ಕೊಹ್ಲಿಗೆ ಸೌತ್‌ʼನ ಈ ನಟನೆಂದರೆ ಹುಚ್ಚು ಅಭಿಮಾನ! ಇವರ ಸಿನಿಮಾದ ಹಾಡು ಕೇಳಿದ್ರೆ ಸಾಕು ನಿಂತಲ್ಲೇ ಡ್ಯಾನ್ಸ್‌ ಮಾಡ್ತಾರಂತೆ ವಿರಾಟ್ : ಒಂದು ಕೋಟಿಗೂ ಹೆಚ್ಚು ಸಂಭಾವನೆ ಪಡೆದ ಭಾರತದ ಮೊದಲ ನಾಯಕ ಚಿರಂಜೀವಿ. ಆ ಕಾಲದಲ್ಲಿ ಚಿರಂಜೀವಿಗೆ ಅಷ್ಟೊಂದು ಕ್ರೇಜ್ ಇತ್ತು. ಇನ್ನು ಚಿರಂಜೀವಿ ಸಿನಿಮಾಗಳು ರಿಲೀಸ್ ಆಗುತ್ತಿದೆ ಎಂದರೆ ಸಾಕು... ಥಿಯೇಟರ್ ನಡುಗುತ್ತದೆ. : ಮೆಗಾಸ್ಟಾರ್ ಚಿರಂಜೀವಿ ಟಾಲಿವುಡ್ ಚಿತ್ರರಂಗದ ಇತಿಹಾಸದಲ್ಲಿ ಸಂಚಲನವನ್ನೇ ಸೃಷ್ಟಿಸಿರುವ ನಟರಲ್ಲಿ ಒಬ್ಬರು. ಯಾವುದೇ ಹಿನ್ನೆಲೆ ಇಲ್ಲದೆ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ ಹೆಗ್ಗಳಿಕೆ ಇವರದ್ದು. ಇಂಡಸ್ಟ್ರಿಗೆ ಅನೇಕ ಸ್ಟಾರ್‌ʼಗಳು ಬಂದು ಹೋಗುತ್ತಾರೆ. ಆದರೆ ಕೆಲವರ ಹೆಸರು ಮಾತ್ರ ಇತಿಹಾಸದಲ್ಲಿ ಉಳಿಯುತ್ತದೆ. ಅಂತಹ ಒಂದು ಹೆಸರು ಚಿರಂಜೀವಿ. ಇದನ್ನೂ ಓದಿ: ಒಂದು ಕೋಟಿಗೂ ಹೆಚ್ಚು ಸಂಭಾವನೆ ಪಡೆದ ಭಾರತದ ಮೊದಲ ನಾಯಕ ಚಿರಂಜೀವಿ. ಆ ಕಾಲದಲ್ಲಿ ಚಿರಂಜೀವಿಗೆ ಅಷ್ಟೊಂದು ಕ್ರೇಜ್ ಇತ್ತು. ಇನ್ನು ಚಿರಂಜೀವಿ ಸಿನಿಮಾಗಳು ರಿಲೀಸ್ ಆಗುತ್ತಿದೆ ಎಂದರೆ ಸಾಕು... ಥಿಯೇಟರ್ ನಡುಗುತ್ತದೆ. ಇನ್ನು ಚಿರಂಜೀವಿಗೆ ಅದೆಷ್ಟೋ ಮಂದಿ ದಿಗ್ಗಜ ನಟರು ಕೂಡ ಅಭಿಮಾನಿಗಳಿದ್ದಾರೆ. ಅವೆಲ್ಲಕ್ಕೂ ಮಿಂಚಿ ಸ್ಟಾರ್ ಬ್ಯಾಟ್ಸ್ ಮನ್ ಕೊಹ್ಲಿ ಕೂಡ ಚಿರಂಜೀವಿ ಅಭಿಮಾನಿಯಾಗಿದ್ದಾರಂತೆ. ತೆಲುಗು ಕ್ರಿಕೆಟಿಗ ದ್ವಾರಕಾ ರವಿತೇಜಾ ಇತ್ತೀಚೆಗೆ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಅಂಡರ್-16 ಮತ್ತು ಅಂಡರ್-19 ಆಡುವಾಗ ಕೊಹ್ಲಿ ರೂಮ್ ಮೇಟ್ಸ್ ಆಗಿದ್ದರು. ಆಗ ಟಿವಿಯಲ್ಲಿ ಚಿರಂಜೀವಿ ಹಾಡು ಕೇಳಿದ್ರೆ ಸಾಕು ಕೊಹ್ಲಿ ಕಾಲುಗಳು ನಿಲ್ಲುತ್ತಿರಲಿಲ್ಲ. ಇಬ್ಬರು ಸಹ ಚಿರಂಜೀವಿ ಸಿನಿಮಾದ ಹಾಡುಗಳ ಕ್ಯಾಸೆಟ್‌ ಹಾಕಿ ಕುಣಿಯುತ್ತಿದ್ದೆವು ಎಂದು ಹೇಳಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...