ಸತತ 2ನೇ ಬಾರಿ ಕಂಚು ಗೆದ್ದ ಭಾರತ ಹಾಕಿ ತಂಡ: ಗೋಲ್‌ ಕೀಪರ್‌ ಶ್ರೀಜೇಶ್ʼಗೆ ಗೆಲುವಿನ ಬೀಳ್ಕೊಡುಗೆ 2024: ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ 30 ಮತ್ತು 33ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇನ್ನು ಸ್ಪೇನ್ ಪರ 18ನೇ ನಿಮಿಷದಲ್ಲಿ ಮಾರ್ಕ್ ಮಿರಾಲ್ಲೆಸ್ ಗೋಲು ಗಳಿಸಿದರು. 2024:ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಪುರುಷರ ಹಾಕಿ ಕಂಚಿನ ಪದಕದ ಪಂದ್ಯವು ಭಾರತ ಮತ್ತು ಸ್ಪೇನ್ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿ, ಇತಿಹಾಸ ಬರೆದಿದೆ. ಸ್ಪೇನ್ ತಂಡವನ್ನು 2-1 ಅಂತರದಿಂದ ಸೋಲಿಸಿ ಭಾರತ ಕಂಚಿನ ಪದಕ ಗೆದ್ದುಕೊಂಡಿದ್ದು, ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತಕ್ಕೆ 13 ನೇ ಪದಕವಾಗಿದೆ. ಇದನ್ನೂ ಓದಿ: ಭಾರತದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ 30 ಮತ್ತು 33ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಇನ್ನು ಸ್ಪೇನ್ ಪರ 18ನೇ ನಿಮಿಷದಲ್ಲಿ ಮಾರ್ಕ್ ಮಿರಾಲ್ಲೆಸ್ ಗೋಲು ಗಳಿಸಿದರು. ಇದನ್ನೂ ಓದಿ: ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಗೆಲುವಿನ ವಿದಾಯ: ಭಾರತದ ಅನುಭವಿ ಗೋಲ್ ಕೀಪರ್ ಪಿಆರ್ ಶ್ರೀಜೇಶ್ ಕೊನೆಯ ಕ್ವಾರ್ಟರ್ʼನಲ್ಲಿ ಅದ್ಭುತ ಆಟ ತೋರಿದರು. ಕೊನೆಯ ನಿಮಿಷದಲ್ಲಿ ಎರಡು ಗೋಲುಗಳನ್ನು ಉಳಿಸುವ ಮೂಲಕ ಭಾರತ ತಂಡದ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ಇನ್ನು ಈ ಒಲಿಂಪಿಕ್ಸ್‌ ಪಿಆರ್ ಶ್ರೀಜೇಶ್ʼಗೆ ಅಂತಿಮ ಪಂದ್ಯವಾಗಿದ್ದು, ಈಗಾಗಲೇ ಅವರು ವಿದಾಯ ಘೋಷಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...