T20, , ...‌ ಟೀಂ ಇಂಡಿಯಾದ ಎಲ್ಲಾ ಸ್ವರೂಪಗಳಿಗೂ 24 ವರ್ಷದ ಈ ಆಟಗಾರನೇ ಹೊಸ ಕ್ಯಾಪ್ಟನ್: ಸ್ಪಷ್ಟ ಹೇಳಿಕೆ ನೀಡಿದ ಕೋಚ್‌! : ರೋಹಿತ್ ನಿವೃತ್ತಿಯ ನಂತರ, ಶುಭಮನ್ ಗಿಲ್‌ʼಗೆ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವವನ್ನು ನೀಡಲಾಗುವುದು. ಇದರ ಹಿಂದಿನ ಕಾರಣವನ್ನೂ ಶ್ರೀಧರ್ ನೀಡಿದ್ದಾರೆ. :ರೋಹಿತ್ ಶರ್ಮಾ ನಂತರ ಟೀಂ ಇಂಡಿಯಾದ ಏಕದಿನ ಮತ್ತು ಟೆಸ್ಟ್ ನಾಯಕ ಯಾರು ಎಂಬುದೇ ದೊಡ್ಡ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಟೀಂ ಇಂಡಿಯಾದ ಮಾಜಿ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ಹೇಳಿಕೆ ನೀಡಿದ್ದಾರೆ. ಶುಭ್ಮನ್ ಗಿಲ್ ಟೀಂ ಇಂಡಿಯಾದ ಮುಂದಿನ ನಾಯಕರಾಗಲಿದ್ದಾರೆ ಎಂದು ಶ್ರೀಧರ್ ಹೇಳಿದ್ದಾರೆ. ಇದನ್ನೂ ಓದಿ: ಅವರ ಪ್ರಕಾರ, ರೋಹಿತ್ ನಿವೃತ್ತಿಯ ನಂತರ, ಶುಭಮನ್ ಗಿಲ್‌ʼಗೆ ಏಕದಿನ ಮತ್ತು ಟೆಸ್ಟ್ ತಂಡದ ನಾಯಕತ್ವವನ್ನು ನೀಡಲಾಗುವುದು. ಇದರ ಹಿಂದಿನ ಕಾರಣವನ್ನೂ ಶ್ರೀಧರ್ ನೀಡಿದ್ದಾರೆ. ಆರ್ ಶ್ರೀಧರ್ ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡುತ್ತಾ, "ಶುಭ್ಮನ್ ಗಿಲ್ ಎಲ್ಲಾ ಫಾರ್ಮ್ಯಾಟ್‌;ಗಳ ಆಟಗಾರ ಮತ್ತು ಅವರು ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗುತ್ತಾರೆ. 2027ರ ವಿಶ್ವಕಪ್ ಬಳಿಕ ಶುಭಮನ್ ಗಿಲ್ ಟೀಂ ಇಂಡಿಯಾದ ಎಲ್ಲಾ ಮೂರು ಸ್ವರೂಪಗಳ ನಾಯಕರಾಗಲಿದ್ದಾರೆ" ಎಂದು ಶ್ರೀಧರ್ ಭರವಸೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ಈಗಾಗಲೇ ಒಂದು ರೀತಿಯಲ್ಲಿ ಶುಭ್ಮನ್ ಗಿಲ್ ಅವರನ್ನು ಉತ್ತರಾಧಿಕಾರಿ ಎಂದು ಘೋಷಿಸಿದೆ. ಶ್ರೀಲಂಕಾ ಸರಣಿಗೂ ಮುನ್ನ ಗಿಲ್ ಅವರನ್ನು ಟೀಂ ಇಂಡಿಯಾದ ಏಕದಿನ ಮತ್ತು ಟಿ20 ಉಪನಾಯಕರನ್ನಾಗಿ ಮಾಡಲಾಗಿತ್ತು. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅವರನ್ನು ಉಪನಾಯಕನನ್ನಾಗಿ ಮಾಡುವ ವರದಿಗಳೂ ಇವೆ. ಮುಂದೇನಾಗುತ್ತದೋ ಕಾದು ನೋಡಬೇಕಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...