: ಮೊದಲ ಏಕದಿನ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯ: ಲಂಕಾ ವಿರುದ್ಧ ಗೆಲುವಿನ ಹೊಸ್ತಿಲಲ್ಲಿ ಎಡವಿದ ಟೀಂ ಇಂಡಿಯಾ 1st : ನಾಯಕ ರೋಹಿತ್ ಶರ್ಮಾ 58 ರನ್ʼಗಳ ಪ್ರಬಲ ಇನಿಂಗ್ಸ್ ಆಡಿದರು. ಕೊನೆಗೂ 5 ವರ್ಷಗಳ ಬಳಿಕ ಏಕದಿನಕ್ಕೆ ಕಮ್ ಬ್ಯಾಕ್ ಮಾಡುತ್ತಿರುವ ಶಿವಂ ದುಬೆ ಗಂಭೀರ್ ನಿರೀಕ್ಷೆಗೆ ತಕ್ಕಂತೆ ಆಡಿದ್ದು ಸುಳ್ಳಲ್ಲ. ಇನ್ನೊಂದೆಡೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮ ಹಂತದಲ್ಲಿ ಎಡವಿದ್ದು, ಡ್ರಾನಲ್ಲಿ ಅಂತ್ಯಗೊಂಡಿದೆ. 1st :ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾಗೆ ಲಂಕಾ ಭಾರೀ ಪೈಪೋಟಿ ನೀಡಿತ್ತು. ಆತಿಥೇಯ ತಂಡದ ಅದ್ಭುತ ಬೌಲಿಂಗ್‌ʼಗೆ ಭಾರತದ ಬ್ಯಾಟ್ಸ್‌ಮನ್‌ʼಗಳು ಶರಣಾಗಿದ್ದರು. ನಾಯಕ ರೋಹಿತ್ ಶರ್ಮಾ 58 ರನ್ʼಗಳ ಪ್ರಬಲ ಇನಿಂಗ್ಸ್ ಆಡಿದರು. ಕೊನೆಗೂ 5 ವರ್ಷಗಳ ಬಳಿಕ ಏಕದಿನಕ್ಕೆ ಕಮ್ ಬ್ಯಾಕ್ ಮಾಡುತ್ತಿರುವ ಶಿವಂ ದುಬೆ ಗಂಭೀರ್ ನಿರೀಕ್ಷೆಗೆ ತಕ್ಕಂತೆ ಆಡಿದ್ದು ಸುಳ್ಳಲ್ಲ. ಇನ್ನೊಂದೆಡೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ಅಂತಿಮ ಹಂತದಲ್ಲಿ ಎಡವಿದ್ದು, ಡ್ರಾನಲ್ಲಿ ಅಂತ್ಯಗೊಂಡಿದೆ. ಇನ್ನುಳಿದಂತೆ ಮುಂದಿನ ಪಂದ್ಯ ಎರಡೂ ತಂಡಗಳಿಗೆ ಮಾಡು ಇಲ್ಲವೇ ಮಡಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಈ ಪಂದ್ಯದಲ್ಲಿ ಶ್ರೀಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಪಾಥುಮ್ ನಿಸ್ಸಾಂಕ ತಮ್ಮ ತಂಡಕ್ಕೆ ಬ್ಯಾಟಿಂಗ್‌ʼನಲ್ಲಿ 56 ರನ್‌ಗಳ ಇನಿಂಗ್ಸ್‌ ಆಡಿ ಅತ್ಯುತ್ತಮ ಆರಂಭ ನೀಡಿದರು. ಆದರೆ ಇದಾದ ಬಳಿಕ ಮಧ್ಯಮ ಕ್ರಮಾಂಕದ ಯಾವೊಬ್ಬ ಬ್ಯಾಟ್ಸ್‌ಮನ್‌ʼಗೂ ಕ್ರೀಸ್‌ನಲ್ಲಿ ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ. 7ನೇ ಕ್ರಮಾಂಕದ ಬ್ಯಾಟ್ಸ್‌ಮನ್ ದುನಿತ್ ವೆಳ್ಳಾಲಗೆ ತಂಡದ ಟ್ರಬಲ್‌ಶೂಟರ್ ಎಂಬುದನ್ನು ಸಾಬೀತುಪಡಿಸಿದರು. 67 ರನ್‌ʼಗಳ ಪ್ರಬಲ ಇನ್ನಿಂಗ್ಸ್ ಆಡಿದ ಅವರು, ತಮ್ಮ ತಂಡವನ್ನು 230 ಸ್ಕೋರ್‌ʼಗೆ ಕೊಂಡೊಯ್ದರು. ನಾಯಕ ರೋಹಿತ್ ಎಂದಿನಂತೆ ಲಂಕಾ ಬೌಲರ್ಗಳ ಮೇಲೆ ಪ್ರಾಬಲ್ಯ ಮೆರೆದರು. 47 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿ ಒಳಗೊಂಡ 58 ರನ್ ಗಳಿಸಿದರು. ಆದರೆ ಇನ್ನೊಂದು ತುದಿಯಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ದುರ್ಬಲವಾಗಿ ಕಾಣುತ್ತಿತ್ತು. ವಿರಾಟ್ ಕೊಹ್ಲಿ ಕೂಡ 24 ರನ್ ಗಳಿಸಿ ಔಟಾದರು. ಕೆಎಲ್ ರಾಹುಲ್ 43 ಎಸೆತಗಳಲ್ಲಿ 31 ರನ್‌ʼಗಳ ಅತ್ಯಂತ ನಿಧಾನಗತಿಯ ಇನ್ನಿಂಗ್ಸ್ ಆಡಿದರು. ಅಕ್ಷರ್ ಪಟೇಲ್ ಕೂಡ 33 ರನ್ ಗಳಿಸಲು 57 ಎಸೆತಗಳನ್ನು ತೆಗೆದುಕೊಂಡು ನಂತರ ಔಟಾದರು. ಇದನ್ನೂ ಓದಿ: ಟೀಂ ಇಂಡಿಯಾ ಗೆಲುವಿಗೆ 20 ರನ್ ಅಗತ್ಯವಿದ್ದಾಗ ಕುಲದೀಪ್ ಯಾದವ್ 8ನೇ ವಿಕೆಟ್ ಆಗಿ ವಿಕೆಟ್ ಕಳೆದುಕೊಂಡರು. ಆದರೆ ಶಿವಂ ದುಬೆ ಸಿಕ್ಸರ್ ಪಂದ್ಯಕ್ಕೆ ಜೀವ ತುಂಬಿತ್ತು. ದುಬೆ 2 ಸಿಕ್ಸರ್ ಮತ್ತು 1 ಬೌಂಡರಿ ನೆರವಿನಿಂದ 25 ರನ್ ಗಳಿಸಿ ಪಂದ್ಯವನ್ನು ಟೈ ಮಾಡಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...