ಮುಂಬೈ ಇಂಡಿಯನ್ಸ್‌ʼನಿಂದ ಹೊರಬರ್ತಿದ್ದಾರೆ ಹಾರ್ದಿಕ್‌ ಪಾಂಡ್ಯ!? ಒಂದೇ ವರ್ಷಕ್ಕೆ ಸಾಕಾಯ್ತಾ ಸಹವಾಸ! ಕೆಲ ದಿನಗಳ ಹಿಂದೆ ಬಿಸಿಸಿಐನ ವಾಂಖೆಡೆ ಕಚೇರಿಯಲ್ಲಿ ಐಪಿಎಲ್ ಅಧಿಕಾರಿಗಳು ಮತ್ತು ತಂಡದ ಮಾಲೀಕರ ನಡುವೆ ಸಭೆ ನಡೆದಿತ್ತು. ಈ ಸಭೆಗೆ ಕೆಲವು ತಂಡಗಳ ಮಾಲೀಕರು ಹಾಜರಿದ್ದರು. ಇನ್ನು ಈ ಸಭೆಯಲ್ಲಿ ಹಲವು ಅಚ್ಚರಿಯ ಸುದ್ದಿಗಳೂ ಹೊರಬಿದ್ದಿವೆ. ಇವೆಲ್ಲದರ ನಡುವೆ ಮತ್ತೊಂದು ದೊಡ್ಡ ಸುದ್ದಿ ಬಂದಿದ್ದು, ಮುಂಬೈ ಇಂಡಿಯನ್ಸ್ʼನಿಂದ ಪ್ರಮುಖ ಆಟಗಾರರು ರಿಲೀಸ್‌ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. 2025 :ಕೆಲ ದಿನಗಳ ಹಿಂದೆ ಬಿಸಿಸಿಐನ ವಾಂಖೆಡೆ ಕಚೇರಿಯಲ್ಲಿ ಐಪಿಎಲ್ ಅಧಿಕಾರಿಗಳು ಮತ್ತು ತಂಡದ ಮಾಲೀಕರ ನಡುವೆ ಸಭೆ ನಡೆದಿತ್ತು. ಈ ಸಭೆಗೆ ಕೆಲವು ತಂಡಗಳ ಮಾಲೀಕರು ಹಾಜರಿದ್ದರು. ಇನ್ನು ಈ ಸಭೆಯಲ್ಲಿ ಹಲವು ಅಚ್ಚರಿಯ ಸುದ್ದಿಗಳೂ ಹೊರಬಿದ್ದಿವೆ. ಇವೆಲ್ಲದರ ನಡುವೆ ಮತ್ತೊಂದು ದೊಡ್ಡ ಸುದ್ದಿ ಬಂದಿದ್ದು, ಮುಂಬೈ ಇಂಡಿಯನ್ಸ್ʼನಿಂದ ಪ್ರಮುಖ ಆಟಗಾರರು ರಿಲೀಸ್‌ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ವರದಿಗಳ ಪ್ರಕಾರ, ಮುಂಬೈ ಇಂಡಿಯನ್ಸ್ ತಮ್ಮ ನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ರಿಲೀಸ್‌ ಮಾಡಲಿದೆ. ಮುಂಬೈ ಇಂಡಿಯನ್ಸ್ ಐಪಿಎಲ್ 2024 ರ ಮೊದಲು ಹಾರ್ದಿಕ್ ಪಾಂಡ್ಯ ಅವರನ್ನು ಮತ್ತೆ ತಮ್ಮ ತಂಡಕ್ಕೆ ಸೇರಿಸಿತ್ತು. ಅಲ್ಲದೆ, ಫ್ರಾಂಚೈಸಿ ರೋಹಿತ್ ಶರ್ಮಾ ಅವರಿಂದ ನಾಯಕತ್ವವನ್ನು ಹಿಂಪಡೆದು ಈ ಸ್ಟಾರ್ ಆಲ್ ರೌಂಡರ್ʼಗೆ ನೀಡಿತ್ತು. ಆದರೂ, ತಂಡ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದೀಗ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಂದಿದೆ. ಐಪಿಎಲ್ ನಿಯಮಗಳ ಪ್ರಕಾರ, ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತದೆ. ಈ ಬಾರಿ ಡಿಸೆಂಬರ್ʼನಲ್ಲಿ ಮತ್ತೆ ಮೆಗಾ ಹರಾಜು ನಡೆಯಲಿದೆ. ಎಲ್ಲಾ 10 ತಂಡಗಳು ತಲಾ ನಾಲ್ಕು ಆಟಗಾರರನ್ನು ಮಾತ್ರ ಉಳಿಸಿಕೊಳ್ಳುವ ಅವಕಾಶ ಹೊಂದಿರುತ್ತದೆ. ಮೂಲಗಳ ಪ್ರಕಾರ, ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಇರಿಸಿಕೊಳ್ಳಲು ಬಯಸಿದೆ. ಹೀಗಿರುವಾಗ ಹಾರ್ದಿಕ್ ಪಾಂಡ್ಯ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಮುಂಬೈ ಇಂಡಿಯನ್ಸ್ ಐಪಿಎಲ್ 2025 ಕ್ಕೆ ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ತಿಲಕ್ ವರ್ಮಾ ಅವರನ್ನು ಉಳಿಸಿಕೊಳ್ಳಬಹುದು ಎಂದು ವರದಿಯಲ್ಲಿ ಹೇಳಲಾಗುತ್ತಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...