ: ಭುವನೇಶ್ವರ್ ಕುಮಾರ್ಭುವನೇಶ್ವರ್ ಕುಮಾರ್ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ ಪರ 24 ಜನವರಿ 2018 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಆಡಿದರು. 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಜೋಹಾನ್ಸ್‌ಬರ್ಗ್ ಟೆಸ್ಟ್ ಪಂದ್ಯದಲ್ಲಿ ಭುವನೇಶ್ವರ್ ಅತ್ಯುತ್ತಮ ಪ್ರದರ್ಶನಕ್ಕಾಗಿ 'ಮ್ಯಾನ್ ಆಫ್ ದಿ ಮ್ಯಾಚ್' ಆಗಿದ್ದರು. ಆದರೆ ಇದರ ನಂತರ ಅವರ ಟೆಸ್ಟ್ ವೃತ್ತಿಜೀವನವು ಬಹುತೇಕ ಕೊನೆಗೊಂಡಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...