2024: ಪಾಕ್ ಗೆ ಮೊದಲ ಚಿನ್ನದ ಪದಕ ತಂದ ಅರ್ಷದ್ ನದೀಮ್...! ಪಾಕಿಸ್ತಾನದ ಸ್ಟಾರ್ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್ 2024 ರ ಫೈನಲ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 92.97 ಮೀಟರ್‌ ದೂರ ಜಾವೆಲಿನ್‌ ಎಸೆದು ಪಾಕಿಸ್ತಾನಕ್ಕೆ ಚಿನ್ನ ಗೆದ್ದುಕೊಟ್ಟಿದ್ದಲ್ಲದೆ, ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಪ್ಯಾರಿಸ್:ಪಾಕಿಸ್ತಾನದ ಸ್ಟಾರ್ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್ 2024 ರ ಫೈನಲ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 92.97 ಮೀಟರ್‌ ದೂರ ಜಾವೆಲಿನ್‌ ಎಸೆದು ಪಾಕಿಸ್ತಾನಕ್ಕೆ ಚಿನ್ನ ಗೆದ್ದುಕೊಟ್ಟಿದ್ದಲ್ಲದೆ, ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. 1992ರ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನ ಈ ಪದಕ ಪಡೆದಿದೆ. ಮೊದಲ ಥ್ರೋ ಫೌಲ್ ಆದ ನಂತರ ಅರ್ಷದ್ ಎರಡನೇ ಥ್ರೋನಲ್ಲಿ ವರ್ಚಸ್ಸು ಪ್ರದರ್ಶಿಸಿ ಮಾನ್ಸ್ಟರ್ ಥ್ರೋ ಎಸೆದರು. ಈ ಫೈನಲ್‌ನಲ್ಲಿ ನದೀಮ್ 90 ಮೀಟರ್‌ಗಳನ್ನು ದಾಟಿದ ಏಕೈಕ ಕ್ರೀಡಾಪಟು ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಟೋಕಿಯೋ ಚಿನ್ನದ ಪದಕ ವಿಜೇತ ಹಾಗೂ ಭಾರತದ ನೀರಜ್ ಚೋಪ್ರಾ ಅವರು 89.45 ಮೀಟರ್ ದೂರ ಎಸೆದು ಎರಡನೇ ಸ್ಥಾನ ಪಡೆದುಯುವ ಮೂಲಕ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಎರಡು ಬಾರಿ 90 ಮೀಟರ್ ಎಸೆತ: ಅರ್ಷದ್ ನದೀಮ್ ಒಮ್ಮೆ ಮಾತ್ರವಲ್ಲದೆ ಎರಡು ಬಾರಿ ಜಾವೆಲಿನ್ ಅನ್ನು 90 ಮೀಟರ್ ಗಡಿ ದಾಟಿದರು.ನದೀಮ್ ಅವರ ಮೊದಲ ಎಸೆತವು ಫೌಲ್ ಆಗಿತ್ತು, ಆದರೆ ನಂತರ ಅವರು 92.97 ಮೀಟರ್‌ಗಳ ಐತಿಹಾಸಿಕ ಎಸೆತವನ್ನು ಎಸೆದು ಚಿನ್ನವನ್ನು ಖಚಿತಪಡಿಸಿದರು. ನದೀಮ್ ಅವರ ಮುಂದಿನ ಮೂರು ಎಸೆತಗಳು ಕ್ರಮವಾಗಿ 88.72 ಮೀಟರ್, 79.40 ಮೀಟರ್ ಮತ್ತು 84.87 ಮೀಟರ್. ತಮ್ಮ ಕೊನೆಯ ಎಸೆತಕ್ಕೆ ಬಂದ ನದೀಮ್ ಮತ್ತೊಮ್ಮೆ ಜಾವೆಲಿನ್ ಅನ್ನು 90 ಮೀಟರ್ ಆಚೆಗೆ ಕೊಂಡೊಯ್ದರು. ಈ ಬಾರಿ ಅವರ ಥ್ರೋ 91.79 ಮೀಟರ್ ದೂರ ಹೋಯಿತು. , . ' . 🇵🇰🥹 — (@) ಪಾಕ್ ಗೆ ಮೊದಲ ಚಿನ್ನದ ಪದಕ ಅರ್ಷದ್ ನದೀಮ್ ಪಾಕ್ ಪರ ವೈಯಕ್ತಿಕ ಚಿನ್ನ ಗೆದ್ದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಅವರಿಗಿಂತ ಮೊದಲು ಯಾವುದೇ ಪಾಕಿಸ್ತಾನಿ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರಲಿಲ್ಲ. ಕುಸ್ತಿಯಲ್ಲಿ ಮುಹಮ್ಮದ್ ಬಶೀರ್ (ಕಂಚಿನ) ಮತ್ತು ಬಾಕ್ಸಿಂಗ್‌ನಲ್ಲಿ ಹುಸೇನ್ ಶಾ (ಕಂಚಿನ) ಒಲಿಂಪಿಕ್ಸ್‌ನಲ್ಲಿ ತಮ್ಮ ದೇಶಕ್ಕಾಗಿ ವೈಯಕ್ತಿಕ ಪದಕಗಳನ್ನು ಗೆದ್ದಿದ್ದರು. ಪಾಕಿಸ್ತಾನದ ಪರ ವೈಯಕ್ತಿಕ ಪದಕ ಗೆದ್ದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೂ ನದೀಮ್ ಪಾತ್ರರಾಗಿದ್ದಾರೆ. 1992ರ ನಂತರ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಯಾವುದೇ ಪದಕ ಲಭಿಸಿಲ್ಲ. 1992ರಲ್ಲಿ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಹಾಕಿ ತಂಡ ಕಂಚಿನ ಪದಕ ಗೆದ್ದಿತ್ತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...