ಗಾಯವಿದ್ದರೂ ಹೋರಾಡಿ ಸೋತ ಲಕ್ಷ್ಯ ಸೇನ್: ಚೊಚ್ಚಲ ಒಲಿಂಪಿಕ್ಸ್ ಪದಕದ ಕನಸು ಭಗ್ನ : ಈ ಪಂದ್ಯದಲ್ಲಿ ಲಕ್ಷ್ಯ ಸೇನ್ ಗೆದ್ದಿದ್ದರೆ ಒಲಿಂಪಿಕ್ಸ್‌ʼನಲ್ಲಿ ಪದಕ ಗೆದ್ದ ಭಾರತದ ಮೊದಲ ಪುರುಷ ಷಟ್ಲರ್ ಎನಿಸಿಕೊಳ್ಳುತ್ತಿದ್ದರು. ಇಲ್ಲಿಯವರೆಗೆ ಯಾವುದೇ ಭಾರತೀಯ ಪುರುಷ ಬ್ಯಾಡ್ಮಿಂಟನ್ ಆಟಗಾರ ಒಲಿಂಪಿಕ್ಸ್‌ʼನಲ್ಲಿ ಪದಕ ಗೆದ್ದಿಲ್ಲ. ಲಕ್ಷ್ಯ ಸೇನ್ ಸೋಲಿನೊಂದಿಗೆ ಬ್ಯಾಡ್ಮಿಂಟನ್‌ʼನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. :ಭಾರತದ 22ರ ಹರೆಯದ ಯುವ ಶಟ್ಲರ್ ಲಕ್ಷ್ಯ ಸೇನ್ ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ ಇತಿಹಾಸ ಸೃಷ್ಟಿಸುವ ಅವಕಾಶ ಕಳೆದುಕೊಂಡಿದ್ದಾರೆ. ಪುರುಷರ ಬ್ಯಾಡ್ಮಿಂಟನ್‌ʼನ ಕಂಚಿನ ಪದಕದ ಪಂದ್ಯದಲ್ಲಿ, ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ ಮೊದಲ ಗೇಮ್ ಗೆದ್ದರೂ, ನಂತರದ ಪಂದ್ಯದಲ್ಲಿ 13-21, 16-21 ಮತ್ತು 11-21 ರಿಂದ ಸೋಲು ಕಂಡಿದ್ದಾರೆ. ಇದನ್ನೂ ಓದಿ: ಈ ಪಂದ್ಯದಲ್ಲಿ ಲಕ್ಷ್ಯ ಸೇನ್ ಗೆದ್ದಿದ್ದರೆ ಒಲಿಂಪಿಕ್ಸ್‌ʼನಲ್ಲಿ ಪದಕ ಗೆದ್ದ ಭಾರತದ ಮೊದಲ ಪುರುಷ ಷಟ್ಲರ್ ಎನಿಸಿಕೊಳ್ಳುತ್ತಿದ್ದರು. ಇಲ್ಲಿಯವರೆಗೆ ಯಾವುದೇ ಭಾರತೀಯ ಪುರುಷ ಬ್ಯಾಡ್ಮಿಂಟನ್ ಆಟಗಾರ ಒಲಿಂಪಿಕ್ಸ್‌ʼನಲ್ಲಿ ಪದಕ ಗೆದ್ದಿಲ್ಲ. ಲಕ್ಷ್ಯ ಸೇನ್ ಸೋಲಿನೊಂದಿಗೆ ಬ್ಯಾಡ್ಮಿಂಟನ್‌ʼನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಇದನ್ನೂ ಓದಿ: ಸೆಮಿಫೈನಲ್‌ʼನಲ್ಲಿ ಎರಡನೇ ಶ್ರೇಯಾಂಕದ ಮತ್ತು ಹಾಲಿ ಚಾಂಪಿಯನ್ ಡೆನ್ಮಾರ್ಕ್‌ʼನ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ನೇರ ಗೇಮ್‌ʼಗಳಲ್ಲಿ ಸೋತಿದ್ದರು. ಇನ್ನು ಒಲಿಂಪಿಕ್ ಸೆಮಿಫೈನಲ್‌ʼಗೆ ಪ್ರವೇಶಿಸಿದ ಮೊದಲ ಭಾರತೀಯ ಮತ್ತು ವಿಶ್ವದ 22 ನೇ ಶ್ರೇಯಾಂಕಿತ ಆಟಗಾರ ಲಕ್ಷ್ಯ, ರಿಯೊ ಒಲಿಂಪಿಕ್ಸ್ ಕಂಚು ಮತ್ತು ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಕ್ಸೆಲ್‌ಸೆನ್ ವಿರುದ್ಧ 20-22, 14-21 ರಿಂದ ಸೋತಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...