2024: 3-2 ಅಂತರದಿಂದ ಜರ್ಮನಿಗೆ ಗೆಲುವು, ಭಾರತದ ಫೈನಲ್ ಕನಸು ಭಗ್ನ..! ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಸೆಮಿಫೈನಲ್‌ನಲ್ಲಿ ಬಲಿಷ್ಠ ಜರ್ಮನಿ ವಿರುದ್ಧ 3-2 ಅಂತರದಿಂದ ಸೋಲನ್ನು ಅನುಭವಿಸಿದೆ.ಆ ಮೂಲಕ ಫೈನಲ್ ಕನಸು ಕಂಡಿದ್ದ ಭಾರತ ತಂಡಕ್ಕೆ ತೀವ್ರ ನಿರಾಸೆಯಾಗಿದೆ. ಪ್ಯಾರಿಸ್:ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡ ಸೆಮಿಫೈನಲ್‌ನಲ್ಲಿ ಬಲಿಷ್ಠ ಜರ್ಮನಿ ವಿರುದ್ಧ 3-2 ಅಂತರದಿಂದ ಸೋಲನ್ನು ಅನುಭವಿಸಿದೆ.ಆ ಮೂಲಕ ಫೈನಲ್ ಕನಸು ಕಂಡಿದ್ದ ಭಾರತ ತಂಡಕ್ಕೆ ತೀವ್ರ ನಿರಾಸೆಯಾಗಿದೆ. ಒಲಂಪಿಕ್ಸ್ ನುದ್ದಕ್ಕೂ ಅದ್ಬುತ ಪ್ರದರ್ಶನ ನೀಡಿದ್ದ ಭಾರತ ತಂಡವು ಆರಂಭದಲ್ಲಿ ಭಾರತಕ್ಕೆ 7ನೇ ನಿಮಿಷದಲ್ಲಿ ನಾಯಕ ಹರನ್‌ಪ್ರೀತ್ ಸಿಂಗ್ ಮೊದಲ ಗೋಲು ದಾಖಲಿಸುವ ಮೂಲಕ ಮುನ್ನೆಡೆಯನ್ನು ತಂದುಕೊಟ್ಟಿದ್ದರು.ಇದಾದ ಬಳಿಕ 18ನೇ ನಿಮಿಷದಲ್ಲಿ ಜರ್ಮನಿಯ ಗೊಂಜಾಲೊ ಪಿಲಾಟ್ ಸಮಬಲದ ಗೋಲು ದಾಖಲಿಸಿದರು.ಕ್ರಿಸ್ಟೋಫರ್ ರುಹ್ರ್ 27ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ತಂಡವನ್ನು ಮುನ್ನಡೆಸಿದರು. . 💔 . — (@) ಇದಾದ ಬಳಿಕ 36ನೇ ನಿಮಿಷದಲ್ಲಿ ಸುಖಜಿತ್ ಸಿಂಗ್ ಟೀಂ ಇಂಡಿಯಾ ಪರ ಸಮಬಲದ ಗೋಲು ದಾಖಲಿಸಿದರು. ಆದರೆ ಮಾರ್ಕೊ ಮಿಲ್ಟ್‌ಕೌ 54ನೇ ನಿಮಿಷದಲ್ಲಿ ಗೋಲು ಬಾರಿಸುವ ಮೂಲಕ ಜರ್ಮನಿ ತಂಡವನ್ನು 3-2 ಅಂತರದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ನೆರವಾದರು. ಆ ಮೂಲಕ ಜರ್ಮನಿ ತಂಡವು ಒಲಂಪಿಕ್ಸ್ ನಲ್ಲಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...