‌ : ಪ್ಯಾರಿಸ್ ಸೋಲಿನ ನಂತರ ಪಿವಿ ಸಿಂಧು ನಿವೃತ್ತಿ? ಹೊರಬಿತ್ತು ಬಿಗ್‌ ಅಪ್‌ಡೇಟ್!! : ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನಿರೀಕ್ಷಿತ ಯಶಸ್ಸು ದೊರಕಲಿಲ್ಲ.. ಮಹಿಳೆಯರ ಸಿಂಗಲ್ಸ್‌ನಲ್ಲಿ 16 ರ ಸುತ್ತಿನಲ್ಲಿ ಸೋಲುವುದರರೊಂದಿಗೆ ಅವರ ಪ್ರಯಾಣ ಕೊನೆಗೊಂಡಿತು. : ಪಿವಿ ಸಿಂಧುಗೆ ಪ್ಯಾರಿಸ್ ಒಲಿಂಪಿಕ್ಸ್ ದುಃಸ್ವಪ್ನ ಎಂದರೇ ತಪ್ಪಾಗಲಾರದು.. ಭಾರತದ ಸ್ಟಾರ್ ಷಟ್ಲರ್ ಪ್ರೀ ಕ್ವಾರ್ಟರ್ ಫೈನಲ್‌ನಿಂದ ಅಂದರೆ ಬ್ಯಾಡ್ಮಿಂಟನ್ ಮಹಿಳೆಯರ ಸಿಂಗಲ್ಸ್‌ನ 16 ರ ಸುತ್ತಿನಿಂದ ಹೊರಗುಳಿಯಬೇಕಾಯಿತು. 16ರ ಸುತ್ತಿನಲ್ಲಿ ಚೀನಾದ ಬಿಂಗ್ ಜಿಯಾವೊ ವಿರುದ್ಧ ಸಿಂಧು ಸೋಲನುಭವಿಸಬೇಕಾಯಿತು. ಸೋಲಿನ ನಂತರ ಸಿಂಧು ತಮ್ಮ ನಿವೃತ್ತಿಯ ಬಗ್ಗೆ ದೊಡ್ಡ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ- 16ರ ಸುತ್ತಿನ ಪಂದ್ಯದಲ್ಲಿ ಪಿವಿ ಸಿಂಧು ಚೀನಾದ ಬಿಂಗ್ ಜಿಯಾವೊ ವಿರುದ್ಧ 21-19, 21-14 ಅಂತರದಲ್ಲಿ ಸೋಲು ಅನುಭವಿಸಬೇಕಾಯಿತು. ಈ ಸೋಲಿನೊಂದಿಗೆ ಸಿಂಧು ಅವರ ಸತತ ಮೂರನೇ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ. ಸೋಲಿನೊಂದಿಗೆ ಸಿಂಧು ಪ್ರಯಾಣ ಅಂತ್ಯಗೊಂಡಿದೆ. ಸೋಲಿನ ನಂತರ 2028ರಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದ ಕುರಿತು ಮಾತನಾಡಿ ಅವರು "ಮುಂದಿನ ಒಲಿಂಪಿಕ್ಸ್ ವರೆಗೂ ನಾಲ್ಕು ಸ್ವಲ್ಪ ವಿಶ್ರಾಂತಿ ಪಡೆಯುತ್ತೇನೆ. ನಾನು ವಿರಾಮ ತೆಗೆದುಕೊಂಡ ನಂತರ ಏನಾಗುತ್ತದೆ ಎಂದು ನೋಡುತ್ತೇನೆ.. ನಾನು ನಿರೀಕ್ಷಿಸಿದ್ದು ಬೇ ಆಗಿದ್ದೆ ಬೇರೆ.. ಆದರೆ ಇದು ಒಂದು ಪ್ರಯಾಣ.. ನಾನು ನನ್ನ ತಪ್ಪುಗಳನ್ನು ನಿಯಂತ್ರಿಸಿಕೊಂಡು.. ಅದನ್ನು ಗೆಲುವನ್ನಾಗಿ ಪರಿವರ್ತಿಸಲು ಸಾಧ್ಯವಾಗದಿರುವುದು ವಿಷಾದದ ಸಂಗತಿ" ಎಂದು ಪಿ ವಿ ಸಿಂಧು ಹೇಳಿದ್ದಾರೆ.. ಇದನ್ನೂ ಓದಿ- ಇನ್ನು ಪಿವಿ ಸಿಂಧು ಕಳೆದ ಎರಡು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿದ್ದರು. 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ಶಟ್ಲರ್ ಬೆಳ್ಳಿ ಪದಕ ಗೆದ್ದಿದ್ದರು. ಇದಲ್ಲದೇ 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಿಂಧು ಕಂಚಿನ ಪದಕ ಗೆದ್ದಿದ್ದರು. ಈ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಆಕೆಗೆ ಯಾವುದೇ ಪದಕ ಸಿಗಲಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...