: ಎದುರಾಳಿ ವಿರುದ್ಧ ಮಂಡಿಯೂರಿದ ಭಾರತ..27 ವರ್ಷಗಳ ನಂತರ ಶ್ರೀಲಂಕಾಗೆ ಮಣಿದ ಟೀಂ ಇಂಡಿಯಾ..! : ಶ್ರೀಲಂಕಾ ವಿರುದ್ಧ ಟಿ20 ಪಂದ್ಯವನ್ನು ಕ್ಲೀನ್‌ ಸ್ವೀಪ್‌ ಮಾಡಿದ್ದ ಭಾರತ ತಂಡ ನಲ್ಲಿ ಎದುರಾಲಿ ತಂಡದ ಎದುರು ಮಂಡಿಯೂರಿದೆ. ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ ಭಾರೀ ಸೋಲಿನೊಂದಿಗೆ ಅಂತ್ಯಗೊಳಿಸಿದೆ. ಬುಧವಾರ ನಡೆದ ಮೂರು ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 110 ರನ್ ಗಳ ಬೃಹತ್ ಅಂತರದಿಂದ ಸೋತಿದೆ. :ಶ್ರೀಲಂಕಾ ವಿರುದ್ಧ ಟಿ20 ಪಂದ್ಯವನ್ನು ಕ್ಲೀನ್‌ ಸ್ವೀಪ್‌ ಮಾಡಿದ್ದ ಭಾರತ ತಂಡ ನಲ್ಲಿ ಎದುರಾಲಿ ತಂಡದ ಎದುರು ಮಂಡಿಯೂರಿದೆ. ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ ಭಾರೀ ಸೋಲಿನೊಂದಿಗೆ ಅಂತ್ಯಗೊಳಿಸಿದೆ. ಬುಧವಾರ ನಡೆದ ಮೂರು ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ 110 ರನ್ ಗಳ ಬೃಹತ್ ಅಂತರದಿಂದ ಸೋತಿದೆ. ಈ ಗೆಲುವಿನೊಂದಿಗೆ ಶ್ರೀಲಂಕಾ ಮೂರು ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ. 27 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಶ್ರೀಲಂಕಾ ಭಾರತದ ವಿರುದ್ಧ ಏಕದಿನ ಸರಣಿಯನ್ನು ಗೆದ್ದುಕೊಂಡಿತು. ಇದನ್ನೂ ಓದಿ: ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 248 ರನ್ ಕಾಲೆಹಾಕಿತು. ಅವಿಷ್ಕಾ ಫೆರ್ನಾಂಡೊ 102 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಿಡಿಸಿ 96 ರನ್‌ ಕಲೆಹಾಕಿದರು. ಅರ್ಧಶತಕದೊಂದಿಗೆ ಕುಶಾಲ್ ಮೆಂಡಿಸ್ 82 ಎಸೆತಗಳಲ್ಲಿ 4 ಬೌಂಡರಿ ಸಹಿತ ಔಟಾಗದೆ 59 ರನ್‌ ಕಲೆಹಾಕಿದರು. ಮತ್ತೋರ್ವ ಆರಂಭಿಕ ಆಟಗಾರ ಪಾತುಮ್ ನಿಸ್ಸಾಂಕಾ 65 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 45 ರನ್‌ ಗಳಿಸಿ ತಂಡಕ್ಕೆ ಭಾರಿ ಮೊತ್ತ ಕೂಡಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು. ಭಾರತದ ಬೌಲರ್‌ಗಳಲ್ಲಿ ರಿಯಾನ್ ಪರಾಗ್ ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ಮೂರು ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 26.1 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲೌಟ್‌ ಆಯಿತು. ರೋಹಿತ್ ಶರ್ಮಾ 20 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಮತ್ತು ವಾಷಿಂಗ್ಟನ್ ಸುಂದರ್ 25 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಿತ 30 ರನ್‌ ಕಲೆಹಾಕಿದರು. ಇತರ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ (18 ಎಸೆತಗಳಲ್ಲಿ 4 ಬೌಂಡರಿ ಸಹಿತ 20), ಶುಭಮನ್ ಗಿಲ್ (6), ರಿಷಭ್ ಪಂತ್ (6), ಶ್ರೇಯಸ್ ಅಯ್ಯರ್ (8), ಅಕ್ಷರ್ ಪಟೇಲ್ (2), ರಯಾನ್ ಪರಾಗ್ (15), ಶಿವಂ ದುಬೆ (9), ಕುಲದೀಪ್ ಯಾದವ್ (6) ದಯನೀಯವಾಗಿ ವಿಫಲರಾದರು. ಇದನ್ನೂ ಓದಿ: ಶ್ರೀಲಂಕಾ ಬೌಲರ್‌ಗಳ ಪೈಕಿ ದುನಿತ್ ವೆಲ್ಲಲೆಗೆ (5/27) ಐದು ವಿಕೆಟ್‌ಗಳೊಂದಿಗೆ ಭಾರತದ ಪತನವನ್ನು ನಿಯಂತ್ರಿಸಿದರು. ಅಸಿತಾ ಫೆರ್ನಾಂಡೊ ಒಂದು ವಿಕೆಟ್ ಪಡೆದರು. ಶ್ರೀಲಂಕಾ ಪ್ರವಾಸದ ನಂತರ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ಗಂಭೀರ್, ಟಿ20 ಸರಣಿ ಗೆಲುವಿನೊಂದಿಗೆ ಉತ್ತಮ ಆರಂಭ ಪಡೆದಿದ್ದಾರೆ. ಆದರೆ ಏಕದಿನ ಸರಣಿಯಲ್ಲಿ ಅನಿರೀಕ್ಷಿತ ಸೋಲನ್ನು ಎದುರಿಸಿದರು. ಈ ಸರಣಿಯಲ್ಲಿ ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ದಯನೀಯವಾಗಿ ವಿಫಲವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...