ಬೊಜ್ಜು ಹೆಚ್ಚಾಗಿದೆ ಅಂತಾ Indiaದಿಂದ ಹೊರಬಿದ್ದಿದ್ದ ಈ ಕ್ರಿಕೆಟಿಗನಿಗೆ ಕ್ಯಾಪ್ಟನ್ಸಿ: ಕೊನೆಗೂ ನನಸಾಯ್ತು ʼತ್ರಿಶತಕ ವೀರʼನ ಕನಸು : ಆಗಸ್ಟ್ 27ರಿಂದ 30ರವರೆಗೆ ಕೊಯಮತ್ತೂರಿನಲ್ಲಿ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಇಲೆವೆನ್ ವಿರುದ್ಧ ಮುಂಬೈ ಸಿಎ ಇಲೆವೆನ್ ಪರ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ. :ಭಾರತದ ಶ್ರೀಲಂಕಾ ಪ್ರವಾಸ ಕೊನೆಗೊಂಡಿದೆ. ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಅವಮಾನಕರ ಸೋಲನ್ನು ಎದುರಿಸಬೇಕಾಯಿತು. ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಈ ವರ್ಷ ಮುಂಬರುವ ಬುಚಿ ಬಾಬು ಬಹುದಿನದ ಪಂದ್ಯಾವಳಿಯಲ್ಲಿ ಮುಂಬೈ ಪರ ಪಂದ್ಯ ಆಡುವುದನ್ನು ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಆಗಸ್ಟ್ 27ರಿಂದ 30ರವರೆಗೆ ಕೊಯಮತ್ತೂರಿನಲ್ಲಿ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ​​ಇಲೆವೆನ್ ವಿರುದ್ಧ ಮುಂಬೈ ಸಿಎ ಇಲೆವೆನ್ ಪರ ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ. ಮುಂಬೈ ಕ್ರಿಕೆಟ್ ಸಂಸ್ಥೆಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿ, “ಸೂರ್ಯಕುಮಾರ್ ಮುಂಬೈ ಪರ ಎರಡನೇ ಪಂದ್ಯ ಆಡಲಿದ್ದಾರೆ. ಅವರು ಭಾರತದ ಪರ ಎಲ್ಲಾ ಮೂರು ಸ್ವರೂಪಗಳನ್ನು ಆಡುತ್ತಾರೆ. ಆದರೆ ಬಿಡುವಿರುವಾಗ ಮುಂಬೈ ತಂಡದ ಪರ ಲಭ್ಯವಿರುತ್ತಾರೆ. ರಣಜಿ ಟ್ರೋಫಿಯ ಹೊರತಾಗಿ, ಅವರು ತಂಡದ ಯುವಕರಿಗೆ ಸ್ಫೂರ್ತಿ ನೀಡಲು ಬುಚ್ಚಿ ಬಾಬು, ಕೆ ಎಸ್‌ ಸಿ ಎ (ಗೋಲ್ಡ್ ಕಪ್) ನಲ್ಲಿ ಆಡಲಿದ್ದಾರೆ" ಎಂದು ಹೇಳಿದ್ದಾರೆ. ಇದನ್ನೂ ಓದಿ: ಇನ್ನು ಟೆಸ್ಟ್ ಸ್ಪೆಷಲಿಸ್ಟ್ ಸರ್ಫರಾಜ್ ಖಾನ್ ಅವರನ್ನು ಮುಂಬೈ ತಂಡದ ನಾಯಕರನ್ನಾಗಿ ಮಾಡಲಾಗಿದೆ. ಒಂದು ಸಮಯದಲ್ಲಿ ಈ ಆಟಗಾರನಿಗೆ ಫಿಟ್ನೆಸ್‌ ಇಲ್ಲ, ಬೊಜ್ಜು ತುಂಬಿದೆ ಎಂದು ಟೀಂ ಇಂಡಿಯಾದಿಂದ ಹೊರಗಿಡಲಾಗಿತ್ತು. ಆದರೆ ಇದೀಗ ಈ ಆಟಗಾರನಿಗೆ ಮುಂಬೈ ತಂಡದ ನಾಯಕತ್ವ ನೀಡಲಾಗಿದೆ. ಅಷ್ಟೇ ಅಲ್ಲದೆ ಈತನ ನಾಯಕತ್ವದಲ್ಲಿ ಸೂರ್ಯಕುಮಾರ್ ಆಡಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...