ಭಾರತದಲ್ಲಿನ ಈ ಆಹಾರ ಅಂದ್ರೆ ನನಗೆ ಬಹಳ ಇಷ್ಟ, ಫಿದಾ ಆಗ್ಬಿಟ್ಟೆ: ಚಾಂಪಿಯನ್ ಜಾನ್ ಸೆನಾ ಹೇಳಿಕೆ : ಅನಂತ್-ರಾಧಿಕಾ ಮದುವೆಯಲ್ಲಿ ಜಾನ್ ಸೆನಾ ದೇಸಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕಾಶ ನೀಲಿ ಬಣ್ಣದ ಸಾಂಪ್ರದಾಯಿಕ ಶೇರ್ವಾನಿ ಧರಿಸಿದ್ದ ಅವರು, ತಮ್ಮ ವ್ರೆಸ್ಲಿಂಗ್ ಸ್ಟೈಲ್‌ʼನಲ್ಲಿ ಫೋಟೋಗೆ ಫೋಸ್‌ ಕೊಟ್ಟಿದ್ದರು. :16 ಬಾರಿಯ ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ () ಚಾಂಪಿಯನ್ ಜಾನ್ ಸೆನಾ ಕಳೆದ ತಿಂಗಳು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಸಂದರ್ಭದಲ್ಲಿ ಭಾರತಕ್ಕೆ ಆಗಮಿಸಿದ್ದರು. ಈ ಸಮಯದಲ್ಲಿ ಭಾರತೀಯ ಸಂಪ್ರದಾಯಗನ್ನು ಕಣ್ಣಾರೆ ಕಂಡ ಸೆನಾ, ಫಿದಾ ಆಗಿದ್ದಾರೆ. ಅದರಲ್ಲೂ ಭಾರತದ ಆಹಾರದ ಬಗ್ಗೆ ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಇನ್ನು ಈ ಬಗ್ಗೆ ಮಾತನಾಡಿದ ಜಾನ್‌ ಸೆನಾ, "ಅಂಬಾನಿಯವರ ಮದುವೆಯಲ್ಲಿ ಹಲವು ಬಗೆಯ ಖಾದ್ಯಗಳಿದ್ದವು, ಆದರೆ ಅಲ್ಲಿ ಸ್ಟ್ರೀಟ್‌ ಫುಡ್‌ ಕೂಡ ಇದ್ದವು. ನನಗೆ ಅವು ಬಹಳ ಇಷ್ಟವಾಯಿತು. ನಾನು ಇದ್ದದ್ದು ಬಹಳ ಕಡಿಮೆ ಸಮಯ, ಆದರೆ ಅತಿ ಶೀಘ್ರದಲ್ಲೇ ಮತ್ತೆ ಭಾರತಕ್ಕೆ ಹಿಂತಿರುಗಲು ಬಯಸುತ್ತೇನೆ. ಕೆಲವು ಭಾರತೀಯ ಆಹಾರಗಳನ್ನು ಸವಿಯಲು ಇಷ್ಟಪಡುತ್ತೇನೆ. ಆ ಆಹಾರದಲ್ಲಿ ನನಗೆ ಬೇಕಾದಷ್ಟು ಮಸಾಲೆ ಇತ್ತು. ನನಗೆ ಬಹಳ ಇಷ್ಟವಾಯಿತು" ಎಂದಿದ್ದಾರೆ. ಅಂದಹಾಗೆ ಅನಂತ್-ರಾಧಿಕಾ ಮದುವೆಯಲ್ಲಿ ಜಾನ್ ಸೆನಾ ದೇಸಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕಾಶ ನೀಲಿ ಬಣ್ಣದ ಸಾಂಪ್ರದಾಯಿಕ ಶೇರ್ವಾನಿ ಧರಿಸಿದ್ದ ಅವರು, ತಮ್ಮ ವ್ರೆಸ್ಲಿಂಗ್ ಸ್ಟೈಲ್‌ʼನಲ್ಲಿ ಫೋಟೋಗೆ ಫೋಸ್‌ ಕೊಟ್ಟಿದ್ದರು. ಇದನ್ನೂ ಓದಿ: ಜಾನ್ ಸೆನಾ ಕಳೆದ ತಿಂಗಳು ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದರು. ಸದ್ಯಕ್ಕೆ 'ಮಂಡೇ ನೈಟ್ ರಾ' ನಲ್ಲಿ ಉಳಿಯಲು ಯೋಜಿಸುತ್ತಿದ್ದೇನೆ ಎಂದು ಸೀನಾ ಬಹಿರಂಗಪಡಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...