: 10 ಆಟಗಾರರೊಂದಿಗೆ ಪಂದ್ಯವನ್ನಾಡಿ ಭಾರತ ಗೆಲುವು ಸಾಧಿಸಿದ್ದೇ ರೋಚಕ! ' : ದ್ವಿತೀಯ ಕ್ವಾರ್ಟರ್ನಲ್ಲಿ ಭಾರತ ಮೊದಲ ಗೋಲು ಬಾರಿಸುವಲ್ಲಿ ಯಶಸ್ಸು ಕಂಡಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರು. ದ್ವಿತೀಯ ಕ್ವಾರ್ಟರ್ ಮುಕ್ತಾಯ ಕಾಣಲು ಕೆಲವೇ ನಿಮಿಷ ಬಾಕಿ ಇರುವಾಗ ಲೀ ಮಾರ್ಟನ್ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು. ' :ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತದ ಪುರುಷರ ಹಾಕಿ ತಂಡವು ಭರ್ಜರಿ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್​ ಪ್ರವೇಶಿಸಿದೆ. ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪಡೆಯು ಬಲಿಷ್ಠ ಗ್ರೇಟ್​ ಬ್ರಿಟನ್ ತಂಡವನ್ನು ಪೆನಾಲ್ಟಿ ಶೂಟೌಟ್​ನಲ್ಲಿ 4-2 ಗೋಲುಗಳ ಅಂತರದಿಂದ ಮಣಿಸುವ ಮೂಲಕ ಅಮೋಘ ಗೆಲುವು ಸಾಧಿಸಿತು. 4ಮುಕ್ತಾಯದ ವೇಳೆ 1-1 ಗೋಲುಗಳಿಂದ ಪಂದ್ಯ ಟೈಗೊಂಡ ಕಾರಣ ಫಲಿತಾಂಶದ ನಿರ್ಣಾಯಕ್ಕೆ ಫೆನಾಲ್ಟಿ ಶೂಟ್​ಔಟ್​ ಮೊರೆಹೋಗಲಾಯಿತು. ಇದರಲ್ಲಿ ಭಾರತ ಮೇಲುಗೈ ಸಾಧಿಸಿ ಜಯಭೇರಿ ಭಾರಿಸಿತು. ಟೋಕಿಯೊ ಒಲಿಂಪಿಕ್ಸ್​ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿಯೂ ಬ್ರಿಟನ್​ ತಂಡವನ್ನೇ ಮಣಿಸಿದ್ದ ಭಾರತ ಸೆಮಿಫೈನಲ್​ ಪ್ರವೇಶಿಸಿತ್ತು. ಇದೀಗ ಮತ್ತೊಮ್ಮೆ ಬ್ರಿಟನ್‌ ತಂಡಕ್ಕೆ ಮಣ್ಣುಮುಕ್ಕಿಸುವ ಮೂಲಕ ಭಾರತ ತಂಡವು ಸೆಮಿಸ್‌ಗೆ ಎಂಟ್ರಿ ಪಡೆದಿದೆ. ಇದನ್ನೂ ಓದಿ: ಅಮಿತ್ ರೋಹಿದಾಸ್‌ಗೆ ರೆಡ್​ ಕಾರ್ಡ್​! 𝕮𝖔𝖒𝖊𝖙𝖍 𝖙𝖍𝖊 𝖍𝖔𝖚𝖗, 𝖈𝖔𝖒𝖊𝖙𝖍 𝖙𝖍𝖊 𝖒𝖊𝖓 ⚡️⚡️⚡️ : ⚡️⚡️⚡️ 10 , . — India_AllSports (@India_AllSports) ಬ್ರಿಟನ್‌ನ ಆಟಗಾರ ವಿಲ್ ಕಲ್ನಾನ್ ಮುಖಕ್ಕೆ ಹಾಕಿ ಸ್ಟಿಕ್​ ತಾಗಿಸಿದ ಪರಿಣಾಮ ಅಮಿತ್ ರೋಹಿದಾಸ್‌ಗೆ ಅಂಪೈರ್​ ರೆಡ್ ಕಾರ್ಡ್​ ನೀಡಿದರು. ಹೀಗಾಗಿ ಅವರು ಪಂದ್ಯದಿಂದ ಹೊರಗುಳಿಯಬೇಕಾಯಿತು. ಮೊದಲ ಕ್ವಾರ್ಟರ್​ನಲ್ಲಿಯೇ ಭಾರತಕ್ಕೆ ಈ ಆಘಾತ ಎದುರಾಯಿತು. ಹೀಗಾಗಿ ಭಾರತ ಕೇವಲ 10 ಮಂದಿ ಆಟಗಾರರೊಂದಿಗೆ ಪಂದ್ಯವನ್ನಾಡಿತು. ಈ ಕ್ವಾರ್ಟರ್​ನಲ್ಲಿ ಉಭಯ ತಂಡಗಳಿಗೆ ಗೋಲು ಬಾರಿಸಲು ಹಲವು ಅವಕಾಶ ದೊರೆತರೂ ಸದುಪಯೋಗವಾಗಲಿಲ್ಲ. ತಡೆಗೋಡೆಯಂತೆ ನಿಂತ ಪಿ.ಆರ್​.ಶ್ರೀಜೇಶ್!​ ದ್ವಿತೀಯ ಕ್ವಾರ್ಟರ್​ನಲ್ಲಿ ಭಾರತ ಮೊದಲ ಗೋಲು ಬಾರಿಸುವಲ್ಲಿ ಯಶಸ್ಸು ಕಂಡಿತು. ನಾಯಕ ಹರ್ಮನ್‌ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರು. ದ್ವಿತೀಯ ಕ್ವಾರ್ಟರ್​ ಮುಕ್ತಾಯ ಕಾಣಲು ಕೆಲವೇ ನಿಮಿಷ ಬಾಕಿ ಇರುವಾಗ ಲೀ ಮಾರ್ಟನ್ ಗೋಲು ಬಾರಿಸಿ ಪಂದ್ಯವನ್ನು 1-1 ಸಮಬಲಕ್ಕೆ ತಂದರು. 3ನೇ ಕ್ವಾರ್ಟರ್​ ಮುಕ್ತಾಯಕ್ಕೆ 4 ನಿಮಿಷವಿರುವಾಗ​ ಬ್ರಿಟನ್​ಗೆ ಪೆನಾಲ್ಟಿ ಕಾರ್ನರ್​​ ಅವಕಾಶ ಸಿಕ್ಕರೂ ಗೋಲಾಗಿ ಪರಿವರ್ತಿಸುವಲ್ಲಿ ವಿಫಲವಾಯಿತು. ಗೋಲ್​ ಕೀಪರ್​ ಪಿ.ಆರ್​.ಶ್ರೀಜೇಶ್​ ತಡೆಗೋಡೆಯಂತೆ ನಿಂತು ಹಲವಾರು ಗೋಲುಗಳನ್ನು ತಡೆದ ಪರಿಣಾಮ ಫಲಿತಾಂಶ ಭಾರತದ ಪರವಾಗಲು ಸಾಧ್ಯವಾಯಿತು. ಪೆನಾಲ್ಟಿ ಶೂಟೌಟ್​ನಲ್ಲಿಯೂ ಸಹ ಗೋಲುಗಳನ್ನು ತಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇದನ್ನೂ ಓದಿ: 3ನೇ​ನಲ್ಲಿಯೂ ಉಭಯ ತಂಡಗಳ ರಕ್ಷಣಾತ್ಮಕ ಆಟದಿಂದ ಗೋಲು ದಾಖಲಾಗಲಿಲ್ಲ. ೪ನೇ ಹಾಗೂ ಅಂತಿಮ ಕ್ವಾರ್ಟರ್​ನಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಂಡು ಬಂದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. 1-1 ಗೋಲುಗಳಿಂದ ಪಂದ್ಯ ಟೈ ಆಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...