ಲಂಕಾ ವಿರುದ್ಧದ 2ನೇ ಏಕದಿನದಲ್ಲಿ ಪ್ರಮುಖ ಬದಲಾವಣೆ... ಟೀಂ ಇಂಡಿಯಾದಿಂದ ಆ ಆಟಗಾರ ಔಟ್! ಬದಲಿ ಅವಕಾಶ ಈತನ ಪಾಲು : ಟೀಂ ಇಂಡಿಯಾ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿರುವ ರೀತಿ ನೋಡಿದರೆ ಎರಡನೇ ಪಂದ್ಯದಲ್ಲಿ ಕೆಲ ಆಟಗಾರರ ಅವಕಾಶ ಕೈ ತಪ್ಪುವುದು ಖಚಿತ ಎನಿಸುತ್ತಿದೆ. ಇದರ ಜೊತೆಗೆ ಎರಡನೇ ಏಕದಿನ ಪಂದ್ಯಕ್ಕೆ ವಿಶೇಷ ಆಟಗಾರನನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. :ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕವಾಗಿ ನಡೆದಿದ್ದು, ಡ್ರಾಗೊಂಡಿತ್ತು. ಶ್ರೀಲಂಕಾ ಭಾರತಕ್ಕೆ 231 ರನ್ ಗುರಿ ನೀಡಿತ್ತು. ಆದರೆ ಭಾರತದ ಬ್ಯಾಟ್ಸ್‌ಮನ್‌ʼಗಳ ಕಳಪೆ ಬ್ಯಾಟಿಂಗ್‌ನಿಂದ ಪಂದ್ಯ ಟೈ ಆಗಿತ್ತು. ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಸತತ ಎಸೆತಗಳಲ್ಲಿ ಕೊನೆಯ ಎರಡು ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾವನ್ನು 230 ರನ್ʼಗಳಿಗೆ ಸೀಮಿತಗೊಳಿಸಿದರು. ಇದನ್ನೂ ಓದಿ: ಈ ಪಂದ್ಯದಲ್ಲಿ ಟೀಂ ಇಂಡಿಯಾ ಸಿಕ್ಕ ಅವಕಾಶಗಳನ್ನು ಕೈಚೆಲ್ಲಿರುವ ರೀತಿ ನೋಡಿದರೆ ಎರಡನೇ ಪಂದ್ಯದಲ್ಲಿ ಕೆಲ ಆಟಗಾರರ ಅವಕಾಶ ಕೈ ತಪ್ಪುವುದು ಖಚಿತ ಎನಿಸುತ್ತಿದೆ. ಇದರ ಜೊತೆಗೆ ಎರಡನೇ ಏಕದಿನ ಪಂದ್ಯಕ್ಕೆ ವಿಶೇಷ ಆಟಗಾರನನ್ನು ಸೇರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ರಿಯಾನ್ ಪರಾಗ್‌ʼಗೆ ಅವಕಾಶ ಸಿಗುವ ಸಾಧ್ಯತೆ ಇದೆ. ವಾಷಿಂಗ್ಟನ್ ಸುಂದರ್ ಅವರನ್ನು ಕೈಬಿಡುವ ಮೂಲಕ ರಿಯಾನ್ ಪರಾಗ್ ಪ್ಲೇಯಿಂಗ್ ಹನ್ನೊಂದರಲ್ಲಿ ಸ್ಥಾನ ಪಡೆಯಬಹುದು. ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಾಷಿಂಗ್ಟನ್ ಸುಂದರ್ ಕೇವಲ 1 ವಿಕೆಟ್ ಪಡೆದಿದ್ದರು. ಬಳಿಕ ಬ್ಯಾಟಿಂಗ್‌ʼನಲ್ಲಿ ಕೇವಲ 5 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದನ್ನೂ ಓದಿ: ಮೊದಲ ಏಕದಿನ ಪಂದ್ಯ ಟೈ ಆಗಿದ್ದರಿಂದ ಮುಂದಿನ 2 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲ್ಲಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...