ಜೆಫ್ರಿ ವಾಂಡರ್ಸೆ ಮಾರಕ ಬೌಲಿಂಗ್ ದಾಳಿಗೆ ಟೀಮ್ ಇಂಡಿಯಾ ತತ್ತರ..! ಇಲ್ಲಿನ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವು ಟೀಮ್ ಇಂಡಿಯಾ ವಿರುದ್ಧ 32 ರನ್ ಗಳ ಗೆಲುವು ಸಾಧಿಸಿದೆ. ಕೊಲೊಂಬೋ:ಇಲ್ಲಿನ ಆರ್ ಪ್ರೇಮದಾಸ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವು ಟೀಮ್ ಇಂಡಿಯಾ ವಿರುದ್ಧ 32 ರನ್ ಗಳ ಗೆಲುವು ಸಾಧಿಸಿದೆ. ಟಾಸ್ ಗೆದ್ದ ಶ್ರೀಲಂಕಾ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು,50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 240 ರನ್ ಗಳ ಸಾಧಾರಣ ಮೊತ್ತ ದಾಖಲಿಸಿತು.ಟೀಮ್ ಇಂಡಿಯಾದ ಪರವಾಗಿ ವಾಷಿಂಗ್ಟನ್ ಸುಂದರ್ ಹಾಗೂ ಕುಲದೀಪ್ ಯಾದವ್ ಕ್ರಮವಾಗಿ ಮೂರು ಹಾಗೂ ಎರಡು ವಿಕೆಟ್ ಗಳನ್ನು ಪಡೆದರು. ಇದೆ ವೇಳೆ ಶ್ರೀಲಂಕಾ ತಂಡವು ನೀಡಿದ ಸಾಧಾರಣ ಮೊತ್ತವನ್ನು ಬೆನ್ನತ್ತಿದ ಟೀಮ್ ಇಂಡಿಯಾ ರೋಹಿತ್ ಶರ್ಮಾ ಹಾಗೂ ಶುಬ್ ಮನ್ ಗಿಲ್ ಅವರ 97 ರನ್ ಗಳ ಜೊತೆಯಾಟದಿಂದಾಗಿ ಉತ್ತಮ ಅಡಿಪಾಯವನ್ನು ಕಂಡುಕೊಂಡಿತು. ರೋಹಿತ್ ಶರ್ಮಾ 64 ರನ್ ಗಳಿಸಿದರೆ ಗಿಲ್ 35 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನೆಡೆಸುತ್ತಿದ್ದರು. 👏📝: — (@) ಈ ವೇಳೆ ಜೆಫ್ರಿ ವಾಂಡರ್ಸೆ ಅವರು ಈ ಜೊತೆಯಾಟವನ್ನು ಮುರಿಯುವ ಮೂಲಕ ಲಂಕಾ ತಂಡಕ್ಕೆ ಗೆಲುವಿನ ಆಸೆಯನ್ನು ಮೂಡಿಸಿದರು.ತದನಂತರ ಬಂದಂತಹ ಆಟಗಾರರಲ್ಲಿ ಅಕ್ಸರ್ ಪಟೇಲ್ 44 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾವುದೇ ಆಟಗಾರ ಕೂಡ 20 ಗಡಿ ದಾಟಲಿಲ್ಲ. ಟೀಮ್ ಇಂಡಿಯಾಗೆ ಮಾರಕವಾಗಿ ಕಾಡಿದ ಜೆಫ್ರಿ ವಾಂಡರ್ಸೆ ಆರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸುವಲ್ಲಿ ಯಶಸ್ವಿಯಾದರು. ಇವರಿಗೆ ಸಾಥ್ ನೀಡಿದ ಅಸಲಂಕಾ ಮೂರು ವಿಕೆಟ್ ಗಳನ್ನು ಕಬಳಿಸುವ ಮೂಲಕ ಟೀಮ್ ಇಂಡಿಯಾ ತಂಡವನ್ನು ಕೇವಲ 42.2 ಓವರ್ ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 208 ರನ್ ಗಳನ್ನು ಮಾತ್ರ ಗಳಿಸಿತು.ಆ ಮೂಲಕ 32 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...