ಪ್ಯಾರಿಸ್‌ ಒಲಿಂಪಿಕ್ಸ್‌ʼನಲ್ಲಿ ಅಶಿಸ್ತು ತೋರಿದ ಭಾರತದ ಕುಸ್ತಿಪಟು ಅಂತಿಮ್ ಪಂಗಲ್‌: 3 ವರ್ಷನಿಷೇಧ ಸಾಧ್ಯತೆ : ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ 53 ಕೆಜಿ ತೂಕ ವಿಭಾಗದಲ್ಲಿ ಅಂತಿಮ್‌ ಪಂಗಲ್ ಸ್ಥಾನ ಪಡೆದುಕೊಂಡಿದ್ದರು. ಕಳೆದ ಬಾರಿ ವಿನೇಶ್ ಫೋಗಟ್ ಆಡಿದ್ದ ಅದೇ ತೂಕ ವಿಭಾಗ. ಫೈನಲ್ ಆದ ಕಾರಣ ವಿನೇಶ್ ತನ್ನ ತೂಕ ವಿಭಾಗವನ್ನು ಬದಲಾಯಿಸಬೇಕಾಯಿತು ಎಂದು ಹೇಳಲಾಗಿದೆ. :ಒಲಿಂಪಿಕ್ಸ್‌ʼನಲ್ಲಿ ಭಾಗವಹಿಸೋದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಅಂತೆಯೇ ಆ ಆಟಗಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದರೆ ಅದೊಂದು ಹೆಮ್ಮೆಯ ಸಂಗತಿಯೇ. ಆದರೆ ಈ ಬಾರಿ ಪ್ಯಾರಿಸ್‌ ಒಲಿಂಪಿಕ್ಸ್ʼನಲ್ಲಿ ಭಾರತದ ಘನತೆಗೆ ಕೇಡುಬರುವಂತಹ ಕೃತ್ಯವನ್ನು ಮಹಿಳಾ ಕುಸ್ತಿಪಟು ಒಬ್ಬಳು ಎಸಗಿದ್ದಾಳೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ 53 ಕೆಜಿ ತೂಕ ವಿಭಾಗದಲ್ಲಿ ಅಂತಿಮ್‌ ಪಂಗಲ್ ಸ್ಥಾನ ಪಡೆದುಕೊಂಡಿದ್ದರು. ಕಳೆದ ಬಾರಿ ವಿನೇಶ್ ಫೋಗಟ್ ಆಡಿದ್ದ ಅದೇ ತೂಕ ವಿಭಾಗ. ಫೈನಲ್ ಆದ ಕಾರಣ ವಿನೇಶ್ ತನ್ನ ತೂಕ ವಿಭಾಗವನ್ನು ಬದಲಾಯಿಸಬೇಕಾಯಿತು ಎಂದು ಹೇಳಲಾಗಿದೆ. ಈ ಕುಸ್ತಿಪಟು ತನ್ನ ಮೊದಲ ಪಂದ್ಯದಲ್ಲಿ ಸೋತಿದ್ದಲ್ಲದೆ ಆ ಬಳಿಕ ಗೇಮ್ಸ್ ವಿಲೇಜ್ ನಿಯಮಗಳನ್ನು ಉಲ್ಲಂಘಿಸಿದ್ದಾಳೆ. ಇದನ್ನೂ ಓದಿ: ಪ್ಯಾರಿಸ್‌ ಒಲಿಂಪಿಕ್ಸ್‌ ಕುಸ್ತಿಯಲ್ಲಿ ಸ್ಪರ್ಧಿಸಿದ್ದ ಅಂತಿಮ್‌, ಅಥ್ಲೀಟ್‌ʼಗಳಿಗಾಗಿ ನಿರ್ಮಿಸಲಾದ ಕ್ರೀಡಾ ಗ್ರಾಮಕ್ಕೆ ತಮ್ಮ ಸಹೋದರಿಯನ್ನು ಕರೆತರುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ ತಮಗೆ ನೀಡಿದ ಅಧಿಕೃತ ಮಾನ್ಯತೆ ಕಾರ್ಡ್ ದುರ್ಬಳಕೆ ಮಾಡಿದ್ದಾರೆ. ಇದು ಭಾರತೀಯ ಒಲಿಂಪಿಕ್ ತಂಡಕ್ಕೆ ಮುಜುಗರವನ್ನುಂಟು ಮಾಡಿದ್ದಲ್ಲದೆ, ಕುಸ್ತಿಪಟುವನ್ನು ಐಒಎ ಮೂರು ವರ್ಷಗಳ ಕಾಲ ನಿಷೇಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...