ಮೊನೆಯಷ್ಟೇ 3ನೇ ಮದುವೆಯಾಗಿದ್ದ ಶೋಯೆಬ್‌ ಮಲಿಕ್ 4ನೇ ಮದುವೆಗೆ ರೆಡಿಯಾದ್ರಾ!? ಮತ್ತೋರ್ವ ನಟಿ ಜೊತೆ ಸಾನಿಯಾ ಮಾಜಿ ಪತಿ ಫ್ಲರ್ಟಿಂಗ್‌!! : ಸೋಶಿಯಲ್‌ ಮೀಡಿಯಾದಲ್ಲಿ ಕ್ರಿಕೆಟಿಗರು ಮೆಸೇಜ್‌ ಮಾಡಿದ್ದಾರೆಯೇ ಎಂದು ಪಾಕಿಸ್ತಾನಿ ನಟಿ ನವಾಲ್ ಸಯೀದ್ ಎಂಬವರ ಬಳಿ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ನಟಿ ನೀಡಿದ ಉತ್ತರದ ಬಳಿಕ ಮಲಿಕ್ ಮತ್ತೊಮ್ಮೆ ತನ್ನ ಫ್ಲರ್ಟಿಂಗ್ ನಡವಳಿಕೆಯಿಂದ ಸುದ್ದಿಯಾಗಿದ್ದಾರೆ. :ಭಾರತದ ಮಾಜಿ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಇತ್ತೀಚೆಗೆ ಪತಿ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ʼಗೆ ಡಿವೋರ್ಸ್‌ ನೀಡಿದ್ದರು. ಆ ಬಳಿಕ ಶೋಯೆಬ್‌ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದರು. ಆದರೆ ಇದೀಗ ಮತ್ತೊಮ್ಮೆ ಶೋಯೆಬ್‌ ಸುದ್ದಿಯಾಗಿದ್ದಾರೆ. ಇದನ್ನೂ ಓದಿ: ಸೋಶಿಯಲ್‌ ಮೀಡಿಯಾದಲ್ಲಿ ಕ್ರಿಕೆಟಿಗರು ಮೆಸೇಜ್‌ ಮಾಡಿದ್ದಾರೆಯೇ ಎಂದು ಪಾಕಿಸ್ತಾನಿ ನಟಿ ನವಾಲ್ ಸಯೀದ್ ಎಂಬವರ ಬಳಿ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ನಟಿ ನೀಡಿದ ಉತ್ತರದ ಬಳಿಕ ಮಲಿಕ್ ಮತ್ತೊಮ್ಮೆ ತನ್ನ ಫ್ಲರ್ಟಿಂಗ್ ನಡವಳಿಕೆಯಿಂದ ಸುದ್ದಿಯಾಗಿದ್ದಾರೆ. ಶೋಯೆಬ್‌ ತನ್ನ ಇನ್ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ಜನವರಿ 20 ರಂದು ತನ್ನ ಮರು-ಮದುವೆ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು. ಸಾನಿಯಾ ಮತ್ತು ಶೋಯೆಬ್ ಅವರ ವಿಚ್ಛೇದನದ ವದಂತಿಗಳು ಅದಕ್ಕೂ ಮುನ್ನ ಭಾರೀ ಸುದ್ದಿಯಾಗಿದ್ದವು. ಶೋಯೆಬ್ ಮಲಿಕ್ ನವಾಲ್ ಸಯೀದ್ ಜೊತೆ ಫ್ಲರ್ಟಿಂಗ್ ಮಾಡುತ್ತಿದ್ದಾರಾ? ಪಾಕಿಸ್ತಾನಿ ನಟಿ ನವಲ್ ಸಯೀದ್ ಅವರನ್ನು ರಂಜಾನ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅಲ್ಲಿ ನಿರೂಪಕರು ಆಕೆಗೆ ಸಾಮಾಜಿಕ ಮಾಧ್ಯಮದಲ್ಲಿ ಯಾರಿಂದಲಾದರೂ, ಫ್ಲರ್ಟಿ ಮೆಸೇಜ್‌ ಬಂದಿದೆಯೇ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ʼಕ್ರಿಕೆಟಿಗರಿಂದ ನನಗೆ ಸಾಕಷ್ಟು ಮೆಸೇಜ್‌ʼಗಳು ಬರುತ್ತವೆ" ಎಂದಿದ್ದಾರೆ. ಇದೇ ಸಂದರ್ಭದಲ್ಲಿ ನಿರೂಪಕ ನೇರವಾಗಿ ಶೋಯೆಬ್ ಮಲಿಕ್ ಹೆಸರನ್ನು ಉಲ್ಲೇಖಿಸಿದ್ದರು. ಆ ಹೆಸರು ಕೇಳುತ್ತಿದ್ದಂತೆ, ನಟಿ ನಕ್ಕು ಪ್ರತಿಕ್ರಿಯಿಸಿದರೆ ಮೌನವಹಿಸಿದ್ದರು. ಇದನ್ನೂ ಓದಿ: ಸನಾ ಜಾವೇದ್ ಅವರನ್ನು ಮದುವೆಯಾಗುವ ಮೊದಲು, ನಟಿ ಮತ್ತು ಮಾಡೆಲ್ ಆಯೇಶಾ ಒಮರ್ ಜೊತೆ ಸಂಬಂಧ ಹೊಂದಿದ್ದರು ಎಂದು ವದಂತಿಗಳಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...