ಮನು ಭಾಕರ್ ಒಲಂಪಿಕ್ಸ್ ನಲ್ಲಿ ಪದಕ ಗೆಲ್ಲುತ್ತಿದ್ದಂತೆ ಅವರ ಬ್ರ್ಯಾಂಡ್ ಮೌಲ್ಯ ಹೆಚ್ಚಾಗಿದ್ದೆಷ್ಟು ಗೊತ್ತೇ? ಈಗಾಗಲೇ ಸುಮಾರು 40ಕ್ಕೂ ಅಧಿಕ ಕಂಪನಿಗಳು ಮನು ಭಾಕರ್ ಅವರನ್ನು ಸಂಪರ್ಕಿಸಿದ್ದು, ಈ ಮೊದಲು ತಮ್ಮ ಅನುಮೋದನೆಗಾಗಿ 20-25 ಲಕ್ಷ ರೂ ಚಾರ್ಜ್ ಮಾಡುತ್ತಿದ್ದ ಅವರು ಈಗ ಅವರ ಏಜೆನ್ಸಿ ಹೇಳುವಂತೆ ಅವರ ಶುಲ್ಕವು ಆರರಿಂದ ಏಳುಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ. ನವದೆಹಲಿ:ಭಾರತದ ಖ್ಯಾತ ಶೂಟರ್ ಮನು ಭಾಕರ್ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುತ್ತಿದ್ದಂತೆ ಅವರ ಬ್ರ್ಯಾಂಡ್ ಮೌಲ್ಯ ಕೂಡ ದ್ವಿಗುಣಗೊಂಡಿದೆ. ಇದನ್ನೂ ಓದಿ: ಈಗಾಗಲೇ ಸುಮಾರು 40ಕ್ಕೂ ಅಧಿಕ ಕಂಪನಿಗಳು ಮನು ಭಾಕರ್ ಅವರನ್ನು ಸಂಪರ್ಕಿಸಿದ್ದು, ಈ ಮೊದಲು ತಮ್ಮ ಅನುಮೋದನೆಗಾಗಿ 20-25 ಲಕ್ಷ ರೂ ಚಾರ್ಜ್ ಮಾಡುತ್ತಿದ್ದ ಅವರು ಈಗ ಅವರ ಏಜೆನ್ಸಿ ಹೇಳುವಂತೆ ಅವರ ಶುಲ್ಕವು ಆರರಿಂದ ಏಳುಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.ಈ ಕುರಿತಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ತಂಡವು "ಕಳೆದ 2-3 ದಿನಗಳಲ್ಲಿ ನಾವು ಸುಮಾರು 40 ಕ್ಕೂ ಅಧಿಕ ವಿಚಾರಣೆಗಳನ್ನು ಪಡೆದುಕೊಂಡಿದ್ದೇವೆ.ನಾವು ಇದೀಗ ದೀರ್ಘಾವಧಿಯ ಅಸೋಸಿಯೇಷನ್ ​​​​ಡೀಲ್‌ಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ' ಎಂದು ನೀರವ್ ತೋಮರ್ ಹೇಳಿದ್ದಾರೆ. ಇದನ್ನೂ ಓದಿ: ಇನ್ನು ಮುಂದುವರೆದು ಮಾತನಾಡಿದ ಅವರು 'ಅವಳ ಬ್ರಾಂಡ್ ಮೌಲ್ಯವು ಸಹಜವಾಗಿ, ಐದರಿಂದ ಆರು ಪಟ್ಟು ಹೆಚ್ಚಾಗಿದೆ.ಆದ್ದರಿಂದ ನಾವು ಮೊದಲು ಮಾಡುತ್ತಿರುವುದು 20-25 ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿತ್ತು, ಈಗ ಅದು ಒಂದು ಒಪ್ಪಂದಕ್ಕೆ ಸುಮಾರು 1.5 ಕೋಟಿ ರೂಪಾಯಿಗೆ ತಲುಪಿದೆ.1 ತಿಂಗಳು, 3 ತಿಂಗಳುಗಳ ಕಡಿಮೆ ಅವಧಿಯ ಬಹಳಷ್ಟು ಡಿಜಿಟಲ್-ಎಂಗೇಜ್‌ಮೆಂಟ್ ಗಳು ಸಹ ಇವೆ.ಆದರೆ ನಾವು ದೀರ್ಘಾವಧಿಯ ವ್ಯವಹಾರಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ 'ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...